ಪಟನಾ:ಎಕ್ಸಿಟ್​ ಪೋಲ್​ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗುವಂತಹ ಫಲಿತಾಂಶ ಬಿಹಾರದಲ್ಲಿ ಬಂದಿದೆ. ಆರ್​ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಗೆ ಈ ಬಾರಿಯ ಬಿಹಾರ ಗದ್ದುಗೆ ಎಂದು ಅನೇಕ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಫಲಿತಾಂಶ ತಲೆಕೆಳಗಾಗಿದ್ದು, ಜೆಡಿಯು-ಬಿಜೆಪಿ ನೇತೃತ್ವದ ಎನ್​ಡಿಎಗೆ ಬಹುಮತ ಸಿಕ್ಕಿದ್ದು, ನಿತೀಶ್​ ಕುಮಾರ್​ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗೇರಲಿದ್ದಾರೆ.
ಅತಿ ಕಿರಿಯ ವಯಸ್ಸಿನ ಸಿಎಂ ಆಗುವ ಕನಸು ಕಂಡಿದ್ದ ತೇಜಸ್ವಿ ಯಾದವ್​ಗೆ ಫಲಿತಾಂಶ ತಣ್ಣೀರೆರಚಿದೆ. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರ್​ಜೆಡಿ ಆರೋಪಿಸಿದೆ. ಸ್ಥಳೀಯ ಆಡಳಿತ ಮಂಡಳಿಯ ಸುಮಾರು 8ಕ್ಕೂ ಅಧಿಕ ಕ್ಷೇತ್ರಗಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಆಡಳಿತ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇದನ್ನೂ ಓದಿ:Web Exclusive |ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಮೈಸೂರು ಮೃಗಾಲಯ : ಚೇತರಿಕೆ ಕಾಣದ ಪ್ರವಾಸೋದ್ಯಮ​ಆರ್​ಜೆಡಿ ಮತ್ತು ಕಾಂಗ್ರೆಸ್​ ನಾಯಕರನ್ನು ಒಳಗೊಂಡ ನಿಯೋಗವೊಂದು ಬಿಹಾರ ರಾಜಧಾನಿ ಪಟನಾದಲ್ಲಿರುವ ಚುನಾವಣಾ ಆಯೋಗಕ್ಕೆ ತೆರಳಿ ದೂರು ಸಲ್ಲಿಸಿದೆ. ಆಡಳಿತಾರೂಢ ಎನ್​ಡಿಎ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದೆ.
ಆರಂಭದಲ್ಲಿ ನಮ್ಮ ಅಭ್ಯರ್ಥಿಗಳು 5 ರಿಂದ 600 ಮತಗಳ ಅಂತರದಿಂದ ಗೆದ್ದಿರುವುದಾಗಿ ಹೇಳಿದರು. ಆದರೆ, ಕೊನೆಯಲ್ಲಿ 12, 13 ಮತಗಳ ಅಂತರದಲ್ಲಿ ಸೋತಿರುವುದಾಗಿ ಹೇಳಿದರು ಎಂದು ಆರ್​ಜೆಡಿ ನಾಯಕರು ದೂರಿದ್ದಾರೆ.
ಚುನಾವಣಾ ಆಯೋಗ ದೂರನ್ನು ಸ್ವೀಕರಿಸಿದ್ದು, ಮರು ಮತಎಣಿಕೆ ಮಹಾಮೈತ್ರಿ ನಾಯಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ತಂಡಸ್ಪೂರ್ತಿ, ಒಗ್ಗಟ್ಟಿನ ಪ್ರಯತ್ನಕ್ಕೆ ಒಲಿದ ಗೆಲುವು : ರಾರಾ ನಗರ, ಶಿರಾದಲ್ಲಿ ಪಾರಮ್ಯ ಮೆರೆದ ಬಿಜೆಪಿ
ಇನ್ನು ಮಂಗಳವಾರ 8 ಗಂಟೆಗೆ ಆರಂಭವಾದ ಮತದಾನ ತಡರಾತ್ರಿಯಾದರೂ ಮುಗಿಯಲಿಲ್ಲ. 243 ಕ್ಷೇತ್ರಗಳ ಪೈಕಿ ಬಿಜೆಪಿ 74, ಜೆಡಿಯು 43, ಎಚ್​ಎಎಂ 4, ವಿಕಾಸ ಶೀಲ್ ಇನ್​ಸಾನ್ ಪಾರ್ಟಿ 4, ಎಲ್​ಜೆಪಿ 1 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಆರ್​ಜೆಡಿ 75 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮೈತ್ರಿಕೂಟ ನಿರೀಕ್ಷಿತ ಸರಳ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಕಾರಣ ಪ್ರತಿಪಕ್ಷದಲ್ಲೇ ಕೂರಬೇಕಾದ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ 19, ಎಐಎಂಇಐಎಂ 5, ಎಡರಂಗ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.(ಏಜೆನ್ಸೀಸ್​)
ನಿತೀಶ್ ಕೈಗೆ ಬಿಹಾರದ ಚುಕ್ಕಾಣಿ : ಎನ್‍ಡಿಎಗೆ ರೋಚಕ ಗೆಲುವು-ಬಿಜೆಪಿ 74, ಜೆಡಿಯು 43

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 3 =
Remember me
