ಮುಂಬೈ:ಸ್ಮಾಲ್ ಕ್ಯಾಪ್‌ ಫಂಡ್​ಗಳು ಕೆಲವು ಸಮಯದಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ರೋಮಾಂಚಕತೆ ಸೃಷ್ಟಿಸಿವೆ. ಸ್ಮಾಲ್​ ಕ್ಯಾಪ್​ಗಳೆಂದರೆ, ಸಣ್ಣ ಕಂಪನಿಗಳ ಷೇರುಗಳು. ಇತ್ತೀಚಿನ ವರ್ಷಗಳಲ್ಲಿ ಈ ಸಣ್ಣ ಕಂಪನಿಗಳ ಷೇರು ದೊಡ್ಡ ಪ್ರಮಾಣದ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ. ಹೀಗಾಗಿ, ಸ್ಮಾಲ್​ ಕ್ಯಾಪ್​ ಮ್ಯುಚೂವಲ್​ ಫಂಡ್​ಗಳು ಉಳಿದ ವಿಭಾಗಗಳ ಫಂಡ್​ಗಳಿಗಿಂತ ಹೆಚ್ಚಿನ ಲಾಭ ನೀಡಿವೆ.
ಈಗ ಸ್ಮಾಲ್​ ಕ್ಯಾಪ್​ ಮ್ಯುಚೂವಲ್​ ಫಂಡ್​ಗಳ ಎನ್​ಎಫ್​ಒಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಎನ್​ಎಫ್​ಒ ಎಂದರೆ ನ್ಯೂ ಫಂಡ್ ಆಫರ್. ಮ್ಯೂಚುಯಲ್ ಫಂಡ್‌ಗಳ ಲೋಕದಲ್ಲಿ ಸಾಮಾನ್ಯವಾಗಿ ಬಳಸುವ ಪದ ಇದಾಗಿದೆ. ಯಾವುದಾದರೂ ಮ್ಯೂಚುಯಲ್ ಫಂಡ್ ಕಂಪನಿಯು ಹೊಸ ಫಂಡ್​ ಆರಂಭಿಸಿದರೆ ಅದನ್ನು ಎನ್​ಎಫ್​ಒ ಎನ್ನುತ್ತಾರೆ. ಹೂಡಿಕೆದಾರರು ಪ್ರತಿ ಘಟಕಕ್ಕೆ (ಒಂದು ಯೂನಿಟ್​ಗೆ) 10 ರೂಪಾಯಿ ಬೆಲೆ ನೀಡಿ ತಮ್ಮ ಹೂಡಿಕೆ ಸಾಮರ್ಥ್ಯಕ್ಕೆ ತಕ್ಕಷ್ಟು ಯೂನಿಟ್​ಗಳನ್ನು ಖರೀದಿಸಬಹುದು.
ಹೂಡಿಕೆದಾರರ ಪರವಾಗಿ ಈ ಮ್ಯೂಚುಯಲ್ ಫಂಡ್ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುತ್ತವೆ. ಅವು ಲಾಭ ಮಾಡುತ್ತಾ ಸಾಗಿದರೆ 10 ರೂಪಾಯಿ ಯೂನಿಟ್​ನ​ ಬೆಲೆ ಹೆಚ್ಚಾಗುತ್ತದೆ ಹೋಗುತ್ತದೆ. ಒಂದು ವೇಳೆ ನಷ್ಟವಾಗುತ್ತ ಹೋದರೆ, 10 ರೂಪಾಯಿ ಯೂನಿಟ್​ ಬೆಲೆ ಅದಕ್ಕೆ ಅನುಗುಣವಾಗಿ ಕಡಿಮೆ ಆಗುತ್ತದೆ. ಈ ರೀತಿ ಹೆಚ್ಚು-ಕಡಿಮೆಯಾಗುವ ಒಂದು ಯೂನಿಟ್​ ಬೆಲೆಯನ್ನು ಎನ್​ಎವಿ (ನೆಟ್​ ಅಸೆಟ್​ ವ್ಯಾಲ್ಯು) ಎನ್ನುತ್ತಾರೆ. ಒಂದು ಮ್ಯುಚೂವಲ್​ ಫಂಡ್​ ಆರಂಭವಾದ ನಂತರದ ದಿನಗಳಲ್ಲಿ ಹಣ ತೊಡಗಿಸಬೇಕಾದರೆ ಎನ್​ಎವಿ ಬೆಲೆ ಆಧಾರದಲ್ಲಿ ಖರೀದಿಸಬೇಕಾಗುತ್ತದೆ.
ಭಾರತೀಯ ಮಾರುಕಟ್ಟೆಯಲ್ಲಿ 26 ಸ್ಮಾಲ್‌ಕ್ಯಾಪ್ ಫಂಡ್​ ಯೋಜನೆಗಳಲ್ಲಿ ನವೆಂಬರ್ 30ರವರೆಗೆ 2.2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ಸ್ಮಾಲ್‌ ಕ್ಯಾಪ್ ಫಂಡ್​ಗಳಲ್ಲಿ ಹೂಡಿಕೆಯಾಗುವ ಹಣದ ಪೈಕಿ ಕನಿಷ್ಠ 65 ಪ್ರತಿಶತವನ್ನು ಸ್ಮಾಲ್‌ ಕ್ಯಾಪ್ ಷೇರುಗಳಲ್ಲಿ ತೊಡಗಿಸಲಾಗುತ್ತದೆ,
ಕಳೆದ ಮೂರು ವರ್ಷಗಳಲ್ಲಿ ಸ್ಮಾಲ್​ ಕ್ಯಾಪ್​ ಮ್ಯೂಚುಯಲ್ ಫಂಡ್​ಗಳು ಸರಾಸರಿಯಾಗಿ ಶೇಕಡಾ 33.1ರಷ್ಟು ವಾರ್ಷಿಕ ಲಾಭವನ್ನು ಹೂಡಿಕೆದಾರರಿಗೆ ನೀಡಿರುವುದು ಆಕರ್ಷಕ ಸಂಗತಿಯಾಗಿದೆ. ಇತರೆ ವರ್ಗಗಳ ಮ್ಯೂಚುಯಲ್ ಫಂಡ್​ಗಳಿಗೆ ಹೋಲಿಸಿದರೆ ಈ ಲಾಭ ಪ್ರಮಾಣ ಅತ್ಯಧಿಕವಾಗಿದೆ.
ಈಗ ಮೋತಿಲಾಲ್ ಓಸ್ವಾಲ್ ಸ್ಮಾಲ್ ಕ್ಯಾಪ್ ಫಂಡ್ ಮತ್ತು ಡಿಎಸ್​ಪಿ ನಿಫ್ಟಿ ಸ್ಮಾಲ್‌ ಕ್ಯಾಪ್ 250 ಕ್ವಾಲಿ ಟಿ50 ಇಂಡೆಕ್ಸ್ ಫಂಡ್‌, ಬಂಧನ್ ನಿಫ್ಟಿ ಸ್ಮಾಲ್‌ಕ್ಯಾಪ್ 250 ಇಂಡೆಕ್ಸ್ ಫಂಡ್​ಗಳ ಎನ್​ಎಫ್​ಒಗಳು (ಹೊಸ ನಿಧಿ ಕೊಡುಗೆಗಳು) ಚಂದಾದಾರಿಕೆಗೆ ತೆರೆದಿವೆ. ಇವುಗಳಲ್ಲಿ ಸಾಕಷ್ಟು ಲೆಕ್ಕಾಚಾರ, ಜಾಣ್ಮೆಯಿಂದ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳಲು ಅವಕಾಶವಿದೆ.

ರೂ 2,800 ಕೋಟಿಯ ರಾಕೆಟ್ ಲಾಂಚರ್‌ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ; ಈ ಷೇರುಗಳಿಗೆ ಸಿಗಲಿದೆ ಲಾಭ…

ಇಂಡಿಯಾ ಮೈತ್ರಿಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ: ಹೀಗಿದೆ ಮಮತಾ ಬ್ಯಾನರ್ಜಿ ಪ್ರಸ್ತಾಪ

ಬಿಟ್‌ಕಾಯಿನ್ ವಂಚನೆ ಯೋಜನೆಯಲ್ಲಿ ಮಹಿಳೆ ಬಂಧನ: ಈ ದಂಧೆಯಲ್ಲಿ ವಂಚಿಸಿದ ಮೊತ್ತ ಎಷ್ಟು ಸಾವಿರ ಕೋಟಿ ಗೊತ್ತೆ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × 2 =
Remember me
