ಮುಂಬೈ:ಬಿಗ್​ಬಾಸ್​​ ವಿಜೇತ ಎಲ್ವಿಶ್​​ ಯಾದವ್​ ಇತ್ತೀಚೆಗೆ ಸಾಕಷ್ಟು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ.ರೇವ್ ಪಾರ್ಟಿಯಲ್ಲಿ ಅಮಲು ಪದಾರ್ಥವಾಗಿ ಹಾವಿನ ವಿಷ ಪೂರೈಕೆ ಮಾಡುತ್ತಿದ್ದಪ್ರಕರಣದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಇದೀಗ ದುಬಾರಿ ಬೆಲೆ ಬಾಳುವ ಕಾರು ಖರೀದಿ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.
ಖ್ಯಾತ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿಯ ವಿಜೇತ ಎಲ್ವಿಶ್ ಯಾದವ್ ಅವರನ್ನು ವನ್ಯಜೀವಿ ಕಾಯ್ದೆ ಅಡಿ ಪೊಲೀಸರು ಬಂಧಿಸಿದ್ದರು. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷದ ವ್ಯವಸ್ಥೆ ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿದೆ ಜತೆಗೆ ತಮ್ಮ ಕೆಲ ಯೂಟ್ಯೂಬ್ ವಿಡಿಯೋಗಳಿಗೆ ಶೂಟ್ ಮಾಡುವಾಗ ಹಾವುಗಳನ್ನು ಬಳಸಿಕೊಂಡ ಆರೋಪವೂ ಇದೆ.
ಹಾವಿನ ವಿಷ ಪೂರೈಕೆ ಮಾಡುತ್ತಿದ್ದ ಐವರನ್ನು ಈ ಹಿಂದೆ ಬಂಧಿಸಲಾಗಿತ್ತು. ಪ್ರತ್ಯೇಕ ಸೆಲ್‌ನಲ್ಲಿ ಸುಮಾರು ಒಂದು ವಾರ ಕಳೆದ ನಂತರ, ಅವರಿಗೆ ಜಾಮೀನು ನೀಡಲಾಯಿತು. ಯೂಟ್ಯೂಬರ್​​ ಆಗಿ ಸೋಷಿಯಲ್​​ ಮೀಡಿಯಾ ಮೂಲಕ ಕ್ರೇಜ್​​ ಪಡೆದಿದ್ದ ಎಲ್ವಿಶ್​​ ಯಾದವ್​​​​ ಬಿಗ್​ಬಾಸ್​​ ಕಾರ್ಯಕ್ರಮವು ಜನಮನ್ನಣೆ ತಂದು ಕೊಟ್ಟಿತ್ತು.
ಜೈಲಿನಿಂದ ಹೊರಬಂದ ಎಲ್ವಿಶ್​​​​ ಯಾದವ್​​ ಇತ್ತೀಚೆಗಷ್ಟೆ ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಕಪ್ಪು ಬಣ್ಣದ ಮರ್ಸಿಡಿಸ್ ಜಿ ವ್ಯಾಗನ್ ಮಾಡೆಲ್​​ ಕಾರನ್ನು ಖರೀದಿಸಿದ್ದಾರೆ.
A post shared by Elvish Raosahab (@elvish_yadav)

ಮರ್ಸಿಡಿಸ್​​ ಗ್ವಾಗನ್​​ ಮಾಡೆಲ್​​ ಕಾರಿನ ಮೌಲ್ಯ 3 ಕೋಟಿ ರೂಪಾಯಿಗೂ ಹೆಚ್ಚು ಎಂದು ವರದಿಯಾಗಿದೆ ಜಿ-ಕ್ಲಾಸ್​​ ಪೆಟ್ರೋಲ್​​ ಬೆಲೆ 4 ಕೋಟಿ. ರೂ. ಜಿ- ಕ್ಲಾಸ್​​ ಆಟೋಮ್ಯಾಟಿಕ್​​ (TC) ಬೆಲೆ 2.55 ಕೋಟಿ ರೂ. ಎಲ್ವಿಶ್​​ ತನ್ನ ಹೊಸ ಖರೀದಿಯಲ್ಲಿ ಸುಮಾರು ಮೂರು ಕೋಟಿ ವ್ಯಯಿಸಿದ್ದಾರೆ ಎನ್ನಲಾಗಿದೆ. ಎಲ್ವಿಶ್ ಯಾದವ್ ಖರೀದಿಸಿರುವ ಮರ್ಸಿಡಿಸ್ G350D ಮತ್ತು ಡೀಸೆಲ್ ಒಂದಾಗಿದೆ ಎನ್ನಲಾಗಿದೆ. ಈ ಕುರಿತಾದ ವಿಡಿಯೋವನ್ನು ಅರ ಸೋಶಿಯಲ್​​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೈನೋವಿನಲ್ಲೂ ಅಂತಿಮ ದರ್ಶನಕ್ಕೆ ಬಂದ ಡಿಬಾಸ್; ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ

ಚಿನ್ನ, ಬೆಳ್ಳಿ ಪಾನಿ ಪುರಿ..! ಮೋದಿ ತವರಲ್ಲಿ ಇದೇ ಚರ್ಚೆ; ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − one =
Remember me
