ಪಟನಾ:ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಫಗು ಚೌಹಾನ್​ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಅವರು, 16ನೇ ವಿಧಾನಸಭೆಯನ್ನು ಬರ್ಖಾಸ್ತುಗೊಳಿಸುವಂತೆ ಮನವಿ ಮಾಡಿದ್ದಾರೆ. ಹೊಸ ಎನ್​ಡಿಎ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುವ ತನಕ ನಿತೀಶ್ ಕುಮಾರ್ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ಹಾಲಿ ವಿಧಾನಸಭೆಯ ಅವಧಿ ನವೆಂಬರ್​ 29ರ ತನಕ ಇದೆ. ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿರುವ ಕಾರಣ, ಹೊಸ ಸರ್ಕಾರ ರಚನೆಗೆ ಅಗತ್ಯ ಕ್ರಮಗಳು ಆರಂಭವಾಗಿವೆ. ಭಾನುವಾರ ಎನ್​ಡಿಎ ಸಭೆ ನಡೆಯಲಿದ್ದು, ಎನ್​ಡಿಎ ನಾಯಕ, ಮುಖ್ಯಮಂತ್ರಿ ಯಾರೆಂಬುದು ನಿರ್ಣಯಿಸಿಕೊಂಡು ಸರ್ಕಾರ ರಚನೆಯ ಹಕ್ಕನ್ನು ಮಂಡಿಸಲಿದ್ದಾರೆ.
ಇದನ್ನೂ ಓದಿ:‘ಉಹೂಂ, ಇದು ನನ್ನ ಕೊನೆಯ ಚುನಾವಣೆ ಅಲ್ಲವೇ ಅಲ್ಲ’, ಗೆದ್ದ ಮೇಲೆ ಉಲ್ಟಾ ಹೊಡೆದ ನಿತೀಶ್​ ಕುಮಾರ್​
ಇಂದು ಬೆಳಗ್ಗೆ, ಎನ್​ಡಿಎಯ ನಾಲ್ಕು ಮಿತ್ರ ಪಕ್ಷಗಳಾದ ಜೆಡಿಯು, ಬಿಜೆಪಿ, ಎಚ್​ಎಎಂ ಮತ್ತು ವಿಕಾಸ್​ ಶೀಲ್​ ಇನ್ಸಾನ್ ಪಾರ್ಟಿಯ ನಾಯಕರು ಅನೌಪಚಾರಿಕವಾಗಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಸಭೆ ಸೇರಿದ್ದರು. ಈ ಸಭೆಯಲ್ಲೇ ಭಾನುವಾರದ ಎನ್​ಡಿಎ ಸಭೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೈತ್ರಿಕೂಟದಲ್ಲಿ ಬಿಜೆಪಿಗೆ ಅತ್ಯಧಿಕ 74 ಸ್ಥಾನಗಳು ಬಂದಿದ್ದರೂ, ಅದಕ್ಕಿಂತ 31 ಸ್ಥಾನ ಕಡಿಮೆ ಬಂದಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಭಾನುವಾರದ ಎನ್​ಡಿಎ ಸಭೆಯ ಸರ್ಕಾರ ರಚನೆಯ ನಂತರ ಚಿತ್ರಣ ಸ್ಪಷ್ಟವಾಗಲಿದೆ. (ಏಜೆನ್ಸೀಸ್)
ಈ ಊರಲ್ಲಿ ಕಾರ್ತೀಕ ಮಾಸದಲ್ಲಿ ಗಣೇಶೋತ್ಸವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
