ದರ್ಭಾಂಗಾ:ಎರಡು ಮಕ್ಕಳ ತಂದೆ ಮೂರು ಮಕ್ಕಳ ತಾಯಿಯನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ ಬಿಹಾರದ ದರ್ಭಾಂಗಾದಲ್ಲಿ ನಡೆದಿದೆ.
ಇದನ್ನೂ ಓದಿ:VIDEO| ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕಾಗಿ 7,200 ವಜ್ರಗಳೊಂದಿಗೆ ವಿಶೇಷ ಭಾವಚಿತ್ರ ತಯಾರಿಸಿದ ಸೂರತ್ ವಾಸ್ತುಶಿಲ್ಪಿ..
ಬಿರಾವುಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮಾಹಿ ಗ್ರಾಮದ ನಿವಾಸಿ ಪ್ರದೀಪ್ ಸದಾ ಮದುವೆಯಾಗಿ ಮಕ್ಕಳಿರುವ ಮತ್ತೊಬ್ಬ ವಿವಾಹಿತ ಹಾಗೂ ಮೂರು ಮಕ್ಕಳ ತಾಯಿಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಪ್ರದೀಪ್ ತನ್ನ ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡಲು ಯಾವಾಗಲೂ ದೆಹಲಿಗೆ ಹೋಗುತ್ತಿದ್ದನು, ಆದರೆ ಅಲ್ಲಿ ಅವನು ಮೂರು ಮಕ್ಕಳ ತಾಯಿಯನ್ನು ಪ್ರೀತಿಸಲು ಪ್ರಾರಂಭಿಸಿ ಅವಳನ್ನು ಮದುವೆಯಾಗಿ ಮನೆಗೆ ಕರೆತಂದಿದ್ದಾನೆ.
ಈ ವಿಷಯ ಆತನ ಮೊದಲ ಪತ್ನಿ ಅನಿಲಾ ದೇವಿಗೆ ತಿಳಿದಾಗ ಆಕೆ ಇದನ್ನು ವಿರೋಧಿಸಿ ಇದರ ವಿರುದ್ಧ ಪಂಚಾಯತ್ ಮೊರೆ ಹೋಗಿದ್ದಾಳೆ. ಈ ಬಗ್ಗೆ ಗ್ರಾಮದಲ್ಲಿ ಹಲವು ಬಾರಿ ಪಂಚಾಯಿತಿ ಕೂಡ ನಡೆಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದಾಗ ಅನಿಲಾ ದೇವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಹಿಳೆ ತನ್ನ ಪತಿ ಪ್ರದೀಪ್ ಸದಾ, ಆತನ ಎರಡನೇ ಪತ್ನಿ ಸವಿತಾ ದೇವಿ ಮತ್ತು ಅತ್ತೆ ಅನಾರ್ಕಲಿ ದೇವಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾಳೆ.
ಇದನ್ನೂ ಓದಿ:ಕಬ್ಬಿಣದ ಪೆಟ್ಟಿಗೆಯಲ್ಲಿ ಭಾಗಶಃ ಸುಟ್ಟಿರುವ ಯುವತಿಯ ಮೃತದೇಹ ಪತ್ತೆ..
ಪೊಲೀಸ್ ಠಾಣೆಯಲ್ಲಿ ನೀಡಿದ ಅರ್ಜಿಯಲ್ಲಿ ಮೊದಲ ಪತ್ನಿಯು ತನಗೆ 12 ವರ್ಷಗಳ ಹಿಂದೆ ಪ್ರದೀಪ್ ಜತ ವಿವಾಹವಾಗಿದ್ದು ತಮಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಅಲ್ಲದೇ ತಾನು ಎಂಟು ತಿಂಗಳ ಗರ್ಭಿಣಿ ಕೂಡ ಹೌದು. ಪ್ರದೀಪ್​ ದೆಹಲಿಗೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಅಲ್ಲಿ ಮುಜಾಫರ್‌ಪುರದ ಮೂರು ಮಕ್ಕಳ ತಾಯಿ ಸವಿತಾ ದೇವಿಯನ್ನು ಮದುವೆಯಾಗಿ ಮನೆಗೆ ಕರೆತಂದಿದ್ದ. ಇದನ್ನು ವಿರೋಧಿಸಿದಕ್ಕೆ ಹುಟ್ಟಲಿರುವ ಮಗುವನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಹೊಟ್ಟೆಯ ಮೇಲೆ ಒದೆಯಲಾಗಿತ್ತು ಎಂದು ಆರೋಪಿಸಿದ್ದಾಳೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − 1 =
Remember me
