ಪಟನಾ:ಮಳೆಗಾಲ ಆರಂಭವಾಗಿದೆ. ಅನೇಕ ಕೆರೆ ಕಟ್ಟೆಗಳು ತುಂಬಿವೆ ಕೂಡ. ಹೀಗಿರುವಾಗ ಈಗಷ್ಟೇ ತನ್ನ ಬಾಳಿಗೆ ಎಂಟ್ರಿ ಕೊಟ್ಟಿರುವ ಹೆಂಡತಿಯ ಸೀರೆ ಒದ್ದೆಯಾಗಬಾರದು ಎಂದು ನವವಿವಾಹಿತನೊಬ್ಬ ಹೆಂಡತಿಯನ್ನು ಹೊತ್ತು ನೀರು ದಾಟಿಸಿದ್ದು, ಆ ವಿಡಿಯೋ ಭಾರೀ ವೈರಲ್ ಆಗಿದೆ.
ಬಿಹಾರದಲ್ಲೂ ಮಳೆ ಹೆಚ್ಚಿರುವುದರಿಂದಾಗಿ ಅಲ್ಲಿನ ಕೆರೆ, ಹಳ್ಳಗಳೆಲ್ಲ ನೀರನಿಂದ ಭರ್ತಿಯಾಗಿವೆ. ಅಲ್ಲಿನ ಜನರು ಸಂಚಾರಕ್ಕೆ ದೋಣಿ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ಪ್ರಖಂಡ ಕ್ಷೇತ್ರದ ಲೋಹಾಗಢಾ ಗ್ರಾಮದ ಯುವಕನೊಬ್ಬ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಕಳೆದ ಶನಿವಾರದಂದು ಆತ ಪಕ್ಕದ ಊರಿನ ಯುವತಿಯನ್ನು ವರಿಸಿದ್ದಾನೆ.
दिलवाले दुल्हनिया ले जाएंगे….7 वचन निभाने का वादा ऐसे ही थोड़े किया है…प्रमाण देख लीजिए…..#क‍िशनगंजमें सिंघीमारी कनकई नदी के पलसा घाट का नजारा…बाढ़ में दूल्हा अपनी नई नवेली दुल्हन को कंधे पर लेकर नदी पार कर रहा है….#bihari#marriagepic.twitter.com/woI3exCRM7
— Anamika Amber (@AnamikaamberA)June 29, 2021

ಮದುವೆಯಾಗಿ ವಧುವನ್ನು ವರನ ಊರಿಗೆ ಕರೆದುಕೊಂಡು ಬರುವಾಗ ದೋಣಿಯಲ್ಲೇ ಕರೆದುಕೊಂಡು ಬರಲಾಗಿದೆ. ದೋಣಿ ಇಳಿದ ನಂತರ ಕೊಂಚವೂ ನೀರು ಕಾಲಿಗೆ ತಾಗದಂತೆ ನಡೆದುಹೋಗುತ್ತೇವೆಂದರೆ ಅದು ಸುಳ್ಳು. ಮದುವೆಗೆಂದು ತೊಟ್ಟಿದ್ದ ಹೊಸ ಸೀರೆ ನೀರಿನಲ್ಲಿ ಒದ್ದೆಯಾಗುತ್ತದೆಯಲ್ಲ ಎಂದು ಯೋಚಿಸುತ್ತ ದೋಣಿ ಇಳಿಯಲು ಪ್ರಯತ್ನಿಸುತ್ತಿದ್ದ ವಧುವನ್ನು ವರ ಹೆಗಲ ಮೇಲೆ ಹೊತ್ತು ನೀರು ದಾಟಿಸಿ ಬಿಟ್ಟಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಕತ್ ವೈರಲ್ ಆಗಿದೆ. (ಏಜೆನ್ಸೀಸ್)
ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
