ಮುಂಬೈ:ಹೆಚ್ಚಿನ ಬ್ಯಾಂಕ್​ ಬಡ್ಡಿ ದರಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಏರಿಳಿತ ಕಂಡ ಕಚ್ಚಾ ತೈಲ ಬೆಲೆಗಳು ಮತ್ತು ನಿರಂತರ ಹಣದುಬ್ಬರದಂತಹ ಅಡಚಣೆಗಳ ಹೊರತಾಗಿಯೂ ದೇಶೀಯ ಷೇರು ಮಾರುಕಟ್ಟೆಯ ಮಾನದಂಡವಾದ ನಿಫ್ಟಿಯು ಈ ವರ್ಷವನ್ನು ಆರೋಗ್ಯಕರ ಲಾಭಗಳೊಂದಿಗೆ ಮುಕ್ತಾಯಗೊಳಿಸಲು ಸಿದ್ಧವಾಗಿದೆ.
ದಾಖಲೆ ಪ್ರಮಾಣದ ಏರಿಕೆ ಕಂಡ ಷೇರು ಮಾರುಕಟ್ಟೆಯ ನಡುವೆಯೇ ಹೂಡಿಕೆದಾರರು ಜಾಗತಿಕ ಮತ್ತು ದೇಶೀಯ ಬೆಳವಣಿಗೆಗಳು, ಅಮೆರಿಕದ ಬ್ಯಾಂಕ್​ ಬಡ್ಡಿ ದರಗಳು, ಹಣದುಬ್ಬರ, ಲೋಕಸಭೆ ಚುನಾವಣೆಗಳು, ಮುಂಬರುವ ತ್ರೈಮಾಸಿಕ ಗಳಿಕೆಗಳು ಮತ್ತು ಮುಂದಿನ ಕೆಲವು ವಾರಗಳಲ್ಲಿ ಮಧ್ಯಂತರ ಬಜೆಟ್ ಮೊದಲಾದ ಅಂಶಗಳನ್ನು ಗಮನಿಸಿ ಹೂಡಿಕೆ ಮಾಡಬೇಕೆಂದು ವಿಶ್ಲೇಷಕರು ಹೇಳುತ್ತಾರೆ.
2023ರಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಕುಸಿತದೊಂದಿಗೆ ಆರಂಭವಾಯಿತು. ಮೊದಲ ತ್ರೈಮಾಸಿಕದಲ್ಲಿ ಹಿನ್ನಡೆ ಅನುಭವಿಸಿದರೂ ಏಪ್ರಿಲ್‌ನಿಂದ ಏರುಗತಿ ಶುರುವಾಯಿತು. ನಿಫ್ಟಿ 50 ಸೂಚ್ಯಂಕವು ಈ ವರ್ಷದಲ್ಲಿ 18 ಪ್ರತಿಶತದಷ್ಟು ಆದಾಯದೊಂದಿಗೆ ಹೊಸ ಎತ್ತರಕ್ಕೆ ತಲುಪಿದೆ. ಆದರೆ, ಇದೇ ಮೀಡಿಯಂ (ಮಧ್ಯಮ) ಮತ್ತು ಸ್ಮಾಲ್​ (ಸಣ್ಣ)​ ಷೇರುಗಳು ಕ್ರಮವಾಗಿ 40 ಪ್ರತಿಶತ ಮತ್ತು 50 ಪ್ರತಿಶತದಷ್ಟು ಆದಾಯ ಗಳಿಸುವ ಮೂಲಕ ಇವುಗಳಲ್ಲಿನ ಹೂಡಿಕೆದಾರರಿಗೆ ಬಂಪರ್​ ಲಾಭ ತಂದುಕೊಟ್ಟಿವೆ.
ನಿಫ್ಟಿ 50 ಸೂಚ್ಯಂಕವು ಲಾರ್ಜ್​ ಕ್ಯಾಪ್​ಗಳನ್ನು ಸೂಚಿಸುತ್ತದೆ. ಅಂದರೆ, 50 ಬೃಹತ್​ ಕಂಪನಿಗಳ ಷೇರುಗಳ ಸರಾಸರಿ ಬೆಲೆಯನ್ನು ಇದು ಸೂಚಿಸುತ್ತದೆ. ಇದೇ ರೀತಿ ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕವು ಸ್ಮಾಲ್​ ಕ್ಯಾಪ್​ಗಳ ಸರಾಸರಿ ಬೆಲೆಗಳನ್ನು ಸೂಚಿಸುತ್ತದೆ. ಅಂದರೆ, ನಿಫ್ಟಿಯಲ್ಲಿ ಪಟ್ಟಿ ಮಾಡಲಾಗಿರುವ ಹಾಗೂ ಬಂಡವಾಳ ಗಾತ್ರದಲ್ಲಿ 251ರಿಂದ 500ರವರೆಗಿನ ಶ್ರೇಣಿಯಲ್ಲಿರುವ ಕಂಪನಿಗಳ ಸರಾಸರಿ ಷೇರುಗಳ ಬೆಲೆಯನ್ನು ಇದು ಸೂಚಿಸುತ್ತದೆ. ಈ ಸೂಚ್ಯಂಕವು ಸಣ್ಣ ಬಂಡವಾಳ ಹೊಂದಿರುವ ಕಂಪನಿಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ.
ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸ್ಮಾಲ್​ ಕ್ಯಾಪ್​ಗಳು 2023ರಲ್ಲಿ ಗಳಿಸಿದ ಲಾಭವು ಅಚ್ಚರಿ ಮೂಡಿಸುತ್ತದೆ. ಕಳೆದ ನವೆಂಬರ್ ತಿಂಗಳೊಂದರಲ್ಲಿ ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕವು 10 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕವು ಕಳೆದ ಮೂರು ತಿಂಗಳುಗಳಲ್ಲಿ ಶೇಕಡಾ 11.07 ರಷ್ಟು ಹಾಗೂ ಕಳೆದ ಆರು ತಿಂಗಳಲ್ಲಿ ಶೇಕಡಾ 33.68 ಲಾಭವನ್ನು ಗಳಿಸಿವೆ. ಅಂತಿಮವಾಗಿ, 12-ತಿಂಗಳ ಆಧಾರದ ಮೇಲೆ ಶೇಕಡಾ 37.31 ರಷ್ಟು ಏರಿವೆ. ಇದರಲ್ಲಿ ಟಾಪ್​ 10 ಷೇರುಗಳು ಈ ಸಾಲಿನಲ್ಲಿ ಶೇ. 150ರಿಂದ 350ರವರೆಗೆ ಏರಿಕೆ ಕಂಡಿವೆ.
1) ಬಿಎಸ್​ಇ ಲಿಮಿಟೆಡ್​: ಅತಿಹೆಚ್ಚು ಲಾಭ ಮಾಡಿದ ಸ್ಮಾಲ್‌ ಕ್ಯಾಪ್ ಆಗಿ ಹೊರಹೊಮ್ಮಿದೆ, ಈ ಷೇರು ಬೆಲೆಯಲ್ಲಿ ಶೇಕಡಾ 331.93ರಷ್ಟು ಹೆಚ್ಚಳ ದಾಖಲಿಸಿದೆ.
2) ಸಿಯೆಂಟ್​ ಲಿಮಿಟೆಡ್​ (Cyient Ltd): ಎರಡನೇ ಅತಿದೊಡ್ಡ ಗಳಿಕೆ ಕಂಡ್​ ಸ್ಮಾಲ್‌ಕ್ಯಾಪ್ ಇದು. ಶೇಕಡಾ 200.15 ಹೆಚ್ಚಳವನ್ನು ದಾಖಲಿಸಿದೆ.
3.) ಝೆನ್ಸಾರ್ ಟೆಕ್ನಾಲಜೀಸ್ ಲಿಮಿಟೆಡ್ ಶೇಕಡಾ 195.20
4) ಐಟಿಐ ಲಿಮಿಟೆಡ್ ಶೇಕಡಾ 193.92
5) ಜೆಬಿಎಂ ಆಟೋ ಲಿಮಿಟೆಡ್ ಶೇಕಡಾ 179.14
6) ಮಜಗಾಂವ್​ ಡಾಕ್​ ಶಿಪ್​ಬಿಲ್ಡರ್ಸ್​ ಲಿಮಿಟೆಡ್​ ಶೇಕಡಾ 176.38
7) ಸೊನಾಟಾ ಸಾಫ್ಟ್‌ವೇರ್ ಲಿಮಿಟೆಡ್ ಶೇಕಡಾ 169.81
8) ಎನ್​ಎಲ್​ಸಿ ಇಂಡಿಯಾ ಲಿಮಿಟೆಡ್ ಶೇಕಡಾ 169.09
9) ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಲಿಮಿಟೆಡ್ ಶೇಕಡಾ 164.47
10) ಏಂಜೆಲ್ ಒನ್ ಲಿಮಿಟೆಡ್ ಶೇಕಡಾ 158.70 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ರೂ. 6 ಸಾವಿರ ಕೋಟಿಯ ಮಹಾದೇವ್ ಬೆಟ್ಟಿಂಗ್​ ಹಗರಣ: ದುಬೈ ಗೃಹಬಂಧನದಲ್ಲಿ ಚಂದ್ರಕರ್​

ರೂ. 6 ಸಾವಿರ ಕೋಟಿಯ ಮಹಾದೇವ್ ಬೆಟ್ಟಿಂಗ್​ ಹಗರಣ: ದುಬೈ ಗೃಹಬಂಧನದಲ್ಲಿ ಚಂದ್ರಕರ್​

ಅಕ್ರಮ ಸಾಲ, ಬೆಟ್ಟಿಂಗ್ ಆ್ಯಪ್‌ ಜಾಹೀರಾತು: ಸೋಷಿಯಲ್​ ಮೀಡಿಯಾಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fourteen =
Remember me
