ಮುಂಬೈ:ಜಗತ್ತಿನಾದ್ಯಂತ ಒಮಿಕ್ರಾನ್ ಭೀತಿ ಆವರಿಸಿರುವ ಕಾರಣ ಭಾರತೀಯ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರದ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿದೆ. ಒಂದೇ ದಿನ ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ 1,800ಕ್ಕೂ ಹೆಚ್ಚು ಅಂಶ ಕುಸಿದಿದೆ. ಬ್ಯಾಂಕಿಂಗ್, ಮೆಟಲ್, ರಿಯಾಲ್ಟಿ ಸೇರಿ 15 ಸೆಕ್ಟರ್​ಗಳ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿವೆ. ಇನ್ನೊಂದೆಡೆ ಫಾರ್ವ ಕಂಪನಿ ಷೇರುಗಳು ಲಾಭದಲ್ಲಿ ವಹಿವಾಟು ನಡೆಸಿವೆ. ಬಿಎಸ್​ಇ ಪಟ್ಟಿಯಲ್ಲಿರುವ ಒಟ್ಟು ಕಂಪನಿಗಳ ಪೈಕಿ 2,389 ಷೇರುಗಳು ನಷ್ಟ ಅನುಭವಿಸಿದರೆ, 568 ಕಂಪನಿ ಷೇರುಗಳು ಲಾಭದಲ್ಲಿ ವಹಿವಾಟು ಮುಗಿಸಿವೆ.
ಸೆನ್ಸೆಕ್ಸ್ ದಿನದ ಕೊನೆಗೆ 1,189.73 (2.90%) ಅಂಶ ಕುಸಿದು 55,822.01ರಲ್ಲಿ, ನಿಫ್ಟಿ 371 (2.18%) ಅಂಶ ಕುಸಿದು 16,614.20 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಟಾಟಾ ಸ್ಟೀಲ್ ಗರಿಷ್ಠ ಶೇಕಡ 5ಕ್ಕೂ ಹೆಚ್ಚು ಅಂಶ ಕುಸಿದರೆ, ಎಸ್​ಬಿಐ, ಇಂಡಸ್​ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್​ಡಿಎಫ್​ಸಿ ಬ್ಯಾಂಕ್, ಎನ್​ಟಿಪಿಸಿ ಷೇರು ನಷ್ಟ ಅನುಭವಿಸಿವೆ. ಎಚ್​ಯುುಎಲ್ ಮತ್ತು ಡಾ.ರೆಡ್ಡಿಸ್ ಷೇರುಗಳಷ್ಟೆ ಲಾಭ ಗಳಿಸಿದ್ದವು. ಈ ವರ್ಷ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ ಷೇರುಪೇಟೆ ಈ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹೂಡಿಕೆದಾರರು ಒಟ್ಟು 9 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದರು. ಬಿಎಸ್​ಇ ಮಾರುಕಟ್ಟೆ ಬಂಡವಾಳ 259.4 ಲಕ್ಷ ಕೋಟಿ ರೂಪಾಯಿಯಿಂದ 250 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 25 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.
ಜಾಗತಿಕ ಮಾರುಕಟ್ಟೆ ಸ್ಥಿತಿ:ಏಷ್ಯಾದ ಇತರೆ ಷೇರುಪೇಟೆಗಳಲ್ಲೂ ಸೋಮವಾರ ನಷ್ಟದ ವಹಿವಾಟು ದಾಖಲಾಗಿವೆ. ಜಪಾನ್​ನ ನಿಕೇ ಶೇಕಡ 2.19, ಚೀನಾದ ಶಾಂಘೈ ಕಾಂಪೊಸಿಟ್ ಶೇಕಡ.0.75, ತೈವಾನ್​ನ ಪೇಟೆ ಶೇಕಡ 0.80, ಹಾಂಗ್​ಸೆಂಗ್ ಶೇಕಡ 1.37, ದಕ್ಷಿಣ ಕೊರಿಯಾದ ಕೊಸ್ಪಿ ಶೇಕಡ 1.76 ಕುಸಿತ ಕಂಡಿವೆ. ಇದೇ ರೀತಿ ಅಮೆರಿಕದ ದ ಡೌ ಶೇಕಡ 1.48, ಎಸ್​ಆಂಡ್​ಪಿ 500 ಶೇಕಡ 1.03, ನಾಸ್ಡಾಕ್ ಶೇಕಡ 0.07 ನಷ್ಟದಲ್ಲಿ ವಹಿವಾಟು ಮುಗಿಸಿವೆ.
ಚಿನ್ನ, ಬೆಳ್ಳಿ ಇಳಿಕೆ:ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಮಿಗೆ 142 ರೂ. ಕುಸಿದು 47,480 ರೂಪಾಯಿ ಆಗಿದೆ. ಬೆಳ್ಳಿಯ ದರ ಒಂದು ಕಿಲೋಗೆ 615 ರೂ. ಕುಸಿದು 60,280 ರೂಪಾಯಿ ಆಗಿದೆ.
ಒಂದು ದಿನದ ದೊಡ್ಡ ಕುಸಿತ:ಸೆನ್ಸೆಕ್ಸ್ ದೊಡ್ಡ ಕುಸಿತ ಕಂಡಿರುವುದು ಈ ವರ್ಷ ಏಪ್ರಿಲ್ ನಂತರದಲ್ಲಿ ಇದೇ ಮೊದಲು. ಸೋಮವಾರ ಅಪರಾಹ್ನ ಸೆನ್ಸೆಕ್ಸ್ 1,849 ಅಂಶ (3.24%) ಕುಸಿದು 55,162.50 ಅಂಶದಲ್ಲಿ ವಹಿವಾಟು ನಡೆಸಿತ್ತು. ಇದು ಈ ವರ್ಷ ಅಕ್ಟೋಬರ್ 19ರ ಎತ್ತರಕ್ಕೆ ಹೋಲಿಸಿದರೆ ಶೇಕಡ 11ರಷ್ಟು ನಷ್ಟವನ್ನು ಪೇಟೆಗೆ ಉಂಟುಮಾಡಿದೆ. ನಿಫ್ಟಿ50 ಸೂಚ್ಯಂಕಕ್ಕೆ 16,500ರಲ್ಲಿ ಮಹತ್ವದ ಸಪೋರ್ಟ್ ಲೆವೆಲ್ ನಿರೀಕ್ಷಿಸಲಾಗಿತ್ತು. ಆದರೆ, ಅದನ್ನು ಮೀರಿ 566.5 ಅಂಶ (ಶೇಕಡ 3.3) ಕುಸಿತ ಕಂಡು 16,418.70 ಅಂಶ ತಲುಪಿತು. ಗರಿಷ್ಠ ಎತ್ತರ ತಲುಪಿದ್ದ ನಿಫ್ಟಿ50 ಈಗ ಶೇಕಡ 11.65 ಕರೆಕ್ಷನ್ ಮಾಡಿಕೊಂಡು ವಹಿವಾಟು ನಡೆಸಿದೆ.
ಸ್ನಾನಕ್ಕೆ ಹೋಗಿದ್ದವನನ್ನು ಹಾಗೇ ಠಾಣೆಗೆ ಕರೆದೊಯ್ದ ಪೊಲೀಸರು; ಪಕ್ಕದ ಮನೆಯವರ ಜತೆ ಜಗಳವಾಡಿದ್ದ ರೌಡಿಶೀಟರ್​ ಮರ್ಯಾದೆ ಬೀದಿಪಾಲು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
