ಶ್ರೀನಗರ :ದೇಶದ ಅತಿದೊಡ್ಡ ಶಸ್ತ್ರಾಸ್ತ್ರ ಪರವಾನಗಿ ಹಗರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬೆಳಕಿಗೆ ತಂದಿದೆ. ಜಮ್ಮು ಮತ್ತು ಕಾಶ್ಮೀರದ ಹಲವು ಜಿಲ್ಲಾ ಮ್ಯಾಜಿಸ್ಟ್ರೇಟ್​(ಡಿಎಂ)ಗಳು ಕಳೆದ ಕೆಲವು ವರ್ಷಗಳಲ್ಲಿ ಲಕ್ಷಾಂತರ ಅಕ್ರಮ ಗನ್​ ಲೈಸೆನ್ಸ್​ಗಳನ್ನು ನೀಡಿದ್ದಾರೆ. ಈ ರೀತಿಯಾಗಿ ದೇಶದ ವಿವಿಧ ಭಾಗಗಳ ಜನರಿಗೆ ಇಲ್ಲಿ ಗನ್​ ಲೈಸೆನ್ಸ್​ಗಳನ್ನು ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಸಿಬಿಐ ನೀಡಿದೆ.
ಶಸ್ತ್ರಾಸ್ತ್ರಗಳ ಡೀಲರ್​ಗಳೊಂದಿಗೆ ಕೈಜೋಡಿಸಿದ್ದ ರಾಜ್ಯದ ಹಲವು ಡಿಎಂಗಳು ಹಣಕ್ಕಾಗಿ 2 ಲಕ್ಷಕ್ಕೂ ಹೆಚ್ಚು ಕಾನೂನುಬಾಹಿರವಾದ ಗನ್​ ಲೈಸೆನ್ಸ್​ಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಶನಿವಾರದಂದು, ಈ ತನಿಖೆಯ ಅಂಗವಾಗಿ, ಸಿಬಿಐ ಅಧಿಕಾರಿಗಳ ತಂಡವು 20 ಗನ್​ ಹೌಸ್​ಗಳೂ ಸೇರಿದಂತೆ 40 ಸ್ಥಳಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಮತ್ತು ದೆಹಲಿಯಲ್ಲಿ ಶೋಧ ಕಾರ್ಯ ನಡೆಸಿತು. ಎಂಟು ಜನ ಮಾಜಿ ಡಿಎಂಗಳನ್ನು ವಿಚಾರಣೆಗೆ ಒಡ್ಡಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರದ ಶಾಲೆಗಳಿಗೆ ತ್ರಿವರ್ಣ ಫಲಕಗಳು
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮುಂಚಿನ ಅವಧಿಯ, 2012ನೇ ಸಾಲಿನಷ್ಟು ಹಿಂದಿನ ಗನ್ ಲೈಸೆನ್ಸ್​ಗಳ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ. ಈ ಹಗರಣದ ವಿವಿಧ ಮಜಲುಗಳನ್ನೂ, ಯಾವ್ಯಾವ ಅಧಿಕಾರಿಗಳು ಈ ಅಕ್ರಮದಲ್ಲಿ ತೊಡಗಿದ್ದರು ಎಂಬುದನ್ನೂ ಸಿಬಿಐ ಆಳವಾಗಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಆರ್ಮ್ಸ್​​ ಲೈಸೆನ್ಸ್​ ರಾಕೆಟ್​ ನಡೆಯುತ್ತಿದೆ ಎಂಬ ವಿಚಾರವನ್ನು ರಾಜಸ್ತಾನ ಪೊಲೀಸರ ಆ್ಯಂಟಿ ಟೆರರಿಸಂ ಸ್ಕ್ವಾಡ್ 2017 ರಲ್ಲಿ ಮೊದಲ ಬಾರಿಗೆ ಬೆಳಕಿಗೆ ತಂದಿತ್ತು. ಆಗ ರಾಜಸ್ತಾನದ ಕೆಲವು ಕ್ರಿಮಿನಲ್​ಗಳು ಜಮ್ಮುಕಾಶ್ಮೀರದ ಗನ್​ ಲೈಸೆನ್ಸ್​ಗಳನ್ನು ಹೊಂದಿರುವುದು ಪತ್ತೆಯಾಗಿತ್ತು. ಜಮ್ಮು-ಕಾಶ್ಮೀರದಲ್ಲಿ 2018 ರಲ್ಲಿ ರಾಜ್ಯಪಾಲರ ಆಡಳಿತ ವಿಧಿಸಲಾದ ನಂತರ ಆಗಿನ ರಾಜ್ಯಪಾಲರಾಗಿದ್ದ ಎನ್​.ಎನ್.ವೋಹ್ರ ಅವರು ಈ ಬಗೆಗಿನ ತನಿಖೆಯನ್ನು ಸಿಬಿಐಗೆ ವಹಿಸಿದ್ದರು.(ಏಜೆನ್ಸೀಸ್)
ಅಪರಾಧ ತಡೆಯಲು ಹೊಯ್ಸಳಕ್ಕೆ ಹೊಸ ಹುರುಪು! ದಕ್ಷತೆ ಹೆಚ್ಚಿಸಲು ತಯಾರಿ
ಬೆನ್ನು ಮೂಳೆಯ ಆರೋಗ್ಯಕ್ಕೆ ಬಹು ಉಪಕಾರಿ ಈ ಆಸನ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 9 =
Remember me
