ಗಾಂಧಿನಗರ:ಅಹಮದಾಬಾದ್​ನ ಘಟಲೋದಿಯ ಕ್ಷೇತ್ರದ ಶಾಸಕರಾದ ಭೂಪೇಂದ್ರಭಾಯಿ ಪಟೇಲ್​ ಅವರನ್ನು ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಇಂದು ಗಾಂಧಿನಗರದ ಬಿಜೆಪಿ ಕಾರ್ಯಾಲಯ ‘ಕಮಲಂ’ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶನಿವಾರ ನಿಕಟಪೂರ್ವ ಸಿಎಂ ವಿಜಯ್​ ರೂಪಾನಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಳ ತೆರವಾಗಿತ್ತು. ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯು ಡಿಸೆಂಬರ್​ 2022 ಕ್ಕೆ ನಡೆಯಲಿದ್ದು, 59 ವರ್ಷ ವಯಸ್ಸಿನ ಪಟೇಲ್​ ಅವರಿಗೆ 15 ತಿಂಗಳು ಅಧಿಕಾರ ನಡೆಸುವ ಅವಕಾಶವಿದೆ.
ಆಶ್ಚರ್ಯವೆಂದರೆ ಸಿಎಂ ಗಾದಿಗೆ ಅಭ್ಯರ್ಥಿಗಳೆಂದು ಕೇಳಿಬರುತ್ತಿದ್ದ ಹೆಸರುಗಳನ್ನು ಬಿಟ್ಟು ಪಟೇಲ್​ ಅವರ ಆಯ್ಕೆಯಾಗಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಶಶಿಕಾಂತ್​ ಪಟೇಲ್​ ವಿರುದ್ಧ 1 ಲಕ್ಷ 17 ಸಾವಿರ ಮತಗಳ ದಾಖಲೆ ಅಂತರದಲ್ಲಿ ಗೆದ್ದಿದ್ದ ಭೂಪೇಂದ್ರ ಪಟೇಲ್​ ಅವರು, ಈವರೆಗೆ ಸಚಿವ ಸಂಪುಟದಲ್ಲೂ ಇರಲಿಲ್ಲ.(ಏಜೆನ್ಸೀಸ್)
2 ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಖೋಖೋ ಆಟಗಾರ್ತಿ, ಮಸಣದ ಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
