ಪಟ್ನಾ:ಅಪ್ರಾಪ್ತ ವಯಸ್ಕ ಬಾಲಕಿ ಒಬ್ಬಳು ತನ್ನ ಚಿಕ್ಕಮ್ಮ ಹಾಗೂ ಪ್ರಿಯಕರನ ಸಹಾಯದಿಂದ ತನ್ನ ತಂಗಿಯನ್ನು ಹತ್ಯೆ ಮಾಡಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣವನ್ನು ಮರೆಮಾಚಲು ಮೃತ ಬಾಲಕಿಯ ಮುಖವನ್ನು ಆ್ಯಸಿಡ್​ನಿಂದ ಸುಟ್ಟು ಕೈ ಬೆರಳುಗಳನ್ನು ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರವಿ ರಂಜನ್​ ಕುಮಾರ್​ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೇ 15ರಂದು ಮೃತ ಬಾಲಕಿಯ ಪೋಷಕರು ಕಾರ್ಯಕ್ರಮದ ನಿಮಿತ್ತ ಸಂಬಂಧಿಕರ ಊರಿಗೆ ಹೋಗಿದ್ದ ಸಂದರ್ಭದಲ್ಲಿ 13 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿ ತನ್ನ ಪ್ರಿಯಕರ(18ವರ್ಷ)ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಇಬ್ಬರು ಇರುವುದನ್ನು ಬಾಲಕಿಯ ಸಹೋದರಿ(9ವರ್ಷ) ಗಮನಿಸಿದ್ದಾಳೆ.
ತನ್ನ ಪ್ರಿಯಕರನ ಜೊತೆ ಇರುವುದನ್ನು ತನ್ನ ಸಹೋದರಿ ಎಲ್ಲಿ ಪಾಲಕರಿಗೆ ಹೇಳುತ್ತಾಳೆ ಎಂದು ಭಯಗೊಂಡ ಬಾಲಕಿ ಮೊಂಡಾದ ವಸ್ತುವಿನಿಂದ ಆಕೆಯ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾಳೆ. ಬಳಿಕ ಆಕೆಯ ಮತದೇಹವನ್ನು ಮನೆಯ ಒಳಗಡೆ ಒಂದು ಪೆಟ್ಟಿಗೆಯಲ್ಲಿ ಇರಿಸಿದ್ದಾರೆ.
ಇದನ್ನೂ ಓದಿ:ಡಿಕೆಶಿ vs ಎಂಬಿಪಿ; ಜಲಸಂಪನ್ಮೂಲ ಖಾತೆಗಾಗಿ ಶುರುವಾಯಿತು ಹಗ್ಗಜಗ್ಗಾಟ!
ಮೂರು ದಿನ ಕಳೆದ ಬಳಿಕ ದೇಹದಿಂದ ದುರ್ವಾಸನೆ ಬರಲು ಶುರುವಾದಾಗ ಅಪ್ರಾಪ್ತ ವಯಸ್ಕ ಬಾಲಕಿ ತನ್ನ ಚಿಕ್ಕಮ್ಮ ಹಾಗೂ ಪ್ರಿಯಕರನ ಸಹಾಯದಿಂದ ಶವವನ್ನು ದೂರದಲ್ಲಿರುವ ಜಮೀನೊಂದರಲ್ಲಿ ಮುಖದ ಮೇಲೆ ಆ್ಯಸಿಡ್​ ಎರಚಿ ಹಾಗೂ ಆಕೆಯ ಕೈ ಬೆರಳುಗಳನ್ನು ಕತ್ತರಿಸಿ ಎಸೆದಿದ್ದಾರೆ.
ಬಾಲಕಿಯ ಪೋಷಕರು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್​ ಆದ ನಂತರ ಮನೆಯಲ್ಲಿ ತಮ್ಮ ಮಗಳು ಇಲ್ಲದಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ನೆರೆ ಹೊರೆಯವರು ಗೊತ್ತಿಲ್ಲಾ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ ಕಳೆದು ಹೋಗಿರುವ ತಮ್ಮ ಮಗಳನ್ನು ಹುಡುಕಿಕೊಡುವಂತೆ ವಿನಂತಿಸಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ದೂರದ ಜಮೀನು ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ದೊರೆತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅನುಮಾನಗೊಂಡ ಪೊಲೀಸರು ಮೃತ ಬಾಲಕಿಯ ಸಹೋದರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದ್ದು ಆಕೆಯ ಚಿಕ್ಕಮ್ಮ ಹಾಗೂ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರವಿ ರಂಜನ್​ ಕುಮಾರ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − two =
Remember me
