ಪಟನಾ:ಬಿಹಾರ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ನವೆಂಬರ್​ 7ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಎಲ್ಲ ಪಕ್ಷಗಳಿಂದ ಪ್ರಚಾರದ ಭರಾಟೆ ಜೋರಾಗಿದ್ದು, ಇದರ ನಡುವೆ ಹಾಲಿ ಸಿಎಂ ನಿತೀಶ್​ ಕುಮಾರ್​ ರಾಜಕೀಯ ನಿವೃತ್ತಿಯ ಮಾತುಗಳನ್ನಾಡುವ ಮೂಲಕ ಜನರನ್ನು ಅಚ್ಚರಿಗೆ ದೂಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಆಗಲಿದೆ ಎಂದು ಧಮ್ಧಾಹದ ಪೂರ್ನಿಯಾ ಸಮಾವೇಶದಲ್ಲಿ ಜೆಡಿಯು ಪಕ್ಷದ 69 ವರ್ಷದ ನಿತೀಶ್​ ಹೇಳಿದರು.
ಇದನ್ನೂ ಓದಿ:ಮಟಮಟ ಮಧ್ಯಾಹ್ನ ಮಹಿಳೆಯನ್ನು ಬೇಲಿಯೊಳಕ್ಕೆ ಎಳೆದೊಯ್ದ ಚಿರತೆ!
ದಯವಿಟ್ಟು ತಿಳಿಯಿರಿ, ಇಂದು ಪ್ರಚಾರದ ಅಂತಿಮ ದಿನ. ನಾಡಿದ್ದು ಅಂತಿಮ ಹಂತದ ಮತದಾನ ನಡೆಯಲಿದೆ. ಎಲ್ಲವು ಒಳ್ಳೆಯದಾಗಲಿದ್ದು, ಅಂತ್ಯವು ಸಹ ಒಳ್ಳೆಯದ್ದೇ ಆಗಿರುತ್ತದೆ ಎಂದು ನಿತೀಶ್​ ತಿಳಿಸಿದರು.
ಅಂತಿಮ ಹಂತದ ಪ್ರಚಾರ ಹಿನ್ನೆಲೆಯಲ್ಲಿ ನಿತೀಶ್​ ಈ ಮಾತುಗಳನ್ನಾಡಿದರು. ಬಿಹಾರದ ಮೂರನೇ ಅಥವಾ ಅಂತಿಮ ಹಂತದ ಚುನಾವಣೆ ನ. 7ರಂದು ನಡೆಯಲಿದ್ದು, ಬಿಹಾರದ ಗದ್ದುಗೆ ಯಾರು ಏರಲಿದ್ದಾರೆ ಎಂಬುದು ನ. 10ರಂದು ನಿರ್ಧಾರವಾಗಲಿದೆ.(ಏಜೆನ್ಸೀಸ್​)
This is my last election, says Bihar CM and JD(U) Chief Nitish Kumar during an election rally in Purnia#BiharElections2020pic.twitter.com/vLSL4uQd4v
— ANI (@ANI)November 5, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
