ನವದೆಹಲಿ:ರೈತ ಸಂಘಟನೆಗಳ ನೈಜ ಉದ್ದೇಶದ ಪ್ರತಿಭಟನೆಯನ್ನು ನಕ್ಸಲ್ ಹಿತೈಷಿಗಳು ಹೈಜಾಕ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಕೆಲವು ರೈತ ಸಂಘಟನೆಗಳ ಮುಖಂಡರು ಮಾಡಿದ್ದಾರೆ. ಭಾರತೀಯ ಕಿಸಾನ್​ ಯೂನಿಯನ್ ಏಕ್ತಾ ಎಂಬ ಸಂಘಟನೆ ಈ ರೀತಿ ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾಗಿ ಆರೋಪ ಕೇಳಿಬಂದಿದೆ.
ಭಾರತೀಯ ಕಿಸಾನ್​ ಯೂನಿಯನ್ ಏಕ್ತಾ ಸಂಘಟನೆಯವರು ಅನ್​ಲಾಫುಲ್​ ಆ್ಯಕ್ಟಿವಿಟೀಸ್ ಪ್ರಿವೆನ್ಶನ್ ಆ್ಯಕ್ಟ್ ಪ್ರಕಾರ ಬಂಧನಕ್ಕೆ ಒಳಗಾಗಿರುವ ಉಮರ್ ಖಾಲಿದ್​, ಶಾರ್ಜೀಲ್ ಇಮಾಮ್​, ವರವರ ರಾವ್, ಸುಧಾ ಭಾರದ್ವಾಜ್ ಮತ್ತು ಇತರರ ಬಿಡುಗಡೆಗೆ ಆಗ್ರಹಸಿದೆ. ಈ ಬೆಳವಣಿಗೆ ನಿಜವಾದ ರೈತ ಸಂಘಟನೆಗಳ ನಾಯಕರನ್ನು ಮುಜುಗರಕ್ಕೀಡು ಮಾಡಿದ್ದಲ್ಲದೇ, ಸಂಘಟನೆಗಳ ನಾಯಕರ ನಡುವೆ ಒಂದು ರೀತಿಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ನಮ್ಮ ರೈತರು ಮಾನವ ಹಕ್ಕು ಹೋರಾಟಗಾರರ ಅಕ್ರಮ ಬಂಧನವನ್ನೂ ಖಂಡಿಸಿದ್ದಾರೆ- ಪ್ರಶಾಂತ್ ಭೂಷಣ್ !
ರೈತ ಸಂಘಟನೆಯೊಂದರ ನಾಯಕ ರಾಕೇಶ್ ತಿಕೈತ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿಂಘು ಬಾರ್ಡರ್​ಗೆ ತೆರಳಿ ಈ ವಿಚಾರವಾಗಿ ರೈತ ಸಂಘಟನೆಗಳ ಆಂತರಿಕ ಸಭೆ ನಡೆಸಲಿದ್ದೇವೆ. ಅಲ್ಲಿ ಭಾರತೀಯ ಕಿಸಾನ್​ ಯೂನಿಯನ್ ಏಕ್ತಾ ಸದಸ್ಯರು ಶಾರ್ಜೀಲ್ ಇಮಾಮ್, ಉಮರ್ ಖಾಲೀದ್ ಪರ ನಡೆಸಿದ ಪ್ರತಿಭಟನೆಯ ಬಗ್ಗೆ ಚರ್ಚಿಸುತ್ತೇವೆ. ನಾನು ವೈಯಕ್ತಿಕವಾಗಿ ಏಕ್ತಾ ಸಂಘಟನೆಯ ಈ ನಡೆಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ರೈತ ಪ್ರತಿಭಟನೆಯ ವೇದಿಕೆ ಮೇಲೆ ಗೋಚರಿಸಿತು ನಕ್ಸಲ್ ಹಿತೈಷಿಗಳ ಬಿಡುಗಡೆಗೆ ಒತ್ತಾಯಿಸಿದ ಬ್ಯಾಕ್​ಡ್ರಾಪ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
