ಪಟ್ನಾ:ಕಾರ್ಯಕ್ರಮದಲ್ಲಿ ಗಾಯಕಿ ಒಬ್ಬರು ಹಾಡುವ ವೇಳೆ ನಿರೂಪಕರು ಅಡ್ಡಿಪಡಿಸಿ ಮೈಕ್​ ಕಿತ್ತುಕೊಳ್ಳಲು ಮುಂದಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಗೋಪಾಲ್​ಗಂಜ್​ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಥಾವೆ ಉತ್ಸವ 2023ರಲ್ಲಿ ಘಟನೆ ನಡೆದಿದ್ದು ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಗಾಯಕಿ ಪ್ರಿಯಾಂಕ ಸಿಂಗ್​ ಹಾಡು ಹಾಡುವ ವೇಳೆ ನಿರೂಪಕರು ಸಮಯದ ಅಭಾವ ಇದೆ ಎಂದು ಹೇಳಿ ಅಡಿಪಿಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಾಯಕಿ ತಮಗೆ ಎರಡು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡುವಂತೆ ಕೋರಿದರು.
ಇದಕ್ಕೊಪ್ಪದ ನಿರೂಪಕಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಒಬ್ಬರನ್ನು ವೇದಿಕೆ ಮೇಲೆ ಬರುವಂತೆ ಕರೆದರು. ಇದಕ್ಕೆ ತೀವ್ರ ಅಸಮಾಧಾನ ಹಹೊರಹಾಕಿದ ಗಾಯಕಿ ಇದು ಸರಿಯಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ಧಾರೆ.
मैने देखा है कई एंकर को।इस तरह का अपमान करना योग्य नहीं है। ये कौन है महोदया जिन्होंने सिंगर को अपमानित किया?स्टेज आर्टिस्ट भी बहुत मेहनत करते हैं। इन महिला जैसे लोगों को काम नहीं देना चाहिए।pic.twitter.com/iNkMwzqO6Q
ಇದನ್ನೂ ಓದಿ:ಲಕ್ಷ್ಮಣ್​​ ಸವದಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ ಕಾಂಗ್ರೆಸ್ ಮುಖಂಡನ ಈ ಷರತ್ತು
ಅದಾಗ್ಯೂ ಮಾತನಾಡಿದ ಗಾಯಕಿ ಪ್ರಿಯಾಂಕ ತನಗೆ ಹಾಡಲು ಅವಕಾಶ ಇಲ್ಲದೆ ಕುಳಿತಿದ್ದೇನೆ ಎಂದು ಭಾವಿಸಿದ್ದಾರೆ. ಜಿಲ್ಲಾಡಳಿತದ ಅಹ್ವಾನದ ಮೇರೆಗೆ ನಾನು ಬಂದಿದ್ದೇನೆ. ನನಗೆ ಅಪಮಾನ ಮಾಡಿದ್ದಾರೆ ಥಾವೆ ಉತ್ಸವ ತುಂಬಾ ಕೆಟ್ಟ ಅನುಭವವನ್ನು ನೀಡಿದೆ ಎಂದು ಬೇಸರ ಹೊರಹಾಕಿದ್ದಾರೆ.
ಈ ವೇಳೆ ನಿರೂಪಕಿ ರೂಪಮ್​ ತ್ರಿವಿಕ್ರಮ್​ ಗಾಯಕಿಯ ಕೈಯಿಂದ ಮೈಕ್​ ಕಿತ್ತುಕೊಳ್ಳಲು ಯತ್ನಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ನೆಟ್ಟಿಗರು ಕಾರ್ಯಕ್ರಮದ ಆಯೋಜಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಕರೆಸಿ ಕಲಾವಿದರಿಗೆ ಈ ರೀತಿ ಅವಮಾನ ಮಾಡುವುದ ಸರಿಯಲ್ಲ ವೇದಿಕೆಗೆ ತನ್ನದೇ ಆದ ನೀತಿ ನಿಯಮಗಳಿರುತ್ತದೆ ಎಂದು ಸಂಘಟಕರ ವಿರುದ್ಧ ಹೌಹಾರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
