ನವದೆಹಲಿ:ದೇಶದ ಹೆಸರನ್ನು ಇಂಡಿಯಾದಿಂದ ಭಾರತ ಎಂದು ಬದಲಿಸುವ ಚರ್ಚೆ ಮತ್ತೆ ಮುನ್ನಲೆ ಬಂದಿದ್ದು, ಇದರ ಬೆನ್ನಲ್ಲೇ ಜಿ-20 ಶೃಂಗಸಭೆಯ ನಾಮಫಲಕದಲ್ಲೂ ಭಾರತ ಎಂದು ಬರೆದಿರುವುದು ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.
ಪ್ರಧಾನಿ ಮೋದಿ ಅವರು ಜಿ20 ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರ ಮುಂದಿದ್ದ ದೇಶದ ನಾಮಫಲಕದಲ್ಲಿ ಇಂಡಿಯಾ ಬದಲು ಭಾರತ ಎಂದು ಬರೆಯಲಾಗಿದೆ. ಇದುವರೆಗೂ ಇಂಡಿಯಾ ಎಂದು ಬರೆಯಲಾಗುತ್ತಿತ್ತು. ಆದರೆ, ಭಾರತ ಎಂಬ ಹೆಸರನ್ನು ಮುಂಚೂಣಿಗೆ ತರಲಾಗುತ್ತಿದ್ದು, ಶೀಘ್ರದಲ್ಲೇ ಇಂಡಿಯಾ ಹೆಸರು ಭಾರತ ಎಂದು ಅಧಿಕೃತಗೊಳ್ಳಲಿದೆ.
ಜಿ-20 ದೇಶದ ನಾಯಕರುಗಳಿಗೆ ಪ್ರೆಸಿಡೆಂಟ್​ ಆಫ್​ ಇಂಡಿಯಾ ಎಂಬ ಹೆಸರಿನ ಬದಲು ಪ್ರೆಸಿಡೆಂಟ್​ ಆಫ್​ ಭಾರತ್ ಹೆಸರಿನಲ್ಲಿ ಕೆಲ ದಿನಗಳ ಹಿಂದೆ ರಾಷ್ಟ್ರಪತಿ ಭವನ ಆಹ್ವಾನ ಪತ್ರಿಕೆಯನ್ನು ಕಳುಹಿಸಿತ್ತು. ಇದರ ಬೆನ್ನಲ್ಲೇ ದೇಶದ ಹೆಸರು ಬದಲಾವಣೆಯ ಚರ್ಚೆ ಆರಂಭವಾಯಿತು. ಈ ಹಿಂದೆ ಯುಪಿಎ ಅಂತಿದ್ದ ವಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಭಾರತದ ಹೆಸರನ್ನು ಬದಲಾಯಿಸಲು ಮುಂದಾಗಿದೆ. ಅದಕ್ಕೆ ಪುಷ್ಠಿ ನೀಡುವಂತಹ ಕೆಲವು ಬೆಳವಣಿಗೆಗಳು ಸಹ ಇದೀಗ ನಡೆಯುತ್ತಿವೆ.
ಇದನ್ನೂ ಓದಿ:ಏಷ್ಯಾಕಪ್​ನಲ್ಲಿ ಇಂದು ಲಂಕಾ-ಬಾಂಗ್ಲಾ ಕಾದಾಟ; ಒತ್ತಡದಲ್ಲಿ ಶಕೀಬ್​ ಪಡೆ; ಶನಕ ಬಳಗಕ್ಕೆ ದಾಖಲೆ ತವಕ
ಸೆ.18ರಿಂದ 5 ದಿನ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಿಪಬ್ಲಿಕ್​ ಆಫ್​ ಭಾರತ್​ ಎಂಬ ಪ್ರಸ್ತಾವ ಸ್ವೀಕಾರ ಸಾಧ್ಯತೆ ಇದೆ. ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಈ ಹೊಸ ಚರ್ಚೆಯ ಬಗ್ಗೆ ಈಗಾಗಲೇ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ದೇಶದ ಹೆಸರನ್ನು ‘ಇಂಡಿಯಾ’ ಬದಲು ಭಾರತ ಎನ್ನಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯು ಭಾರತದ ಪಾಲಿಗೆ ಪ್ರತಿಷ್ಠಿತ ಕಾರ್ಯಕ್ರಮವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಬ್ರಿಟನ್​ ಪ್ರಧಾನಿ ರಿಷಿ ಸುನಕ್​, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜಪಾನ್, ಜರ್ಮನಿ, ಇಟಲಿ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಐರೋಪ್ಯ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾ ಸೇರಿದಂತೆ ವಿಶ್ವದ ನಾಯಕರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಎಲ್ಲ ಗಣ್ಯರಿಗೆ ಸ್ವತಃ ಪ್ರಧಾನಿ ಮೋದಿ ಅವರು ಕೆಂಪು ಹಾಸಿನ ಸ್ವಾಗತ ಕೋರಿದರು.
ಈ ಸಭೆ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕನ್ವೆನ್ಷನ್ ಸೆಂಟರ್‌ನ ಭಾರತ ಮಂಟಪಂನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹವಾಮಾನ ಬದಲಾವಣೆ, ಸಾಲ, ಆಹಾರ ಭದ್ರತೆ, ಸುಸ್ಥಿರತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷದ ಬಗ್ಗೆ ಚರ್ಚೆಗಳಾಗಲಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಥೀಮ್​ನೊಂದಿಗೆ ಭಾರತ ಶೃಂಗಸಭೆಯನ್ನು ಆಯೋಜಿಸಿದೆ.(ಏಜೆನ್ಸೀಸ್​)
ಕೋನಾರ್ಕ್ ಚಕ್ರದ ಮುಂದೆ ನಿಂತು ಜಿ-20 ನಾಯಕರಿಗೆ ನಮೋ ಸ್ವಾಗತ: ಐತಿಹಾಸಿಕ ಚಕ್ರದ ವಿಶೇಷತೆ ಏನು?

VIDEO| ಜಿ-20 ಶೃಂಗಸಭೆಯ ವೇದಿಕೆಗೆ ವಿಶ್ವ ನಾಯಕರ ಎಂಟ್ರಿ ಹೇಗಿದೆ ನೋಡಿ….

ನಿಮ್ಮ ಥೈರಾಯ್ಡ್​ ಗ್ರಂಥಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ನೀವು ಗಮನದಲ್ಲಿಡಬೇಕಾದ ಅಂಶಗಳಿವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + nine =
Remember me
