ಪಟನಾ:ಬಿಹಾರದಲ್ಲಿ ವಿಧಾನಸಭೆ ಚುನಾವಣೆಯ ಮೂರೂ ಹಂತದ ಮತದಾನ ಶನಿವಾರ ಮುಕ್ತಾಯವಾಗಿದ್ದು, ಈ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಈ ಬಾರಿ ಬಿಹಾರದಲ್ಲಿ ಅತಂತ್ರ ಸ್ಥಿತಿ ಉಂಟಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.
ಮಹಾಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದು ಕೆಲ ಸಮೀಕ್ಷೆಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ನಿತೀಶ್ ಸರ್ಕಾರ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಆರ್​ಜೆಡಿ ನೇತೃತ್ವದ ಮಹಾಮೈತ್ರಿಕೂಟ ಗೆಲುವಿನ ಸನಿಹ ಬರುವ ಲಕ್ಷಣಗಳು ಗೋಚರಿಸಿವೆ. ಆರ್​ಜೆಡಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳಿದೆ. 10ರಂದು ಫಲಿತಾಂಶ ಪ್ರಕಟವಾಗಲಿದೆ.
ಒಂದು ವೇಳೆ ಅಂತಂತ್ರ ಸ್ಥಿತಿ ಎದುರಾದರೆ ಸರ್ಕಾರ ರಚನೆ ಕಸರತ್ತು ಕುತೂಹಲ ಮೂಡಿಸಲಿದೆ. ಮತದಾನ ಶಾಂತಿಯುತ: ಬಿಹಾರದಲ್ಲಿ ಮೂರೂ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ. 57.58 ಮತದಾನ ದಾಖಲಾಗಿದೆ. ಜೋಕಿಹಟ್ ಕ್ಷೇತ್ರದ ಆರ್​ಜೆಡಿ ಅಭ್ಯರ್ಥಿ ಸರ್ಫರಾಜ್ ಅಲಂ ಪಕ್ಷದ ಬ್ಯಾಡ್ಜ್ ಧರಿಸಿ ಮತದಾನಕ್ಕೆ ಬಂದಾಗ ಸ್ವಲ್ಪ ಹೊತ್ತು ಗೊಂದಲ ಉಂಟಾಯಿತು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದ್ದಾರೆ.
ಬಿಜೆಪಿಯ ನೀರಜ್ ಕುಮಾರ್ ಸಿಂಗ್, ನಟ ಸುಶಾಂತ್ ಸಿಂಗ್ ರಜಪೂತ್​ರ ಸಂಬಂಧಿ ಹಾಗೂ ಕಾಂಗ್ರೆಸ್​ನ ಸುಭಾಷಿಣಿ ಯಾದವ್ (ಮಾಜಿ ಕೇಂದ್ರ ಸಚಿವ ಶರದ್ ಯಾದವ್​ರ ಪುತ್ರಿ), ಸ್ಪೀಕರ್ ಹಾಗೂ ಜೆಡಿಯುನ ವಿಜಯ್ ಕುಮಾರ್ ಚೌಧರಿ ಕಣದಲ್ಲಿರುವ ಪ್ರಮುಖ ಹುರಿಯಾಳುಗಳು. ಅಭ್ಯರ್ಥಿ ಕರೊನಾಗೆ ಬಲಿ: ಬೇನಿಪಟ್ಟಿ ಕ್ಷೇತ್ರದ ಪಕ್ಷೇತರ ಶಾಸಕ ನೀರಜ್ ಕುಮಾರ್ ಝಾ ಮತದಾನ ಪ್ರಕ್ರಿಯೆ ನಡುವೆಯೇ ನಿಧನರಾದರು.
ಸಮೀಕ್ಷೆಗಳು ಹೇಳಿದ್ದೇನು?
ವಿಧಾನಸಭೆ ಒಟ್ಟು ಸ್ಥಾನ: 243
ಬಹುಮತಕ್ಕೆ ಅಗತ್ಯ ಬಲ: 122
1. ಜನ್ ಕೀ ಬಾತ್:
2 ಸಿ-ವೋಟರ್
3. ಚಾಣಕ್ಯ, ನ್ಯೂಸ್-18
4. ಎಬಿಪಿ-ಸಿವೋಟರ್
ಚೌಹಾಣ್ ಸರ್ಕಾರ ಸೇಫ್?
ಮಧ್ಯಪ್ರದೇಶ ಉಪಚುನಾ ವಣೆಯಲ್ಲಿ ಬಿಜೆಪಿಗೆ 28ರಲ್ಲಿ 17 ಸ್ಥಾನ ಸಾಧ್ಯತೆ, ಶಿವರಾಜ್ ಸಿಂಗ್ ಸರ್ಕಾರ ಭದ್ರ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
