ಕೋಲ್ಕತ:ಕಳ್ಳತನ ಪ್ರಕರಣದ ತನಿಖೆಗೆಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಬಿಹಾರದ ಪೊಲೀಸ್​ ಅಧಿಕಾರಿಯನ್ನು ಗ್ರಾಮಸ್ಥರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬಂಗಾಳದ ಉತ್ತರ ದಿನಾಜ್​ಪುರದಲ್ಲಿ ನಡೆದಿದೆ.
ಬಿಹಾರದ ಕಿಶಾನ್​ಗಂಜ್​ ಪೊಲೀಸ್​ ಠಾಣೆಯ ಸ್ಟೇಸನ್​ ಹೌಸ್​ ಆಫೀಸರ್​ ಅಶ್ವಿನ್​ ಕುಮಾರ್​ ಮೃತ ದುರ್ದೈವಿ. ಉತ್ತರ ದಿನಾಜ್​ಪುರ್​ನ ಗೋಲ್ಪೋಖರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಘಟನೆ ನಡೆದಿದೆ. ಈ ಗ್ರಾಮದ ಗುಂಪೊಂದು ಅಶ್ವಿನ್​ ಅವರನ್ನು ಹಿಡಿದು ಥಳಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ಅಶ್ವಿನ್​ ಅವರು ಬೈಕ್​ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡ್​ ಮಾಡಲು ಗ್ರಾಮಕ್ಕೆ ಬಂದಿದ್ದಾಗ ಘಟನೆ ನಡೆದಿದೆ. ಇಸ್ಲಾಂಪುರ್​ ಎಸ್​ಪಿ ನಮ್ಮೊಂದಿಗಿದ್ದಾರೆ. ಅಶ್ವಿನ್​ ಮೇಲೆ ದಾಳಿ ಮಾಡಿದವರನ್ನು ನಾವು ಬಂಧಿಸುತ್ತೇವೆ ಎಂದು ಐಜಿ ಪೂರ್ನಿಯಾ ರೇಂಜ್​ ಹೇಳಿದ್ದಾರೆ.
ಇದನ್ನೂ ಓದಿರಿ:ರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು
ಅಶ್ವಿನ್​ ಅವರು ಖದೀಮನಿಗಾಗಿ ಹುಡುಕಾಡುವಾಗ ಅವರಿಗೆ ಸ್ಥಳೀಯ ಪೊಲೀಸರ ನೆರವು ಸಿಗಲಿಲ್ಲ. ಹೀಗಾಗಿ ಏಕಾಂಗಿಯಾಗಿ ಕಾರ್ಯಾಚರಣೆಗೆ ಇಳಿದಿದ್ದೇ ಅವರಿಗೆ ಮುಳುವಾಯಿತು ಎಂದು ಹೇಳಲಾಗುತ್ತಿದೆ. ಸದ್ಯ ಘಟನೆ ಸಂಬಂಧ ಓರ್ವ ಆರೋಪಿಯನ್ನು ಪಂಜಿಪರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ತೆರಳುವ ಮುನ್ನ ಅಶ್ವಿನ್​ ಅವರು ಬಂಗಾಳದ ಸ್ಥಳೀಯ ಪೊಲೀಸ್​ ಠಾಣೆಯ ನೆರವು ಕೇಳಿದ್ದರು. ಅವರು ಸಹ ಒಂದು ತಂಡವನ್ನು ಕಳುಹಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ, ತಮ್ಮ ಮಾತನ್ನು ಅವರು ಉಳಿಸಿಕೊಳ್ಳಲಿಲ್ಲ ಎಂದು ಬಿಹಾರ ಪೊಲೀಸ್​​ ಅಸೋಸಿಯೇಷನ್​ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದೆ.
ಆದಾಗ್ಯು ಅಶ್ವಿನ್​ ಅವರು ಉತ್ತರ ದಿನಾಜ್​ಪುರದ ಗ್ರಾಮಕ್ಕೆ ಅಶ್ವಿನ್​ ಭೇಟಿ ನೀಡಿದಾಗ ಗ್ರಾಮಸ್ಥರು ಅಶ್ವಿನ್​ ಮೇಲೆ ದಂಡ ಮತ್ತು ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.(ಏಜೆನ್ಸೀಸ್​)
4 ರಾಜ್ಯಗಳಲ್ಲಿ ಮತದಾನ ಮುಗಿದ ಮೇಲೆ ಬಂತು ಚುನಾವಣಾ ಆಯೋಗದ ಕರೊನಾ ಎಚ್ಚರಿಕೆ !

ರೈಲು ನಿಲ್ದಾಣದಲ್ಲಿ ನೀರು ತರಲು ಹೋದ ಪತ್ನಿ ಮರಳಲೇ ಇಲ್ಲ: ಸಿಸಿಟಿವಿ ನೋಡಿದ ಪತಿಗೆ ಶಾಕ್​!

ರಾತ್ರೋರಾತ್ರಿ ಸ್ಟಾರ್​ ಆದ ಬಳಿಕ ಅನುಭವಿಸಿದ ನೋವಿನ ಕತೆ ಬಿಚ್ಚಿಟ್ಟ ಆರ್​ಸಿಬಿ ಗರ್ಲ್​..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + six =
Remember me
