ಪಟನಾ:ಪುಟಾಣಿ ಮಕ್ಕಳು ಬೆಂಕಿಯಿಂದ ದೂರವಿರಬೇಕು ಎಂದು ಹೇಳುತ್ತಾರೆ. ಆದರೆ ಅದನ್ನು ಲೆಕ್ಕಿಸದ ಮಕ್ಕಳು, ಗುಡಿಸಲೊಂದರಲ್ಲಿ ಜೋಳ ಬೇಯಿಸಿಕೊಂಡು ತಿನ್ನಲು ಹೋಗಿ ಸಜೀವ ದಹನವಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಅರಿಯಾ ಪ್ರದೇಶದ ಪಸಾಲಿ ಬ್ಲಾಕ್​ನಲ್ಲಿ ಇಂತಹ ಘಟನೆ ನಡೆದಿದೆ. ಮೂರರಿಂದ ಆರು ವರ್ಷದ ಆರು ಮಕ್ಕಳು ಮಂಗಳವಾರದಂದು ಜೋಳ ಬೇಯಿಸಲು ಮುಂದಾಗಿದ್ದಾರೆ. ಗುಡಿಸಲೊಂದರಲ್ಲಿ ಸೇರಿಕೊಂಡು ಜೋಳ ಬೇಯಿಸಲು ಬೆಂಕಿ ಹಚ್ಚಿದ್ದಾರೆ. ಆ ಬೆಂಕಿ ಗುಡಿಸಲಿಗೂ ತಗುಲಿದ್ದು, ಪೂರ್ತಿ ಗುಡಿಸಲು ಹೊತ್ತಿ ಉರಿದಿದೆ. ಘಟನೆಯಲ್ಲಿ ಆರೂ ಮಕ್ಕಳು ಸಜೀವ ದಹನವಾಗಿದ್ದಾರೆ.
ಗುಲ್ನಾಜ್ (3), ಬರ್ಕಾಸ್(4), 5 ವರ್ಷದ ಅಶ್ರಫ್, ಅಲಿ ಹಸನ್ ಮತ್ತು ಖುಶಿಹಾರ್ ಹಾಗೂ 6 ವರ್ಷದ ದಿಲ್ವಾರ್​ ಮೃತರಾಗಿರುವ ಮಕ್ಕಳು. ಸದ್ಯ ಬ್ಲಾಕ್​ನಲ್ಲಿ ಸ್ಮಶಾಣ ಮೌನ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. (ಏಜೆನ್ಸೀಸ್​)
ಸ್ನಾನ ಮಾಡಿ ಸಂತಾನಾಭಿವೃದ್ಧಿಗೆ ಕೂರುತ್ತವೆ ಏಡಿಗಳು! ಅಚ್ಚರಿ ತರಿಸುವ ವಿಚಾರಗಳಿವು..

ಒಂದು ಗಂಟೆಗಿಂತ ಹೆಚ್ಚು ಕಾಲ ಮಾರ್ಕೆಟ್​ನಲ್ಲಿದ್ದರೆ ಫೈನ್​! ಆದೇಶ ಹೊರಡಿಸಿದ ಜಿಲ್ಲಾಡಳಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
