ಪಟನಾ:ಬಿಹಾರದಲ್ಲಿ ನೂತನ ಸರ್ಕಾರ ರಚನೆಯಾಗಿದ್ದು, ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಸತತ ನಾಲ್ಕನೇ ಅವಧಿಗೆ ಅವರು ಮುಖ್ಯಮಂತ್ರಿಯಾಗಿದ್ದು, ಒಟ್ಟಾರೆ ಇದು ಏಳನೇ ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಲದ ಸರ್ಕಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿದ್ದು, ಬಿಜೆಪಿ ಹೊಸಬರನ್ನು ಆಯ್ಕೆ ಮಾಡಿದೆ. ತಾರ್​ಕಿಶೋರ್ ಮತ್ತು ರೇಣುದೇವಿ ಇಂದು ಡಿಸಿಎಂಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಹೊಸ ಸರ್ಕಾರ – ಸಚಿವ ಸಂಪುಟ
ಮುಖ್ಯಮಂತ್ರಿ– ನಿತೀಶ್ ಕುಮಾರ್ (ಜೆಡಿಯು)ಉಪಮುಖ್ಯಮಂತ್ರಿ– ತಾರಕಿಶೋರ್ ಪ್ರಸಾದ್ (ಬಿಜೆಪಿ)ಉಪಮುಖ್ಯಮಂತ್ರಿ– ರೇಣುದೇವಿ (ಬಿಜೆಪಿ)ಸಚಿವರು– ವಿಜಯಕುಮಾರ್ ಚೌಧರಿ (ಜೆಡಿಯು), ವಿಜೇಂದ್ರ ಪ್ರಸಾದ್ ಯಾದವ್ (ಜೆಡಿಯು), ಅಶೋಕ್ ಚೌಧರಿ (ಜೆಡಿಯು ಕಾರ್ಯಾಧ್ಯಕ್ಷ), ಮೇವಾ ಲಾಲ್ ಚೌಧರಿ (ಜೆಡಿಯು), ಶೀಲಾ ಮಂಡಲ್​ (ಜೆಡಿಯು), ಸಂತೋಷ್ ಸುಮನ್ (ಎಚ್​ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಜಿ ಪುತ್ರ), ಮುಕೇಶ್ ಸಾಹ್ನಿ (ವಿಕಾಸ್ ಶೀಲ್ ಇನ್​ಸಾನ್ ಪಾರ್ಟಿ ಮುಖ್ಯಸ್ಥ), ಬಿಜೆಪಿಯ ಮಂಗಲ್ ಪಾಂಡೆ, ರಾಮ್ ಪ್ರಿತ್​ ಪಾಸ್ವಾನ್​, ರಾಮ್ ಸೂರತ್ ರಾಯ್​, ಅಮರೇಂದ್ರ ಪ್ರತಾಪ್​ ಸಿಂಗ್, ಜಿಬೇಶ್ ಮಿಶ್ರಾ.
ಪಟನಾದಲ್ಲಿರುವ ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆದಿದ್ದು, ಅವರ ಜತೆಗೆ ಸಚಿವ ಸಂಪುಟದ ಕೆಲವು ಸಹೋದ್ಯೋಗಿಗಳೂ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಫಗು ಚೌಹಾಣ್ ಪ್ರಮಾಣ ವಚನ ಬೋಧಿಸಿದರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಿತ್ರ ಪಕ್ಷ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಪಾಲ್ಗೊಂಡಿದ್ದರು. ವಿಪಕ್ಷ ರಾಷ್ಟ್ರೀಯ ಜನತಾದಳದ ಶಾಸಕರು ಸಮಾರಂಭಕ್ಕೆ ತಾತ್ತ್ವಿಕ ವಿರೋಧ ವ್ಯಕ್ತಪಡಿಸಿ ಗೈರಾದರು.
ಇನ್ನೊಂದು ಮಹತ್ವದ ಬೆಳವಣಿಗೆ ಪ್ರಕಾರ, ಬಿಜೆಪಿ ನಾಯಕ ನಂದ ಕಿಶೋರ್ ಯಾದವ್ ವಿಧಾನಸಭೆಯ ಹೊಸ ಸ್ಪೀಕರ್ ಆಗಿರಲಿದ್ದಾರೆ. ಅವರು ಪಟನಾ ಸಾಹಿಬ್ ಕ್ಷೇತ್ರದ ಪ್ರತಿನಿಧಿ. ಒಂದೂವರೆ ದಶಕದ ಅವಧಿಯಲ್ಲಿ ಸ್ಪೀಕರ್ ಸ್ಥಾನ ಜೆಡಿಯು ತೆಕ್ಕೆಯಲ್ಲಿತ್ತು.  ಬಿಹಾರ ವಿಧಾನಸಭೆಯ 243 ಸ್ಥಾನಗಳ ಪೈಕಿ ಎನ್​ಡಿಎ ಮೈತ್ರಿಕೂಟ 125 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಬಿಜೆಪಿ 74, ಜೆಡಿಯು 43, ಎಚ್​ಎಎಂ ಮತ್ತು ವಿಐಪಿ ಪಕ್ಷಗಳು ತಲಾ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿವೆ. (ಏಜೆನ್ಸೀಸ್)
ಎನ್​ಡಿಎ ವಿರುದ್ಧ ಜನಾದೇಶ- ನಿತೀಶ್ ಪ್ರಮಾಣ ವಚನ ಸ್ವೀಕಾರಕ್ಕೆ ನಾವಿಲ್ಲ- ಆರ್​ಜೆಡಿ

ನಿತೀಶ್​ ಕುಮಾರ್​ ಪದಗ್ರಹಣಕ್ಕೆ ಕ್ಷಣಗಣನೆ: ಈ ಬಾರಿ ಬಿಹಾರ ಸರ್ಕಾರದಲ್ಲಿರಲಿದೆ ಹೊಸ ಬದಲಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
