ಪಟನಾ:ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಹಿಂದುಸ್ತಾನಿ ಅವಾಂ ಮೋರ್ಚಾ ಅಧ್ಯಕ್ಷ ಜಿತನ್ ರಾಮ್ ಮಾಂಜಿ ಇಮಾಮ್​ ಗಂಜ್​ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇದೇ ವೇಳೆ, ಹಸನ್​ಪುರ ಕ್ಷೇತ್ರದಲ್ಲಿ ಆರ್​ಜೆಡಿ ನಾಯಕ ತೇಜ್​ ಪ್ರತಾಪ್ ಯಾದವ್ ಗೆಲುವು ಕಂಡಿದ್ದಾರೆ.
ಇಮಾಮ್​ಗಂಜ್​ನಲ್ಲಿ ಮಾಂಜಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಆರ್​ಜೆಡಿಯ ಉದಯ್ ನಾರಾಯಣ್​ ಚೌಧರಿ ಅವರನ್ನು 16,034 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಮಾಂಜಿ ಅವರ ಪಕ್ಷ ಎನ್​ಡಿಎ ಮೈತ್ರಿಕೂಟದಲ್ಲಿದೆ. ಮಾಂಜಿ ಈ ಹಿಂದೆ ಬಿಹಾರದ ಮುಖ್ಯಮಂತ್ರಿಯೂ ಆಗಿದ್ದರು. 1980ರ ದಶಕದಿಂದ ಅನೇಕ ಸಲ ಮಾಂಜಿ ವಿಧಾನಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ:‘ಆರ್​ಆರ್​ನಗರದ್ದು ಆಘಾತ, ಶಿರಾ ರಿಸಲ್ಟಂತೂ ಅಚ್ಚರಿ- ಸೋಲಿನ ಹೊಣೆ ನಾನೇ ಹೊರುವೆ’
ಹಸನ್​ಪುರ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಯುನ ರಾಜ್ ಕುಮಾರ್ ರಾಯ್ ಅವರನ್ನು 21,139 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ತೇಜ್ ಪ್ರತಾಪ್ ಯಾದವ್ ತಮ್ಮ ಹಿಂದಿನ ಕ್ಷೇತ್ರ ವೈಶಾಲಿಯ ಮಹುವಾ ಕ್ಷೇತ್ರವನ್ನು ಬಿಟ್ಟು ಈ ಬಾರಿ ಸಮಸ್ಟಿಪುರ ಜಿಲ್ಲೆಯ ಹಸನ್​ಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗೆಲುವು ಕಂಡಿದ್ದಾರೆ. (ಏಜೆನ್ಸೀಸ್)
ವಿಜಯ ಮಲ್ಯ ಗಡಿಪಾರಿಗೂ ಮುನ್ನ ರಹಸ್ಯ ಕಾನೂನು ಅಗತ್ಯಗಳು ಪೂರೈಸಬೇಕು: ಬ್ರಿಟನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
