ಪಟನಾ:ಕರೊನಾ ಕಾಲದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು (ನ. 7) ಶಾಂತಿಯುತವಾಗಿ ಮುಗಿದಿದೆ. ಒಟ್ಟು 243 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ಮೂರು ಹಂತದಲ್ಲಿ ಮತದಾನ ನಡೆದಿದೆ.
ಅಕ್ಟೋಬರ್​ 28 ರಂದು ಮೊದಲ ಹಂತದಲ್ಲಿ 71 ಸ್ಥಾನಗಳಿಗೆ, ನವೆಂಬರ್​ 3ರಂದು ಎರಡನೇ ಹಂತದಲ್ಲಿ 94 ಸ್ಥಾನಗಳಿಗೆ ಮತ್ತು ಇಂದು (ನ, 7) ಅಂತಿಮವಾಗಿ 78 ಸ್ಥಾನಗಳಲ್ಲಿ ಮತದಾನ ನಡೆದಿದೆ. ಕಣದಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿದ್ದು, ನ. 10ರಂದು ಎಲ್ಲರ ಭವಿಷ್ಯದೊಂದಿಗೆ ಬಿಹಾರದ ಗದ್ದುಗೆ ಯಾರು ಏರಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬೀಳಲಿದೆ.
ಕಣದಲ್ಲಿ ಎನ್​ಡಿಎ ಮೈತ್ರಿಕೂಟ (ಬಿಜೆಪಿ-ಜೆಡಿಯು) ಹಾಗೂ ಮಹಾಮೈತ್ರಿ (ಕಾಂಗ್ರೆಸ್​-ಆರ್​ಜೆಡಿ) ನಡುವೆ ತೀವ್ರ ಪೈಪೋಟಿ ನಡೆದಿದೆ. ಎನ್​ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿ, ಹಾಲಿ ಸಿಎಂ ಹಾಗೂ ಜೆಡಿಯು ಸಂಸ್ಥಾಪಕ ನಿತೀಶ್​ ಕುಮಾರ್​ ಮತ್ತು ಮಹಾಮೈತ್ರಿಯ ಸಿಎಂ ಅಭ್ಯರ್ಥಿ ಆರ್​ಜೆಡಿಯ ತೇಜಸ್ವಿ ಯಾದವ್​ಗೆ ಪ್ರತಿಷ್ಠೆಯ ಕಣವಾಗಿದೆ.
ಮತದಾನೋತ್ತರ ಸಮೀಕ್ಷೆ ಹೇಳೋದ್ದೇನು?ಇಂದು ಮತದಾನ ಅಂತ್ಯವಾಗಿರುವ ಬೆನ್ನಲ್ಲೇ ಎಂದಿನಂತೆಯೇ ವಿವಿಧ ಮಾಧ್ಯಮಗಳು ಹಾಗೂ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ. ಇದೇ ಅಂತಿಮ ಫಲಿತಾಂಶ ಎಂದು ಹೇಳಲಾಗದು ಆದರೆ, ಬಹುತೇಕ ಸಮೀಕ್ಷೆಗಳು ನಿಜವಾಗಿರುವ ಸಾಕಷ್ಟು ಉದಾಹರಣೆಗಳು ಸಹ ಇವೆ. ಹೀಗಾಗಿ ಸಮೀಕ್ಷೆಯನ್ನು ಅಲ್ಲಗೆಳೆಯಲಾಗದು. ಬಿಹಾರದ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಈ ಬಾರಿ ಮಹಾಮೈತ್ರಿ (ಕಾಂಗ್ರೆಸ್​-ಆರ್​ಜೆಡಿ) ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಎನ್​​​ಡಿಎ (ಬಿಜೆಪಿ-ಜೆಡಿಯು) ಎರಡನೇ ಸ್ಥಾನಕ್ಕೆ ತೃಪ್ತಿಪಡಲಿದೆ ಎನ್ನಲಾಗುತ್ತಿದೆ.
ಟೈಮ್ಸ್​ ನೌ ಮತ್ತು ಸಿ-ವೋಟರ್​ ಸಮೀಕ್ಷೆಟೈಮ್ಸ್​ ನೌ ಮತ್ತು ಸಿ-ವೋಟರ್​ ಸಮೀಕ್ಷೆ ಪ್ರಕಾರ ಎನ್​ಡಿಎ 243ರಲ್ಲಿ 116 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮಹಾಮೈತ್ರಿ (ಕಾಂಗ್ರೆಸ್​-ಆರ್​ಜೆಡಿ) 120 ಸ್ಥಾನಗಳನ್ನು ಗೆಲ್ಲಲಿದೆ. ಎಲ್​ಜೆಪಿ 1 ಹಾಗೂ ಇತರರು 6 ಸ್ಥಾನಗಳನ್ನು ಗೆಲ್ಲಲಿದ್ದಾರೆ. ಸರ್ಕಾರ ರಚಿಸಲು 122 ಸ್ಥಾನಗಳ ಅವಶ್ಯಕತೆ ಇದ್ದು, ಸಮೀಕ್ಷೆ ಪ್ರಕಾರ ಅತಂತ್ರ ಫಲಿತಾಂಶ ಬರಲಿದ್ದು, ಗದ್ದುಗೆ ಯಾರು ಏರಲಿದ್ದಾರೆ ಎಂಬುದೇ ಆಸಕ್ತಿದಾಯಕವಾಗಿದೆ.
ಟಿವಿ 9 ಭಾರತ್​ ವರ್ಷ್​ ಸಮೀಕ್ಷೆಟಿವಿ 9 ಭಾರತ್​ ವರ್ಷ್​ ಸಮೀಕ್ಷೆ ಪ್ರಕಾರ ಯುಪಿಎ 115 ರಿಂದ 125, ಎನ್​ಡಿಎ 110 ರಿಂದ 120 ಇತರರು 13 ರಿಂದ 20 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದಾರೆ. ಇದರ ಪ್ರಕಾರ ಬಿಹಾರದಲ್ಲಿ ಮಹಾಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಇದೆ.
ರಿಪಬ್ಲಿಕ್​ ಟಿವಿ ಸಮೀಕ್ಷೆರಿಪಬ್ಲಿಕ್​ ಟಿವಿ ಸಮೀಕ್ಷೆಯಲ್ಲಿಯೂ ಮಹಾಮೈತ್ರಿಯೇ ಅಧಿಕಾರ ಹಿಡಿಯಲಿದೆ. ಬಿಜೆಪಿ ನೇತೃತ್ವದ ಎನ್​ಡಿಎ 91 ರಿಂದ 117 ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್​ ನೇತೃತ್ವದ ಯುಪಿಎ 118 ರಿಂದ 138 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ಉಳಿದಂತೆ ಎಲ್​ಜೆಪಿ 5 ರಿಂದ 8 ಸ್ಥಾನಗಳನ್ನಷ್ಟೇ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
ಎಬಿಪಿ ಸಿ-ವೋಟರ್​ ಸಮೀಕ್ಷೆಎಬಿಪಿ ಸಿ-ವೋಟರ್​ ಸಮೀಕ್ಷೆಯಲ್ಲಿ ಎನ್​ಡಿಎಯೂ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. 104 ರಿಂದ 128 ಸ್ಥಾನಗಳಲ್ಲಿ ಗೆಲ್ಲಲಿದೆ. ಯುಪಿಎ 108 ರಿಂದ 131 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ. ಉಳಿದಂತೆ ಎಲ್​ಜೆಪಿ 1 ರಿಂದ 3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
