ಪಟನಾ:ಬಿಹಾರದ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯನ್ನು ಯುಪಿಎ ಪೂರ್ಣಗೊಳಿಸಿದೆ. ಈ ವಿಷಯವನ್ನು ಮೈತ್ರಿಕೂಟದ ನಾಯಕರು ಇಂದು ಪ್ರಕಟಿಸಿದ್ದಾರೆ. ಬಿಹಾರ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವುದಕ್ಕೆ ಯುಪಿಎ ನಾಯಕರು ತೀರ್ಮಾನಿಸಿದ್ದು, ಭಿನ್ನಮತ ಭುಗಿಲೇಳದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ. ತೇಜಸ್ವಿಯಾದವ್ ಇಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಸೀಟುಹಂಚಿಕೆ ವಿಚಾರ ಪ್ರಕಟಿಸಿದ ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ(ಎಂ) 4, ಸಿಪಿಐ 6, ಸಿಪಿಐ (ಎಂಎಲ್​) 19, ಕಾಂಗ್ರೆಸ್ 70, ಆರ್​ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ವಾಲ್ಮೀಕಿ ನಗರ ಲೋಕಸಭಾ ಉಪಚುನಾವಣೆಯ ಹೊರತಾಗಿ ಈ ಸೀಟು ಹಂಚಿಕೆ ನಡೆದಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಪರಸ್ಪರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಕೆ.ಕಲ್ಯಾಣ್​ ದಂಪತಿ; ಶೀಘ್ರದಲ್ಲೇ ವಿಡಿಯೋ ಬಿಡುಗಡೆ ಮಾಡ್ತಾರಂತೆ…!
ಬಿಹಾರ ವಿಧಾನಸಭಾ ಚುನಾವಣೆಯನ್ನು ಯುಪಿಎ ಮೈತ್ರಿಕೂಟದ ಪಕ್ಷಗಳೆಲ್ಲವೂ ಒಟ್ಟಾಗಿ ಎದುರಿಸಲಿವೆ. ಕಾಂಗ್ರೆಸ್​, ಆರ್​ಜೆಡಿ, ಸಿಪಿಐ, ಸಿಪಿಎಂಗಳ ಜತೆಗೆ ವಿಕಾಸ್​ಶೀಲ್ ಇನ್ಸಾನ್ ಪಾರ್ಟಿ ಕೂಡ ಮೈತ್ರಿಕೂಟ ಸೇರ್ಪಡೆಗೊಂಡಿದೆ. ಬಿಹಾರದಲ್ಲಿ ಯುಪಿಎ ಮೈತ್ರಿಕೂಟಕ್ಕೆ ಆರ್​ಜೆಡಿಯದ್ದೇ ನಾಯಕತ್ವ ಎಂದು ಕಾಂಗ್ರೆಸ್​ ನಾಯಕ ಅವಿನಾಶ್ ಪಾಂಡೆ ಹೇಳಿದ್ದಾರೆ. (ಏಜೆನ್ಸೀಸ್)
‘ರಾಹುಲ್ ಗಾಂಧಿ ಡ್ರಾಮಾ ಮಾಡೋಕೆ ನಾಳೆ ಪಂಜಾಬ್​ಗೆ ಬರ್ತಿದ್ದಾರೆ’!!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
