ಮುಂಬೈ:ಇಂದು ಆರಂಭವಾಗಲಿರುವ ಹಿಂದಿ ಬಿಗ್​ ಬಾಸ್​ 15ನೇ ಆವೃತ್ತಿಗಾಗಿ ಜಂಗಲ್​ ಥೀಮ್​​ನ ಸೆಟ್ಟು ತಯಾರಾಗಿದೆ. ಬಿಗ್​ ಬಾಸ್​ ಮನೆಯ ಗಾರ್ಡನ್​ ಪ್ರದೇಶವನ್ನು ಕಾಡಿನಂತೆ ಮಾರ್ಪಡಿಸಲಾಗಿದೆ. ಇದು ಈ ಸೀಸನ್​ನ ಟ್ಯಾಗ್​ಲೈನ್​ ‘ಸಂಕಟ್​ ಇನ್​ ಜಂಗಲ್, ಫೈಲಾಯೆಗಾ ದಂಗಲ್ ಪೆ ದಂಗಲ್’ಗೆ ಅನುರೂಪವಾಗಿದೆ ಎನ್ನಲಾಗಿದೆ.

ಹಸಿರು ಮರಗಿಡಗಳು ತುಂಬಿರುವ ಪ್ರದೇಶವನ್ನು ಬಳ್ಳಿಗಳು ಮತ್ತು ಕ್ಯಾಕ್ಟಸ್​ ಗಿಡಗಳೊಂದಿಗೆ ಅಲಂಕರಿಸಲಾಗಿದೆ. ಒಂದು ಕೊಳವನ್ನು ಸೃಷ್ಟಿಸಿ ಅದರ ಮೇಲೆ ಸಣ್ಣ ಸೇತುವೆ ಕಟ್ಟಿದ್ದಾರೆ. ಜೊತೆಗೆ ಈ ಪ್ರದೇಶದಲ್ಲೇ ಒಂದು ರಹಸ್ಯ ಬಾಗಿಲನ್ನು ಕೂಡ ಮಾಡಲಾಗಿದೆ. ಈ ಸೆಟ್ಟನ್ನು ಒಮಂಗ್​ ಕುಮಾರ್ ಅವರು ಪತ್ನಿ ವನಿತಾರ ಸಹಾಯದೊಂದಿಗೆ ಡಿಸೈನ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಕಿಚನ್, ಬಾತ್​ರೂಂ ಮತ್ತು ಎಂಟ್ರೆನ್ಸ್ ಎಲ್ಲೆಡೆ ಹಸಿರು ಬಳ್ಳಿಗಳು ಮತ್ತು ಹುಲ್ಲು ಆವರಿಸಿರುವುದನ್ನು ನೋಡಬಹುದು. ಜೊತೆಗೆ, ಪ್ರಾಣಿಗಳ ಕಲಾಕೃತಿಗಳು, ಚಿತ್ರಗಳು ಮತ್ತು ಹೂವಿನ ವಾಲ್​ಪೇಪರ್​ಗಳನ್ನು ಕಾಣಬಹುದಾಗಿದೆ. ಸಲ್ಮಾನ್​ ಖಾನ್​ ನಡೆಸಿಕೊಡಲಿರುವ ಈ ಬಿಗ್​ ಬಾಸ್​ ಶೋನ ಪ್ರೀಮಿಯರ್​ಗೆ ಕೆಲವೇ ಗಂಟೆಗಳು ಉಳಿದಿದ್ದು, ನೋಡುಗರಲ್ಲಿ ಕುತೂಹಲ ತುಂಬಿದೆ.(ಏಜೆನ್ಸೀಸ್)
VIDEO| ಅಂಡರ್​ವಾಟರ್​ ಜಾವೆಲಿನ್​! ಚಿನ್ನದ ಹುಡುಗ ನೀರಜ್​ ಚೋಪ್ರಾರ ಈ ವಿಡಿಯೋ ನೋಡಿ

ತಾಲಿಬಾನ್​ ವಾಗ್ವಾದಕ್ಕೆ ಜಿ.ಪರಮೇಶ್ವರ ಅಸಮಾಧಾನ; ಕರ್ನಾಟಕದಲ್ಲಿ ದಲಿತ ಸಿಎಂ ಬಗ್ಗೆ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
