ಪಟನಾ: ಬಿಹಾರ್​ದ ಗೋಪಾಲ್​ಗಂಜ್​ನಲ್ಲಿ ಗಂಡಕ್​ ನದಿಗೆ ಹಾಕಲಾದ ಸತ್ತರ್​ಘಾಟ್ ಸೇತುವೆ ಒಂದು ಭಾಗ ಕುಸಿದು ಬಿದ್ದಿದೆ. ಒಂದು ತಿಂಗಳ ಹಿಂದಷ್ಟೇ ಈ ಸೇತುವೆಯನ್ನು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ಉದ್ಘಾಟನೆ ಮಾಡಿದ್ದರು.ಒಂದೇ ತಿಂಗಳಲ್ಲಿ ಕುಸಿದು ಬಿದ್ದ ಸೇತುವೆಯನ್ನು ಇದೀಗ ಅಲ್ಲಿನ ರಾಜಕೀಯ ಮುಖಂಡರು ಮುಖ್ಯವಸ್ತುವನ್ನಾಗಿಟ್ಟುಕೊಂಡು, ಸರ್ಕಾರವನ್ನು ದೂಷಿಸುತ್ತಿದ್ದಾರೆ.
ಬಿಹಾರದಲ್ಲಿ ವಿಪರೀತ ಮಳೆಯಾಗುತ್ತಿದ್ದು, ನದಿಯ ನೀರಿನ ಮಟ್ಟ ಏರುತ್ತಿದೆ. ಮಳೆ ನೀರಿನ ರಭಸಕ್ಕೆ ಈ ಸೇತುವೆಯೂ ಕೊಚ್ಚಿಕೊಂಡು ಹೋಗಿದೆ.
ಸೇತುವೆ ಕೊಚ್ಚಿಕೊಂಡು ಹೋಗುತ್ತಿದ್ದಂತೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್​ ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.ಮುಖ್ಯ ಸತ್ತರ್​ಘಾಟ್​ ಸೇತುವೆಯಿಂದ 2 ಕಿಮೀ ದೂರದಲ್ಲಿ ಒಂದು ಭಾಗ ಕುಸಿದಿದೆ. ಇದರಿಂದ ಬ್ರಿಜ್​ಗೆ ದೊಡ್ಡ ಹಾನಿ ಏನೂ ಆಗಿಲ್ಲ ಎಂದು ರಸ್ತೆ ನಿರ್ಮಾಣ ಸಚಿವ ನಂದಕಿಶೋರ್ ಯಾದವ್​ ತಿಳಿಸಿದ್ದಾರೆ.ಇದನ್ನೂ ಓದಿ:ಕರೊನಾ ನಿಗ್ರಹಕ್ಕೆ ‘ಎರಡಲಗಿನ ಕತ್ತಿ’; ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್​ನಿಂದ ರಕ್ಷಣೆ
ಈ ಸೇತುವೆ ನಿರ್ಮಾಣ ಬರೋಬ್ಬರಿ 8 ವರ್ಷ ತೆಗೆದುಕೊಂಡಿದೆ. ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಸೇತುವೆ ಪೂರ್ಣಗೊಂಡು ಉದ್ಘಾಟನೆ ಮಾಡಲ್ಪಟ್ಟಿತ್ತು.
ಈ ಸೇತುವೆಯನ್ನು 264 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಎಂಟು ವರ್ಷ ತೆಗೆದುಕೊಂಡು ಕಟ್ಟಿದ ಸೇತುವೆ 29 ದಿನಗಳೂ ಬಾಳಿಕೆ ಬರಲಿಲ್ಲ. ಇದನ್ನು ನಿರ್ಮಿಸಿದ ಕಂಪನಿಯನ್ನು ಮುಖ್ಯಮಂತ್ರಿಯವರು ಬ್ಲ್ಯಾಕ್​ಲಿಸ್ಟ್​ಗೆ ಸೇರಿಸುವ ಕ್ರಮ ಕೈಗೊಳ್ಳುತ್ತಾರಾ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)
#WATCH: Portion of Sattarghat Bridge on Gandak River that was inaugurated by CM Nitish Kumar last month in Gopalganj collapsed yesterday, after water flow increased in the river due to heavy rainfall.#Biharpic.twitter.com/cndClJHIAa
— ANI (@ANI)July 16, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
