ನವದೆಹಲಿ:ಒಂದಲ್ಲ ಒಂದು ಕಾರಣಕ್ಕೆ ಅಥವಾ ಬೇಡಿಕೆಗೆ ಆಗ್ರಹಿಸಿ ರಾಜ್ಯ ಬಂದ್ ಇಲ್ಲವೇ ದೇಶ ಬಂದ್​ನಂಥ ಕರೆಗಳು ಆಗಾಗ ಮೊಳಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಕರೆ ಇದೀಗ ಕೇಳಿ ಬಂದಿದ್ದು, ನಾಳೆ ಭಾರತ್ ಬಂದ್​ ಆಗಲಿದೆ ಎನ್ನಲಾಗಿದೆ.
ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ (ಬಿಎಎಂಸಿಇಎಫ್​) ಮೇ 25ರಂದು ಭಾರತ್ ಬಂದ್​ ನಡೆಸಬೇಕು ಎಂದು ಕರೆ ನೀಡಿದೆ. ಕೇಂದ್ರ ಸರ್ಕಾರದ ಕ್ರಮವೊಂದನ್ನು ವಿರೋಧಿಸಿ ಈ ಸಂಘಟನೆ ಭಾರತ್ ಬಂದ್​ಗೆ ಕರೆ ನೀಡಿದೆ.
ಕೇಂದ್ರ ಸರ್ಕಾರ ಇತರ ಹಿಂದುಳಿದ ವರ್ಗಗಳಿಗಾಗಿ ಜಾತಿ ಆಧಾರಿತ ಜನಗಣತಿ ನಡೆಸದೇ ಇರುವುದನ್ನು ವಿರೋಧಿಸಿ ಈ ಸಂಘಟನೆಯವರು ಭಾರತ್ ಬಂದ್​ಗೆ ಕರೆ ನೀಡಿದ್ದಾರೆ. ಇದರೊಂದಿಗೆ ಇನ್ನೂ ಕೆಲವು ಬೇಡಿಕೆಗಳನ್ನು ಸಂಘಟನೆ ಮುಂದಿಟ್ಟಿದೆ.
ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಸ್ಥಗಿತಗೊಳಿಸುವುದು. ಹಳೇ ಪಿಂಚಣಿ ಪದ್ಧತಿಯನ್ನು ಮರುಜಾರಿಗೆ ತರುವುದು. ಲಸಿಕೀಕರಣ ಕಡ್ಡಾಯ ತೆಗೆದುಹಾಕುವುದು ಸೇರಿದಂತೆ ಇತರ ಕೆಲವು ಬೇಡಿಕೆಗಳನ್ನೂ ಇವರು ಪ್ರಸ್ತಾಪಿಸಿ ಭಾರತ್​ ಬಂದ್​​ಗೆ ಕರೆ ನೀಡಿದ್ದಾರೆ.
ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!; ಕರುಳು ಕಾಯಿಲೆ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
