ನವದೆಹಲಿ:ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಹಿಂದಿ ಬಿಗ್​ಬಾಸ್​ 11ರ ಸ್ಫರ್ಧಿ, ಖ್ಯಾತ ನಟಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಆಗಾಗ್ಗೆ ವಿವಾದಗಳಿಂದ ಹೆಸರುವಾಸಿಯಾಗಿರುವ ಈ ನಟಿ ನವದೆಹಲಿಯ ಟಿಗ್ರಿ ಪ್ರದೇಶದ ಡಿಯೋಲಿ ರಸ್ತೆಯಲ್ಲಿರುವ ಫ್ಲಾಟ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ.
ಈ ಕುರಿತು ಮಾತನಾಡಿರುವ ನಟಿ, ಆರೋಪಿಯು ನನಗೆ 2022 ರಿಂದ ಪರಿಚಿತನಾಗಿದ್ದು, ನಾನು ಕಳೆದ ವರ್ಷ ದೆಹಲಿಯಲ್ಲಿದ್ದಾಗ ಆತ ನನ್ನನ್ನು ತನ್ನ ಸ್ನೇಹಿತರು ಭೇಟಿಯಾಗಲು ಬಯಸಿರುವುದಾಗಿ ಹೇಳಿದ್ದ. ಆದರೆ, ನಾನು ನಿರಾಕರಿಸಿದೆ. ಆದರೆ, ಆತ ತೀವ್ರವಾಗಿ ಒತ್ತಡ ಹೇರಿದ ಪರಿಣಾಮ ನಾನು ಕಳೆದ ವರ್ಷ ಆತನನ್ನು ಭೇಟಿ ಮಾಡಿದೆ. ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯ ನೀಡಿದ್ದ. ನಾನು ಅದನ್ನು ನಾನು ಸೇವಿಸಿದ ಬಳಿಕ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗುವುದಾಗಿ ಭರವಸೆ ನೀಡಿದನು.
ಇದನ್ನೂ ಓದಿ:ACC ಅಧ್ಯಕ್ಷರಾಗಿ 3ನೇ ಬಾರಿಗೆ ಮರುನೇಮಕಗೊಂಡ ಜಯ್​ ಷಾ
ಇದಾದ ಬಳಿಕ ಆರೋಪಿಯು ನನನಗೆ ಪದೇ ಪದೇ ನಗ್ನ ಚಿತ್ರ ಹಾಗೂ ವಿಡಿಯೋಗಳನ್ನು ಕಳಿಸುವಂತೆ ಒತ್ತಾಯಿಸುತ್ತಿದ್ದ. ಇದಾದ ಕೆಲ ದಿನಗಳ ಬಳಿಕ ಮದುವೆ ವಿಚಾರ ಪ್ರಸ್ತಾಪಿಸಿದಾಗ ಆತ ನನಗೆ ಬೆದರಿಕೆ ಹಾಕಿದ ಮತ್ತು ಸಾಮಾಜಿಕ ಜಾಲತಾಣ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ ಈ ಸಂಬಂಧ ನಾನು ದೂರು ದಾಖಲಿಸಿದ್ದೇನೆ ಎಂದು ನಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ನಟಿ ನೀಡಿದ ದೂರಿನ ಮೇರೆಗೆ ವ್ಯಕ್ತಿಯ ವಿರುದ್ಧ 376 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 5 =
Remember me
