ನವದೆಹಲಿ:ಭಾರತಕ್ಕೆ 1983ರ ಕ್ರಿಕೆಟ್ ವರ್ಲ್ಡ್​ ಕಪ್​ ತಂದು ಕೊಟ್ಟ ತಂಡದ ಕ್ಯಾಪ್ಟನ್​ ಕಪಿಲ್​ ದೇವ್​, ಟಿ20 ವರ್ಲ್ಡ್​ ಕಪ್​ನಲ್ಲಿ ಇಂದಿನ ಭಾರತ ತಂಡದ ನಿರಾಶಾದಾಯಕ ಆಟದ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೇ, ದೊಡ್ಡ ಹೆಸರುಳ್ಳ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ, ಐಪಿಎಲ್​ನಲ್ಲಿ ಚೆನ್ನಾಗಿ ಆಡುತ್ತಿರುವ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವುದು ಉತ್ತಮ ಎಂದಿದ್ದಾರೆ.
ಹಿರಿಯ ಕ್ರಿಕೆಟಿಗ ಕಪಿಲ್​​ರ ಈ ಹೇಳಿಕೆಯು, ಭಾರತ ತಂಡ ನ್ಯೂಜಿಲೆಂಡ್​​ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ ಸೋತ ಹಿನ್ನೆಲೆಯಲ್ಲಿ ಕೇಳಿಬಂದಿದೆ. ಭಾರತ ತಂಡ ಇದೀಗ ಪಂದ್ಯಾವಳಿಯಿಂದ ಹೊರಬೀಳುವ ಅಂಚಿನಲ್ಲಿದೆ. ತನ್ನ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದು, ಅಫ್ಘಾನಿಸ್ತಾನ, ಸ್ಕಾಟ್​ಲೆಂಡ್​ ಅಥವಾ ನಮೀಬಿಯ ತಂಡಗಳು ನ್ಯೂಜಿಲೆಂಡನ್ನು ಮಣಿಸಿದಲ್ಲಿ ಮಾತ್ರ ಭಾರತ ಮುಂದಿನ ಹಂತಕ್ಕೆ ಕ್ವಾಲಿಫೈ ಆಗಬಹುದು ಎನ್ನಲಾಗಿದೆ.
ಇದನ್ನೂ ಓದಿ:ಭಜರಂಗಿ 2 ಪ್ರೀ ರಿಲೀಸ್​ ದಿನವೇ ಅಪ್ಪು ಡಲ್​ ಆಗಿದ್ದರು… ಪುನೀತ್​ ಸಾವಿನ ಬಳಿಕ ಸ್ಫೋಟಕ ವಿಚಾರ ಬಿಚ್ಚಿಟ್ಟ ಶಿವಣ್ಣ
“ಇತರ ತಂಡಗಳ ಆಧಾರದ ಮೇಲೆ ನಾವು ಯಶಸ್ಸು ಗಳಿಸುವುದು ಸಮಂಜಸವಲ್ಲ. ನೀವು ವರ್ಲ್ಡ್​ ಕಪ್​ ಗೆಲ್ಲಬೇಕೆಂದಿದ್ದರೆ ಅಥವಾ ಸೆಮಿಫೈನಲ್ಸ್​ ತಲುಪಬೇಕೆಂದಿದ್ದರೆ ಅದನ್ನು ನಿಮ್ಮ ಶಕ್ತಿಸಾಮರ್ಥ್ಯದ ಮೇಲೆ ಮಾಡಿ… ತಂಡದ ಆಯ್ಕೆ ಮಾಡುವವರು ದೊಡ್ಡ ಹೆಸರುಗಳ ಮತ್ತು ದೊಡ್ಡ ಆಟಗಾರರ ಭವಿಷ್ಯವನ್ನು ನಿರ್ಧರಿಸಬೇಕಾಗುವುದು” ಎಂದು ಎಬಿಪಿ ನ್ಯೂಸ್​​ಗೆ ಕಪಿಲ್​ ದೇವ್​ ಹೇಳಿದ್ದಾರೆ.
“ಅವರು ಯೋಚಿಸಬೇಕು.. ಐಪಿಎಲ್​ನಲ್ಲಿ ಚೆನ್ನಾಗಿ ಆಡುತ್ತಿರುವ ಎಷ್ಟೋ ಯುವಜನರಿದ್ದಾರೆ, ಅವರಿಗೆ ಅವಕಾಶ ನೀಡುವ ಸಮಯ ಬಂದಿದೆಯಾ? ಮುಂದಿನ ಪೀಳಿಗೆಯನ್ನು ನಾವು ಹೇಗೆ ಉತ್ತಮಗೊಳಿಸುವುದು? ಅವರು ಸೋತರೆ ಯಾವುದೇ ಹಾನಿಯಿಲ್ಲ, ಏಕೆಂದರೆ ಅವರು ಅನುಭವ ಗಳಿಸುತ್ತಾರೆ. ಆದರೆ, ಈ ದೊಡ್ಡ ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದರೆ, ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ, ಬಹುಮಟ್ಟಿಗೆ ಟೀಕೆಗಳು ಬರುತ್ತವೆ. ಬಿಸಿಸಿಐ ಮಧ್ಯಪ್ರವೇಶಿಸಬೇಕು; ಯುವ ಆಟಗಾರರನ್ನು ತಂಡಕ್ಕೆ ತರುವ ಬಗ್ಗೆ ಯೋಚಿಸಬೇಕು” ಎಂದು ಕಪಿಲ್​ ಹೇಳಿದ್ದಾರೆ.(ಏಜೆನ್ಸೀಸ್)
ಅಕ್ರಮ ಸಂಬಂಧ ಬಹಿರಂಗ: ಒಂದು ಆತ್ಮಹತ್ಯೆ, ಒಂದು ಕೊಲೆ!

ಪೊಲೀಸ್​​ ಕೆನ್ನೆಗೆ ಬಾರಿಸಿದ ಮಾಜಿ ಶಾಸಕ! ಸಿದ್ದರಾಮಯ್ಯ ಪ್ರತಿಕೃತಿ ದಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 7 =
Remember me
