ಪಟನಾ:ರಾಜ್ಯ ಬಿಜೆಪಿ ವಕ್ತಾರನಿಗೆ ಗುಂಡಿಕ್ಕಿ ಕೊಲೆ ಮಾಡುವ ಪ್ರಯತ್ನ ಮಾಡಿರುವ ಘಟನೆ ಬಿಹಾರದ ಮುಂಗರ್​ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ನಾಯಕ ಅಜ್ಫರ್ ಶಮ್ಸಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ಎಎನ್​ಐ ವರದಿ ಮಾಡಿದೆ.
ಇದನ್ನೂ ಓದಿ:14 ವರ್ಷದ ಬಾಲಕಿಗೆ ಮದ್ಯಪಾನ ಮಾಡಿಸಿ ಸೆಕ್ಸ್​ ಮಾಡಿದ ಫುಟ್​ಬಾಲ್​ ಆಟಗಾರ!ಅಜ್ಫರ್ ಶಮ್ಸಿ ಬಿಜೆಪಿ ವಕ್ತಾರರಾಗಿರುವುದರ ಜತೆ ಕಾಲೇಜೊಂದರಲ್ಲಿ ಪ್ರೊಫೆಸರ್​ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಹೋದ್ಯೋಗಿಯೊಂದಿಗೆ ಕಲಹವಿತ್ತು ಎನ್ನಲಾಗಿದೆ. ಬುಧವಾರದಂದು ಅವರು ಕಾಲೇಜಿಗೆ ತೆರಳುವ ಸಮಯದಲ್ಲಿ ಜಮಾಲ್‌ಪುರ ಪ್ರದೇಶದ ಜಮಾಲ್‌ಪುರ ಕಾಲೇಜು ಬಳಿ 2-3 ಜನರು ಅವರ ಮೇಲೆ ದಾಳಿ ನಡೆಸಿದ್ದು, ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಅವರ ಸಹೋದ್ಯೋಗಿಯನ್ನು ಬಂಧಿಸಲಾಗಿದೆ.
ಅಜ್ಫರ್ ಶಮ್ಸಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಅವರ ಸಹೋದ್ಯೋಗಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್​ಪಿ ತಿಳಿಸಿದ್ದಾರೆ. (ಏಜೆನ್ಸೀಸ್​)
ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಹಳೆಯ ಗಾಡಿ ಮಾಲೀಕರಿಗೆ ಹೊಸ ಟ್ಯಾಕ್ಸ್​! ಶೀಘ್ರವೇ ಜಾರಿಯಾಗಲಿದೆ ಗ್ರೀನ್​ ಟ್ಯಾಕ್ಸ್​ ನಿಯಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
