ಮುಂಬೈ:ಭಾರತದ ಷೇರುಪೇಟೆಯ ಸೂಚ್ಯಂಕ ಬಿಎಸ್​ಇ ಸೆನ್ಸೆಕ್ಸ್, ಕಳೆದ ಏಳು ತಿಂಗಳ (ಏಪ್ರಿಲ್ 12) ಅವಧಿಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 1,170 ಅಂಶಗಳಷ್ಟು ದೊಡ್ಡ ಕುಸಿತ ಕಂಡಿದೆ. ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂಪಡೆತ, ದೇಶದ ಅತಿದೊಡ್ಡ ಫಿನ್​ಟೆಕ್ ಕಂಪನಿ ಪೇಟಿಎಂನ ದುರ್ಬಲ ಲಿಸ್ಟಿಂಗ್ ಮುಂತಾದವು ಹೂಡಿಕೆದಾರರ ಮೇಲೆ ಪರಿಣಾಮ ಬೀರಿವೆ.
ಸತತ ನಾಲ್ಕನೇ ಅವಧಿಗೆ ಸೆನ್ಸೆಕ್ಸ್ ಕುಸಿತ ಕಂಡಿದೆ. ಸೋಮವಾರದ ವಹಿವಾಟಿನಲ್ಲಿ 1,170.12 ಅಂಶ (1.96%) ಕುಸಿತ ಕಂಡು 58,465.89 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಇದು ಎರಡು ತಿಂಗಳ ಅವಧಿಯ ಕನಿಷ್ಠಮಟ್ಟವಾಗಿದೆ. ಎನ್​ಎಸ್​ಇ ನಿಫ್ಟಿ 348.25 ಅಂಶ (1.96%) ಕುಸಿದು 17,416.55 ಅಂಶದಲ್ಲಿ ವಹಿವಾಟು ಮುಗಿಸಿದೆ. ಇದು ಸೆಪ್ಟೆಂಬರ್ 20ರ ನಂತರದ ಕನಿಷ್ಠ ಮಟ್ಟವಾಗಿದೆ. ಬಜಾಜ್ ಫೈನಾನ್ಸ್, ಬಜಾಜ್ ಫಿನ್​ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಎನ್​ಟಿಪಿಸಿ, ಟೈಟಾನ್, ಎಸ್​ಬಿಐ ಷೇರುಗಳ ಮೌಲ್ಯ ಶೇಕಡ 5.74ರಷ್ಟು ಕುಸಿತ ಕಂಡಿವೆ. ಭಾರ್ತಿ ಏರ್​ಟೆಲ್, ಏಷ್ಯನ್ ಪೇಂಟ್ಸ್ ಮತ್ತು ಪವರ್​ಗ್ರಿಡ್ ಷೇರು ಮೌಲ್ಯ ಏರಿಕೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
