ನವದೆಹಲಿ:ನಾವುಗಳು ಸಾಮಾನ್ಯವಾಗಿ ಮದುವೆಯನ್ನು ಕಲ್ಯಾಣ ಮಂಟಪ, ದೇವಸ್ಥಾನ ರೆಸಾರ್ಟ್​ಗಳಲ್ಲಿ ಮಾಡುವುದನ್ನು ನೋಡಿರುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಡೆಸ್ಟಿನೇಷನ್​ ವೆಡ್ಡಿಂಗ್​ ಎಂಬ ಪರಿಕಲ್ಪನೆಯು ಚಾಲ್ತಿಗೆ ಬಂದಿದ್ದು, ಇದೀಗ ಅದೇ ರೀತಿಯ ಮದುವೆಯೊಂದು ಅದ್ದೂರಿಯಾಗಿ ನೆರವೇರಿದೆ.
UAEನಲ್ಲಿ ನೆಲೆಸಿರುವ ಭಾರತ ಮೂಲದ ಉದ್ಯಮಿ ದಿಲೀಪ್​ ಪೋಪ್ಲಿ ಎಂಬುವವರು ತಮ್ಮ ಮಗಳ ಮದುವೆಯನ್ನು ಖಾಸಗಿ ವಿಮಾನದಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದು, ಇದರ ಪೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಖಾಸಗಿ ವಿಮಾನ ಸಂಖ್ಯೆ ಬೋಯಿಂಗ್​ 747ರಲ್ಲಿ ಶುಭ ಸಮಾರಂಭವನ್ನು ನೆರವೇರಿಸಲಾಗಿದೆ.
VIDEO | UAE-based Indian businessman Dilip Popley hosted his daughter's wedding aboard a private Jetex Boeing 747 aircraft on November 24, in Dubai.(Full video available on PTI Videos –https://t.co/n147TvqRQz)pic.twitter.com/lciNdxrmzz
ಇದನ್ನೂ ಓದಿ:ತೆಲಂಗಾಣ ಚುನಾವಣೆ; ಯುವಕರ ಜತೆ ರಾಹುಲ್ ಗಾಂಧಿ ಸಂವಾದ; ಮುಂದಿನ ಪ್ರಧಾನಿ ನೀವೇ ಎಂದ ಜನಸ್ತೋಮ
ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನದ ಒಳಭಾಗದಲ್ಲಿ ಪ್ರಸಿದ್ದ ಬಾಲಿವುಡ್​ ಹಾಡೊಂದಕ್ಕೆ ಜನರು ಹೆಜ್ಜೆ ಹಾಕುತ್ತಿದ್ದು, ಬಳಿಕ ಸಮಾರಂಭಕ್ಕಾಗಿ ಗೊತ್ತುಪಡಿಸಿರುವಂತಹ ಜಾಗಗಳನ್ನು ಸಹ ತೋರಿಸಲಾಗುತ್ತದೆ. ಬಳಿಕ ಮಾತನಾಡಿರುವ ನವದಂಪತಿಗಳು ನಾವು ಈ ರೀತಿಯ ವಿಭಿನ್ನವಾದ ಅನುಭವವನ್ನು ಪಡೆಯುತ್ತೇವೆ ಎಂದು ಭಾವಿಸಿರಲಿಲ್ಲ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗು ಧನ್ಯವಾದಗಳು ಎಂದು ವಿಡಿಯೋ ಕೊನೆಯಲ್ಲಿ ಹೇಳಿದ್ದಾರೆ.
ವಧು ಹಾಗೂ ವರನ ಕುಟುಂಬಸ್ಥರು ಶುಭ ಸಮಾರಂಭ ನಡೆಯುವ ವೇಲೆ ಮೂರು ಘಂಟೆಗಳ ಕಾಲ ದುಬೈನಿಂದ ಓಮನ್​ಗೆ ವಿಮಾನದಲ್ಲಿ ತೆರಳಿದ್ದರು ಎಂದು ತಿಳಿದು ಬಂದಿದೆ. ಅಚ್ಚರಿಯ ವಿಚಾರವೇನೆಂದರೆ ವಧುವಿನ ತಂದೆ ದಿಲೀಪ್​ ಪೋಪ್ಲಿ ಸಹ 1994ರಲ್ಲಿ ಇದೇ ರೀತಿ ವಿವಾಹ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + seven =
Remember me
