ಮುಂಬೈ:ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನಲ್ಲಿ ಇದೀಗ ಮತ್ತೊಬ್ಬ ಬಾಲಿವುಡ್​ ನಟ ಚಂಕಿ ಪಾಂಡೆ ಪುತ್ರಿಯಾದ ನಟಿ ಅನನ್ಯ ಪಾಂಡೆಯನ್ನು ಎನ್​ಸಿಬಿ ವಿಚಾರಣೆ ನಡೆಸುತ್ತಿದೆ. ಈಕೆ ನ್ಯಾಯಾಂಗ ಬಂಧನದಲ್ಲಿರುವ ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಗಾಂಜಾ ಒದಗಿಸಿಕೊಡುವುದಾಗಿ ಹೇಳಿದ್ದಳು ಎಂದು ವಾಟ್ಸಾಪ್​ ಸಂಭಾಷಣೆಯಲ್ಲಿ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಬಂಧಿತ ಆರ್ಯನ್​ ಖಾನ್​ನ ವಾಟ್ಸಾಪ್​ ಚ್ಯಾಟ್​ಗಳ ಆಧಾರದ ಮೇಲೆ ತನಿಖೆ ಮುಂದುವರೆಸಿರುವ ಎನ್​ಸಿಬಿ ಅಧಿಕಾರಿಗಳಿಗೆ, ಅನನ್ಯಾರೊಂದಿಗೆ ಆರ್ಯನ್​ ಡ್ರಗ್ಸ್​ ಪಡೆಯುವ ಬಗ್ಗೆ ಮಾತನಾಡಿರುವ ಮಾಹಿತಿ ಸಿಕ್ಕಿದೆ. ಒಂದು ಸಂಭಾಷಣೆಯಲ್ಲಿ ಆರ್ಯನ್​ ಗಾಂಜಾ ಪಡೆಯಲು ಏನಾದರೂ ‘ಜುಗಾಡ್​’ ಮಾಡಲು ಸಾಧ್ಯವಾ ಎಂದು ಕೇಳಿದ್ದಾನೆ. ಆಗ ಅನನ್ಯ, ‘ಅರೇಂಜ್​ ಮಾಡುತ್ತೇನೆ’ ಎಂದು ಹೇಳಿದ್ದಾಳೆ ಎಂದು ಎನ್​ಸಿಬಿ ಮೂಲಗಳು ತಿಳಿಸಿರುವುದಾಗಿ ಇಂಡಿಯ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ಜಾಸ್ತಿ ಹಣ ಕೊಟ್ಟರೆ ಓಕೆ! ಸೌತ್​ ಬ್ಯೂಟಿ ಅಮಲಾ ಪೌಲ್ ಕುರಿತ ಬಿಸಿ ಬಿಸಿ ಸುದ್ದಿ ಇದು​
ನಿನ್ನೆ ಮಧ್ಯಾಹ್ನ ಮತ್ತು ಇಂದು ಬೆಳಿಗ್ಗೆಯಿಂದ ಅನನ್ಯಾರ ವಿಚಾರಣೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿಗಳು ಈ ಬಗ್ಗೆ ಆಕೆಯನ್ನು ಪ್ರಶ್ನಿಸುತ್ತಿದ್ದಾರೆ. ಅನನ್ಯ ಆರ್ಯನ್​ಗೆ ಡ್ರಗ್ಸ್​ ಒದಗಿಸಿದ್ದಕ್ಕೆ ಸದ್ಯಕ್ಕೆ ಮತ್ಯಾವುದೇ ಪುರಾವೆ ಇಲ್ಲದಿದ್ದರೂ, ಇನ್ನೂ ಕೆಲವು ಸಂಭಾಷಣೆಗಳಲ್ಲಿ ಇಬ್ಬರೂ ಡ್ರಗ್ಸ್​ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮತ್ತೊಂದೆಡೆ, ಆರ್ಯನ್​ ಖಾನ್​ ಜಾಮೀನು ಅರ್ಜಿ ತಿರಸ್ಕರಿದ್ದ ಎನ್​ಡಿಪಿಎಸ್​ ವಿಶೇಷ ನ್ಯಾಯಾಲಯ, ಅಕ್ಟೋಬರ್​ 30 ರವರೆಗೆ ಅವನನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶಿಸಿದೆ ಎನ್ನಲಾಗಿದೆ.(ಏಜೆನ್ಸೀಸ್)
ಪ್ರತಿ ಬಾರಿ ವಿಮಾನ ನಿಲ್ದಾಣದಲ್ಲಿ ಹಿಂಸೆ! ಪ್ರಧಾನಿ ಮೋದಿಗೆ ಹಿರಿಯ ನಟಿಯ ದೂರು

ಬೈಕ್​ ಮೇಲೆ ಭಾರತದ ಉದ್ದಗಲ ಸಂಚರಿಸುತ್ತಿರುವ ಯುವಕ! ಸರ್ದಾರ್​ ಪಟೇಲ್​ ಸ್ಮರಣೆಯಲ್ಲಿ ಏಕತಾ ಯಾತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
