ಬಿಹಾರ: 10 ವರ್ಷದ  ಬಾಲಕನೊಬ್ಬ  ಹುಣಸೆಹಣ್ಣು ತಿಂದು ಸಾವನ್ನಪ್ಪಿದ್ದಾನೆ. ಮುಜಾಫರ್‌ಪುರ ಜಿಲ್ಲೆಯಲ್ಲಿ  ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಮುಜಾಫರ್‌ಪುರದ ಸಕ್ರಾದ ಮಚ್ಚಿ ಗ್ರಾಮದ ರಾಜೇಶ್ ಮಹತೋ ಅವರ 10 ವರ್ಷದ ಮಗ ಆದರ್ಶ್ ಹುಣಸೆಹಣ್ಣು ತಿಂದು ಸಾವನ್ನಪ್ಪಿದ್ದಾನೆ.ಆದರ್ಶ್ ಮೂರನೇ ತರಗತಿ ವಿದ್ಯಾರ್ಥಿ. ಹುಣಸೆಹಣ್ಣು ಈತನ ಪ್ರಾಣಕ್ಕೆ ಕುತ್ತು ತಂದಿದೆ.
ವರದಿಗಳ ಪ್ರಕಾರ, ಆದರ್ಶ್ ಶನಿವಾರ ಹುಣಸೆಹಣ್ಣು ತಿನ್ನುತ್ತಿದ್ದನು ಈ ವೇಳೆ  ಹುಣಸೆ ಬೀಜಗಳನ್ನು ನುಂಗಿದ್ದನು.ಅವನಿಗೆ ಉಸಿರಾಡಲು ಕಷ್ಟವಾಯಿತು.ಕುಟುಂಬಸ್ಥರು  ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಆದರೆ ಇದ್ದಕ್ಕಿದ್ದಂತೆ ಬಾಲಕನ ಸ್ಥಿತಿ ಗಂಭೀರವಾಯಿತು. ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಮುಜಾಫರ್‌ಪುರಕ್ಕೆ ಕರೆದೊಯ್ದಿದ್ದಾರೆ.  ಆದರ್ಶ್ ಅವರ ಶ್ವಾಸಕೋಶಕ್ಕೆ ಹುಣಸೆ ಬೀಜಗಳು ಅಂಟಿಕೊಂಡಿರುವುದು ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನನ್ನು  ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಪಾಟ್ನಾಗೆ ಕಳುಹಿಸಿದ್ದಾರೆ.
ವೈದ್ಯರ ಸಲಹೆಯಂತೆ ಕುಟುಂಬಸ್ಥರು ಆದರ್ಶ್ ಜತೆ ಪಾಟ್ನಾಗೆ ತೆರಳಿದರು. ಆದರೆ ಬಾಲಕನನ್ನು ಪಾಟ್ನಾಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಹುಣಸೆ ಹಣ್ಣಿಗೆ ಮಗು ಬಲಿಯಾಗಿರುವ ಸುದ್ದಿ ಇಡೀ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಂದು ಸಣ್ಣ ತಪ್ಪು ನಗುಮುಖದ ಮಗುವಿನ ಜೀವವನ್ನು ತೆಗೆದುಕೊಂಡಿತು. ಬಾಲಕನ ಸಾವಿಗೆ ಪೋಷಕರು ಅಳಲು ತೋಡಿಕೊಂಡರು. ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
48ನೇ ವರ್ಷದ ಸುಶ್ಮಿತಾ ಸೇನ್ ತನಗಿಂತ 15 ವರ್ಷ ಕಿರಿಯ ವಯಸ್ಸಿನ ಹುಡುಗನನ್ನು ಮದುವೆ ಆಗ್ತಾರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
