ಮುಂಬೈ :‘ಹಿಂದೂಸ್ತಾನಿ ಭಾವು’ ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 13ನೇ ಆವೃತ್ತಿಯ ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಮುಂಬೈ ನಗರದಲ್ಲಿ ಆ್ಯಂಬುಲೆನ್ಸ್​ ಬಳಸಿಕೊಂಡು ಶಿವಾಜಿ ಪಾರ್ಕ್​ ತಲುಪಿ, ಪ್ರತಿಭಟನೆ ಕೈಗೊಂಡ ಫಾಟಕ್​​ರನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮ ವಿವಾದಾತ್ಮಕ ವಿಡಿಯೋಗಳಿಗೆ ಹೆಸರಾಗಿರುವ ಗಾಯಕ ಫಾಟಕ್​, 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ನಗರದಲ್ಲಿ ಓಡಾಟದ ಮೇಲೆ ನಿರ್ಬಂಧ ಇರುವ ಕಾರಣ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಆ್ಯಂಬುಲೆನ್ಸ್​ ಒಂದನ್ನು ಬುಕ್​ ಮಾಡಿಕೊಂಡು ಶಿವಾಜಿ ಪಾರ್ಕ್​ಗೆ ಪ್ರಯಾಣಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಹೋಟೆಲ್ ಮ್ಯಾನೇಜ್​​ಮೆಂಟ್​ ಪ್ರವೇಶ ಪರೀಕ್ಷೆ ಮುಂದಕ್ಕೆ; ಮೇ 31 ರವರೆಗೆ ಎನ್​ಸಿಹೆಚ್​ಎಂ ಜೆಇಇ ನೋಂದಣಿಗೆ ಅವಕಾಶ
ಸ್ಥಳೀಯ ಪೊಲೀಸ್​ ತಂಡವೊಂದು 12.30ರ ವೇಳೆಗೆ ಫಾಟಕ್​ರನ್ನು ಬಂಧಿಸಿತು. ಅವರ ವಿರುದ್ಧ ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ ಮತ್ತು ಕರೊನಾ ರೋಗ ಹರಡುವ ಅಪಾಯವನ್ನು ಸೃಷ್ಟಿಸಿದ ಆರೋಪಗಳ ಅಡಿಯಲ್ಲಿ ಎಫ್​.ಐ.ಆರ್. ದಾಖಲಿಸಲಾಗಿದೆ.(ಏಜೆನ್ಸೀಸ್)
ವೇಶ್ಯೆಯ ಬರ್ಬರ ಕೊಲೆ : ಪರಾರಿಯಾಗುತ್ತಿದ್ದ ಆರೋಪಿ ಪೊಲೀಸ್​ ವಶಕ್ಕೆ

ಅಸ್ಸಾಂನ ಹೊಸ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವ ಸರ್ಮ ಆಯ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
