ಮುಂಬೈ:ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಹೋದರ ರಾಹುಲ್ ಗಾಂಧಿ ಜತೆಗೆ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಮುಂಬೈನ ಧಾರಾವಿಗೆ ಆಗಮಿಸಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕವಾದ ದಾದರ್‌ನ ಚೈತ್ಯಭೂಮಿಯಲ್ಲಿ ಯಾತ್ರೆ ಮುಕ್ತಾಯಗೊಳಿಸಿದರು.
ಇದನ್ನೂ ಓದಿ:ದೆಹಲಿ ಮದ್ಯ ನೀತಿ ಹಗರಣ: ಮಾಜಿ ಸಿಎಂ ಕೆಸಿಆರ್ ಪುತ್ರಿ ಕವಿತಾ ಮಾ.23ರ ವರೆಗೆ ಇಡಿ ವಶಕ್ಕೆ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, “ರಾಹುಲ್ ಗಾಂಧಿಯವರ 6,700 ಕಿಮೀ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದಿಗೆ ಕೊನೆಗೊಳ್ಳಲಿದೆ. ಈ ದೇಶದ ಎಲ್ಲಾ ವಾಸ್ತವತೆಯನ್ನು ನಿಮಗೆ ತಿಳಿಸಲು ಈ ಯಾತ್ರೆಯನ್ನು ರಾಹುಲ್ ನಡೆಸಿದರು. ರಾಷ್ಟ್ರದ ವಾಸ್ತವವನ್ನು ಗ್ರಹಿಸುವುದು ಇಂದು ಬಹಳ ಮಹತ್ವದ್ದಾಗಿದೆ. ಜನಜಾಗೃತಿಯ ಮೇಲೆ ತೀವ್ರ ದಾಳಿ ನಡೆಯುತ್ತಿದೆ ಮತ್ತು ಅದರ ಬಗ್ಗೆ ನಿಮಗೆಲ್ಲರಿಗೂ ಅರಿವು ಮೂಡಿಸಲು ರಾಹುಲ್ ಗಾಂಧಿ ಈ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭಿಸಿದರು” ಎಂದರು.
ಜನವರಿ 14ರಂದು ಕಲಹ ಪೀಡಿತ ಮಣಿಪುರದಿಂದ ಪ್ರಾರಂಭವಾದ ಯಾತ್ರೆ ಇದೀಗ 63ನೇ ದಿನದಂದು ಮುಂಬೈಗೆ ಪ್ರವೇಶಿಸಿ, ಥಾಣೆಯಲ್ಲಿ ಅಂತ್ಯಗೊಂಡಿದೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಮತ್ತು ಎಐಸಿಸಿ ರಾಜ್ಯ ಉಸ್ತುವಾರಿ ರಮೇಶ್ ಚೆನ್ನಿತ್ತಲ ತೆರೆದ ಜೀಪಿನಲ್ಲಿ ರಾಹುಲ್​ ಜತೆಗೆ ಆಗಮಿಸಿದರು.
ಇದನ್ನೂ ಓದಿ:ಕೆಲಸದ ಒತ್ತಡ ತಾಳಲಾರದೆ ಯುವ ಪ್ರತಿಭೆ, IIT-IIM ಪದವೀಧರ ಆತ್ಮಹತ್ಯೆ!
ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮುನ್ನಡೆಸಿದ ರಾಹುಲ್ ಗಾಂಧಿ, ಒಟ್ಟು 16 ರಾಜ್ಯಗಳು ಮತ್ತು 110 ಜಿಲ್ಲೆಗಳಲ್ಲಿ ಸಂಚರಿಸಿ ಪ್ರಸ್ತುತ ಮಹಾರಾಷ್ಟ್ರದಲ್ಲಿ ಮುಕ್ತಾಯಗೊಳಿಸಿದರು. ಸಂಪೂರ್ಣ ತೆರೆ ಎಳೆಯಲು ಕಾಂಗ್ರೆಸ್ ಶಿವಾಜಿ ಪಾರ್ಕ್‌ನಲ್ಲಿ ಬೃಹತ್ ರ್ಯಾಲಿಯನ್ನು ನಡೆಸಲು ಕಾಂಗ್ರೆಸ್ ಯೋಜಿಸಿದೆ. ಇಂಡಿಯಾ ಒಕ್ಕೂಟದ ಹಲವಾರು ನಾಯಕರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ,(ಏಜೆನ್ಸೀಸ್).
ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
