ನವದೆಹಲಿ:ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿದೆ. ನಗರದ ಬಹುತೇಕ ಭಾಗ ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸುಪ್ರೀಂಕೋರ್ಟ್​, ಕೆಂಪುಕೋಟೆ ಹಾಗೂ ರಾಜ್​ಘಾಟ್ ಸೇರಿದಂತೆ ಪ್ರಮುಖ ಪ್ರದೇಶಗಳಿಗೂ ಸಹ ನೀರು ನುಗ್ಗಿದೆ. ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸದ್ಯಕ್ಕೆ ದೆಹಲಿ ಮಂದಿಯ ಪಾಲಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲಿನ ವೇಗದ ನಿರ್ಬಂಧವನ್ನು ಸಡಿಲಗೊಳಿಸಿದೆ.
ಯಮುನಾ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದರಿಂದ ಮೆಟ್ರೋ ರೈಲುಗಳ ವೇಗಕ್ಕೆ ನಿರ್ಬಂಧ ಹೇರಲಾಗಿತ್ತು. ಯಮುನಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ಚಲಿಸುವಾಗ ನಿಧಾನವಾಗಿ ಚಲಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್​ಸಿ) ಸುತ್ತೋಲೆ ಹೊರಡಿಸಿತ್ತು. ಆದರೆ, ನದಿಯಲ್ಲಿ ನೀರಿನ ಮಟ್ಟ ಇಳಿಮುಖ ಹಾದಿಯಲ್ಲಿದ್ದು, ರೈಲುಗಳು ಮಾಮೂಲಿ ವೇಗದಲ್ಲಿ ಚಲಿಸಬಹುದೆಂದು ಹೇಳಿ ನಿರ್ಬಂಧವನ್ನು ತೆರವುಗೊಳಿಸಿದೆ.
ಇದನ್ನೂ ಓದಿ:ಯಶಸ್ವಿ ಅಮೋಘ ಬ್ಯಾಟಿಂಗ್,​ ಅಶ್ವಿನ್ ಸ್ಪಿನ್​ ದಾಳಿ: ಮೊದಲ ಟೆಸ್ಟ್​ನಲ್ಲಿ ವಿಂಡೀಸ್​ ವಿರುದ್ಧ ಭಾರತಕ್ಕೆ ಸುಲಭ ಜಯ​
Speed restriction imposed while crossing Metro bridges over Yamuna has been removed. All trains are running at normal speed now.https://t.co/bdMaynnYMy
— Delhi Metro Rail Corporation (@OfficialDMRC)July 15, 2023

ದೆಹಲಿಯಲ್ಲಿ ಮಾನ್ಸೂನ್​ ಮಳೆ ಅಬ್ಬರಿಸುತ್ತಿದ್ದು, 45 ವರ್ಷಗಳ ಹಿಂದಿನ ಮಳೆ ದಾಖಲೆ ಮುರಿದಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಹರಿಯಾಣದ ಹುತ್ನಿಕುಂಡ ಡ್ಯಾಮ್​ನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿತ್ತು. ನಿನ್ನೆಯಷ್ಟೇ 208 ಮೀಟರ್​ಗಿಂತ ಹೆಚ್ಚಿದ್ದ ನೀರಿನ ಮಟ್ಟ, ಇಂದು ಬೆಳಗ್ಗೆ 207.8ಕ್ಕೆ ಕುಸಿದಿದೆ. ಇದು ಸಂತಸದ ಸಂಗತಿಯಾದರೂ ದೆಹಲಿಯ ಅನೇಕ ಏರಿಯಾಗಳು ಮಾತ್ರ ಇನ್ನೂ ಪ್ರವಾಹದಲ್ಲಿ ಸಿಲುಕಿವೆ.
ಇದನ್ನೂ ಓದಿ:ಲಂಚ ಪಡೆದು ಎಸ್ಕೇಪ್​ ಆಗುತ್ತಿದ್ದ ಭ್ರಷ್ಟನನ್ನು ಸಿನಿಮಾ ಸ್ಟೈಲ್​ನಲ್ಲಿ ಚೇಸ್​ ಮಾಡಿ ಹಿಡಿದ ಲೋಕಾಯುಕ್ತ ಅಧಿಕಾರಿಗಳು!
1978ರಲ್ಲಿ ಭಾರೀ ಮಳೆಯಿಂದ ಯಮುನಾ ನದಿ ನೀರಿನ ಮಟ್ಟ 207.49 ಮೀಟರ್​ ತಲುಪಿತ್ತು. ಆದರೆ, ಈಗ ಅದನ್ನು ಮೀರಿ 208.66 ಮೀಟರ್​ ಅಡಿ ತಲುಪಿದೆ. ನದಿಯ ಗರಿಷ್ಠ ನೀರಿನ ಮಟ್ಟ 205 ಮೀಟರ್​. ಆದರೆ, ಅದನ್ನು ಮೀರಿ ಯಮುನಾ ನದಿ ಹರಿಯುತ್ತಿದ್ದು, ದೆಹಲಿಯ ಅನೇಕ ಭಾಗಗಳು ಜಲಾವೃತಗೊಂಡಿವೆ.
ದೆಹಲಿಯ ಪ್ರಮುಖ ಭಾಗಗಳೇ ನೀರಿನಿಂದ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​) ರಕ್ಷಣಾ ಕಾರ್ಯದಲ್ಲಿ ತೊಡಗಿವೆ.(ಏಜೆನ್ಸೀಸ್​)
ಜುಲೈ 19ರಿಂದ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

ಬೋಲ್ಡ್ ಬ್ಯೂಟಿ ಆಂಡ್ರಿಯಾ ಜರೆಮಿಯ ಬೆತ್ತಲೆ ದೃಶ್ಯಕ್ಕೆ ಸೆನ್ಸಾರ್​ ಕತ್ತರಿ! ನಿರ್ದೇಶಕ ಕೊಟ್ಟ ಸ್ಪಷ್ಟನೆ ಹೀಗಿದೆ…

ಜುಲೈ 20ರಿಂದ ನೀಟ್ ಯುಜಿ ಸೀಟ್‌ಗೆ ನೋಂದಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
