ಹೈದರಾಬಾದ್​:ಭಗವಾನ್​ ಶ್ರೀಕೃಷ್ಣನ ಸಂದೇಶವಾದ ಭಗವದ್ಗೀತೆಯನ್ನು ನಾನಾ ಭಾಷೆಗಳಲ್ಲಿ, ನಾನಾ ರೀತಿಯಲ್ಲಿ ಪ್ರಕಟಿಸಲಾಗಿದೆ. ಈಗ ಈ ಮಹಾನ್​ ಗ್ರಂಥ ಮತ್ತೊಂದು ವಿಭಿನ್ನ ಶೈಲಿಯಲ್ಲಿ, ಹುಬ್ಬೇರಿಸಿ ನೋಡುವಂಥ ರೀತಿಯಲ್ಲಿ ಮೂಡಿಬಂದಿದೆ.
ಅದೇನೆಂದರೆ ಹೈದರಾಬಾದ್​ನ ಕಾನೂನು ವಿದ್ಯಾರ್ಥಿನಿ ರಾಮಗಿರಿ ಸ್ವರಿಕಾ ಎಂಬಾಕೆ 4,042 ಅಕ್ಕಿಕಾಳುಗಳ ಮೇಲೆ ಭಗವದ್ಗೀತೆಯ ಶ್ಲೋಕಗಳನ್ನು ಬರೆದಿದ್ದಾರೆ. ಈ ಅದ್ಭುತವಾದ ಕಾರ್ಯಕ್ಕೆ ಅವರು 150 ಗಂಟೆಗಳ ಪರಿಶ್ರಮ ಪಟ್ಟಿದ್ದು, ಇದು ತಾವು ರಚಿಸಿರುವ 2 ಸಾವಿರ ಕಲಾಕೃತಿಗಳ ಪೈಕಿ ಅತ್ಯಂತ ವಿಶಿಷ್ಟವಾದದ್ದು ಎಂದು ಹೇಳಿಕೊಂಡಿದ್ದಾರೆ.

ದೇಶದ ಪ್ರಪ್ರಥಮ ಮಹಿಳಾ ಮೈಕ್ರೋ ಆರ್ಟಿಸ್ಟ್ ಎಂದು ಹೇಳಿಕೊಳ್ಳುವ ಇವರು, ನಾಲ್ಕು ವರ್ಷಗಳಿಂದ ಅತಿಚಿಕ್ಕ ವಸ್ತುಗಳ ಮೇಲೆ ಸೂಕ್ಷ್ಮವಾದ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಅಕ್ಕಿಕಾಳಿನ ಮೇಲೆ ಗಣೇಶನನ್ನು ಚಿತ್ರಿಸುವ ಮೂಲಕ ತಮ್ಮ ಈ ಮೈಕ್ರೋ ಆರ್ಟ್ ಆರಂಭಿಸಿದ ಇವರು, ಬಳಿಕ ಒಂದೇ ಅಕ್ಕಿಕಾಳಿನ ಮೇಲೆ ಇಂಗ್ಲಿಷ್​ ಅಲ್ಫಾಬೆಟ್​ಗಳನ್ನು ಚಿತ್ರಿಸಿದ್ದಾರೆ. ಚಿಕ್ಕಂದಿನಿಂದಲೂ ಕಲೆ ಹಾಗೂ ಸಂಗೀತದಲ್ಲಿ ಆಸಕ್ತಿ ಇರುವ ಇವರು ಹಾಲು-ಪೇಪರ್​ಗಳನ್ನು ಬಳಸಿಕೊಂಡೂ ಕಲೆಗಳನ್ನು ಮೂಡಿಸಬಲ್ಲವರಾಗಿದ್ದಾರೆ.

ಈ ಹಿಂದೆ ಸಂವಿಧಾನದ ಪೀಠಿಕೆಯನ್ನು ಕೂದಲೆಳೆಯ ಮೇಲೆ ಬರೆದಿದ್ದ ಇವರು, ಅದಕ್ಕಾಗಿ ತೆಲಂಗಾಣದ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್​ ಅವರಿಂದ ಸನ್ಮಾನಕ್ಕೂ ಪಾತ್ರರಾಗಿದ್ದರು. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಈಕೆ ತಮ್ಮ ಕಲೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವ ಗುರಿ ಇರಿಸಿಕೊಂಡಿದ್ದಾರೆ. (ಏಜೆನ್ಸೀಸ್​)
Telangana: A law student & a micro artist in Hyderabad has written 'Bhagavad Gita' on 4,042 rice grains.
Ramagiri Swarika, artist says, "It took me 150 hrs to complete this. I've created over 2,000 micro artworks. I also do milk art, paper carving, drawing on sesame seeds etc."pic.twitter.com/KYYVRVsDks
— ANI (@ANI)October 19, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
