ಕೊಚ್ಚಿ:ಪ್ರಾಣಿಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಸಿಕ್ಕಾಪಟ್ಟೆ ವೈರಲ್​ ಆಗುತ್ತವೆ. ಅದೇ ಸಾಲಿಗೆ ಇದೀಗ ಆನೆಯ ವಿಡಿಯೋವೊಂದು ಸೇರಿಕೊಂಡಿದೆ.
ಸಣ್ಣ ವಿಡಿಯೋ ತುಣುಕಿನಲ್ಲಿ ಆನೆ ಮತ್ತು ಮಾವುತನ ನಡುವಿನ ಭಾವನಾತ್ಮಕ ಬಂಧವನ್ನು ಕಣ್ತುಂಬಿಕೊಳ್ಳಬಹುದಾಗಿದೆ. kerala_elephants ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಪೊಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆನೆಯು ತನ್ನ ದಣಿದ ಮಾವುತನನ್ನು ಮುದ್ದಿಸುವುದು ಮತ್ತು ಸಂತೈಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಆನೆ ಮತ್ತು ಅದರ ಮಾವುತನ ನಡುವಿನ ಸಂಬಂಧವು ಅನನ್ಯ ಮತ್ತು ಅಮೂಲ್ಯವಾದುದು. ಇಂತಹ ಸಂಬಂಧವನ್ನು ನೈತಿಕ ರೀತಿಯಲ್ಲಿ ಹಾಗೂ ಸರಿಯಾದ ಮಾರ್ಗದಲ್ಲಿ ಪೋಷಿಸಿದಾಗ ಅದು ಗೌರವ ಮತ್ತು ಪ್ರೀತಿಯ ಸಂಬಂಧವಾಗುತ್ತದೆ ಮತ್ತು ಶೀಘ್ರದಲ್ಲೇ ಆಳವಾದ ಬಂಧವಾಗಿ ಬದಲಾಗುತ್ತದೆ ಎಂದು ವಿಡಿಯೋಗೆ ಅಡಿಬರಹವನ್ನು ನೀಡಲಾಗಿದೆ.
ಇದುವರೆಗೂ ಈ ವಿಡಿಯೋಗೆ 37 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ. ವಿಡಿಯೋ ನೋಡಿ ನೆಟ್ಟಿಗರು ಸಹ ಭಾವುಕರಾಗಿ ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಇತ್ತೀಚೆಗೆ ನಾನು ನೋಡಿದ ವಿಡಿಯೋಗಳಲ್ಲಿ ಅದ್ಭುತ ವಿಡಿಯೋ ಎಂದಿದ್ದಾರೆ.
ಆನೆಯ ಭಾವನಾತ್ಮಕ ಭಾಗದ ಆಧಾರದ ಮೇಲೆ ವಿಡಿಯೋ ವೈರಲ್ ಆಗುತ್ತಿದೆಯಾದರೂ, ಇದು ನಿಜವಾಗಿಯೂ ಮಾವುತ ವೀಕ್ಷಿಸುತ್ತಿರುವ ಮೊಬೈಲ್ ಪರದೆಯನ್ನು ಇಣುಕಿ ನೋಡಲು ಆನೆ ಪ್ರಯತ್ನಿಸುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ. ಆದರೆ, ಇದರಲ್ಲಿ ಯಾವುದು ನಿಜ ಎಂದು ನಮಗೆ ಖಚಿತವಿಲ್ಲ. ಆದರೆ ಆನೆಗಳು ವಿಶ್ವದ ಅತ್ಯಂತ ಮುಗ್ಧ ಮತ್ತು ಪ್ರೀತಿಯ ಪ್ರಾಣಿಗಳು ಎಂಬುದು ಸ್ಪಷ್ಟವಾಗಿದೆ. ಅವು ಅತ್ಯಂತ ಮೃದುವಾದ ಹೃದಯವನ್ನು ಹೊಂದಿರುವ ದೊಡ್ಡ ಪ್ರಾಣಿಗಳಾಗಿವೆ.(ಏಜೆನ್ಸೀಸ್​)

A post shared by Kerala Elephants പൂരനായകൻ (@kerala_elephants)

ಲವ್​ ಬ್ರೇಕಪ್​ಗೆ ಒಪ್ಪದ ಪ್ರಿಯಕರನಿಗೆ ವಿಷವುಣಿಸಿದ ಪ್ರೇಯಸಿ! ಸಾಯೋ ಮುನ್ನ ಯುವಕ ಆಡಿದ ಮಾತು ಮನಕಲಕುವಂತಿದೆ

ಮೊರ್ಬಿ ಸೇತುವೆ ಕುಸಿತ ಪ್ರಕರಣ: ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆ, 9 ಜನರ ಬಂಧನ

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ: ಧ್ವಜಾರೋಹಣಕ್ಕೆ ಯತ್ನ, 15 ಕ್ಕೂ ಹೆಚ್ಚು ಮಂದಿ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twelve =
Remember me
