ನವದೆಹಲಿ:ಮಾಜಿ ಪ್ರಧಾನಿ ದಿ. ಪಿವಿ ನರಸಿಂಹ ರಾವ್​ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿರುವ ಅವರ ಮೊಮ್ಮಗ ಎನ್​.ವಿ. ಸುಭಾಷ್​​ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೊಂದು ಭಾವನಾತ್ಮಕ ಕ್ಷಣವಾಗಿದ್ದು, ಕೇಂದ್ರ ಸರ್ಕಾರ ನಮ್ಮ ತಾತನವರಿಗೆ ಭಾರತ ರತ್ನ ನೀಡಿ ಗೌರವಿಸಿದೆ. ಆದರೆ, ಕಾಂಗ್ರೆಸ್​ನವರ ರೀತಿ ತಮ್ಮ ವೈಫಲ್ಯಗಳಿಗೆ ಬಲಿಪಶುವನ್ನಾಗಿಸಲಿಲ್ಲ ಎಂದು ಕಿಡಿಕಾರಿದ್ದಾರೆ.
#WATCH| BJP leader & grandson of Former Prime Minister PV Narasimha Rao, NV Subhash says, "PM Modi has conferred PV Narasimha Rao though he belongs to the Congress party. Now, I blame the UPA government especially the Gandhi family from 2004 to 2014 when the UPA government was…pic.twitter.com/rSE0lyCRKA
ಇದನ್ನೂ ಓದಿ:ಮುನಿಸು ಮರೆತು ಒಂದಾದ್ರ ವಿಜಯೇಂದ್ರ-ಯತ್ನಾಳ್; ದೆಹಲಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ರೆಬೆಲ್​ ನಾಯಕರು
ಕಾಂಗ್ರೆಸ್‌ ತಮ್ಮ ಪಕ್ಷದ ವೈಫಲ್ಯಗಳಿಗೆ ರಾವ್ ಅವರನ್ನು ಬಲಿಪಶುವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ತಾತನವರು ಕಾಂಗ್ರೆಸ್​ ಪಕ್ಷದಲ್ಲಿ ಇದ್ದರೂ ಸಹ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅವರಿಗೆ ಭಾರತ ರತ್ನ ನೀಡುವ ಮೂಲಕ ಗೌರವಿಸಿದೆ. ಈ ವಿಚಾರದಲ್ಲಿ ನಾನು ಯುಪಿಎ ಹಾಗೂ ಗಾಂಧಿ ಕುಟುಂಬವನ್ನು ಸಂಪೂರ್ಣವಾಗಿ ದೂಷಿಸುತ್ತೇನೆ.
ನರೇಂದ್ರ ಮೋದಿಯವರು ರಾಷ್ಟ್ರೀಯ ನಾಯಕರಾಗಿ ಮತ್ತು ಇಡೀ ಪ್ರಪಂಚದ ನಾಯಕರಾಗಿ, ಇತರ ನಾಯಕರನ್ನು ನಿರಂತರವಾಗಿ ಗುರುತಿಸುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ ಇದು ಹೆಮ್ಮೆ, ಇದು ನಮಗೆ ಗೌರವ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ಭಾವುಕನಾಗಿದ್ದೇನೆ. ಏಕೆಂದರೆ ಭಾರತ ರತ್ನ ಪ್ರಶಸ್ತಿ ವಿಳಂಬವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + sixteen =
Remember me
