ಮುಂಬೈ:ಟ್ವಿಟರ್ ಇಂದು ಬ್ಲೂ ಟಿಕ್​ ಚಂದಾದಾರಿಕೆ ಇಲ್ಲದೆ ಪ್ರೊಫೈಲ್‌ಗಳಿಂದ ಬ್ಲೂ ಟಿಕ್ ತೆಗೆದು ಹಾಕಿದೆ. ಈ ಮೂಲಕವಾಗಿ ಅನೇಕ ಸೆಲೆಬ್ರೆಟಿಗಳು ಹಾಗೂ ಸ್ಟಾರ್​​ ನಟ ಮತ್ತು ನಟಿಯರು ಶಾಕ್​ಗೆ ಒಳಗಾಗಿದ್ದಾರೆ. ಬಾಲಿವುಡ್​​ ನಟ ಅಮಿತಾಭ್ ಬಚ್ಚನ್ ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಮಿತಾಭ್ ಬಚ್ಚನ್ ಟ್ವಿಟರ್ ತಮ್ಮ ಬ್ಲೂ ಟಿಕ್ ಅನ್ನು ತೆಗೆದ ನಂತರ ಮಾಡಿದ ಟ್ವೀಟ್ ವೈರಲ್ ಆಗಿದೆ. “ಹೇ ಟ್ವಿಟ್ಟರ್! ನೀವು ಕೇಳುತ್ತೀರಾ? ನಾನು ಚಂದಾದಾರಿಕೆ ಸೇವೆಗಾಗಿ ಪಾವತಿಸಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಅನ್ನು ಹಿಂತಿರುಗಿಸಿ, ಇದರಿಂದ ಜನರಿಗೆ ನಾನೇ ಅಮಿತಾಭ್ ಬಚ್ಚನ್ ಎಂದು ತಿಳಿಯುತ್ತದೆ. ನಾನು ಕೈ ಜೋಡಿಸಿ ನಿಮ್ಮ ಬಳಿ ವಿನಂತಿಸುತ್ತಿದ್ದೇನೆ ಎಂದು ಟ್ವೀಟ್​​ ಮಾಡಿದ್ದಾರೆ.
ಇದನ್ನೂ ಓದಿ:ವಯಸ್ಸು 24, ಸಂಬಳ 58 ಲಕ್ಷ, ಒಂಟಿತನ ಕಾಡ್ತಿದೆ; ಗರ್ಲ್‌ಫ್ರೆಂಡ್, ಸ್ನೇಹಿತರು ಇಲ್ಲ..!
ಸೆಲೆಬ್ರಿಟಿಗಳ ಪ್ರೊಪೈಲ್​ನಲ್ಲಿದ್ದ ಬ್ಲೂ ಟಿಕ್​ ತೆಗೆದು ಹಾಕಲು ಮುಖ್ಯ ಕಾರಣ ಎಂದರೆ ಅದು ಟ್ವಿಟರ್​ನ ಮಾಲೀಕ ಎಲಾನ್​ ಮಸ್ಕ್​ ಜಾರಿಗೆ ತಂದಿರುವ ನೂತನ ನಿಯಮ. ಕಂಪನಿಯು ಆರಂಭದಲ್ಲಿ ಏಪ್ರಿಲ್ 1 ರಂದು ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ಪ್ರಕಟಿಸಿತು, ಆದರೆ ಬದಲಾವಣೆಯು ಆಯ್ದ ಖಾತೆಗಳಿಗೆ ಅನ್ವಯಿಸುತ್ತದೆ.ಬ್ಲೂ ಟಿಕ್​ ಅನ್ನು ಉಳಿಸಿಕೊಳ್ಳಲು ಎಲ್ಲಾ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ.
ತಮ್ಮ ಖಾತೆಯಲ್ಲಿನ ಬ್ಲೂ ಟಿಕ್​ ಉಳಿಸಿಕೊಳ್ಳಲು ಸೆಲೆಬ್ರಿಟಿಗಳು ಸಬ್​ಸ್ಕ್ರಿಪ್ಷನ್​ ಮೊತ್ತವನ್ನು ಪಾವತಿಸಬೇಕು. ಚಂದಾದಾರಿಕೆ ಮೊತ್ತವನ್ನು ಪಾವತಿಸದೆ ಇರುವವರ ಖಾತೆಗಳಿಂದ ಟ್ವಿಟರ್​ ಬ್ಲೂ ಟಿಕ್​ ತೆಗೆದು ಹಾಕಿದೆ.  ​ತಮ್ಮ ಖಾತೆಯಲ್ಲಿನ ಬ್ಲೂ ಟಿಕ್ ಉಳಿಸಿಕೊಳ್ಳಲು ಸಬ್​ಸ್ಕ್ರಿಪ್ಸನ್​ ಮೊತ್ತವನ್ನು ವಿಧಿಸಿದ್ದು ಮೊಬೈಲ್​ ಬಳಕೆದಾರರಿಗೆ 650 ರೂ ಹಾಗೂ ವೆಬ್​ ಬಳಕೆದಾರರಿಗೆ 900 ರೂ ಶುಲ್ಕವನ್ನು ವಿಧಿಸಿದೆ.
ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ ಟ್ವಿಟರ್; ರಾತ್ರೋರಾತ್ರಿ ಕಾಣೆಯಾದ ಬ್ಲೂ ಟಿಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
