ಪಟನಾ:ವಿಚಿತ್ರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಅದ್ಧೂರಿ ಮದುವೆಯೊಂದು ನಡೆದ ಬಳಿಕ ಇನ್ನೇನು ಕೆಲವೇ ಕ್ಷಣಗಳಲ್ಲಿ ವಧುವನ್ನು ವರನಿಗೆ ಹಸ್ತಾಂತರ ಮಾಡಬೇಕು ಎನ್ನುವಷ್ಟರಲ್ಲಿ ವಧು ಮತ್ತು ವರನ ಕುಟುಂಬದ ನಡುವೆ ನಡೆದ ಒಪ್ಪಂದದ ಮಾತುಕತೆ ಸ್ಫೋಟಕ ತಿರುವು ನೀಡಿ, ಇಡೀ ಸಂಬಂಧಕ್ಕೆ ಕೊಳ್ಳಿ ಇಟ್ಟಿತು.
ಅಷ್ಟಕ್ಕೂ ನಡೆದಿದ್ದೇನೆಂದರೆ, ನವೆಂಬರ್​ 16ರಂದು ಬಿಹಾರದ ಪೂರ್ವ ಚಂಪಾರಣ್​ ಜಿಲ್ಲೆಯಲ್ಲಿ ಅದ್ಧೂರಿ ಮದುವೆಯೊಂದು ನಡೆಯಿತು. ಭಾಜ ಭಜಂತ್ರಿಯೊಂದಿಗೆ ವಧು ಮತ್ತು ವರನ ಸಂಬಂಧಿಕರು ಹಾಗೂ ಸ್ನೇಹಿತರು ವೈಭಯುತ ಮದುವೆಗೆ ಸಾಕ್ಷಿಯಾಗಿದ್ದರು. ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆಯಿತು. ಆದರೆ, ವಧುವನ್ನು ವರನ ಮನೆಗೆ ಹಸ್ತಾಂತರ ಮಾಡಬೇಕು ಎನ್ನುವಷ್ಟರಲ್ಲಿ ವಧುವಿನ ಕಡೆಯವರು ಇಟ್ಟ ಬೇಡಿಕೆ ಇಡೀ ಚಿತ್ರಣವನ್ನೇ ಬದಲು ಮಾಡಿತು.
ವಧುವಿನ ಕಡೆಯವರು ಇಟ್ಟ ಬೇಡಿಕೆ ಏನೆಂದರೆ, ತನ್ನ ಮಗಳಿಗೆ ಅತ್ತೆ-ಮಾವನಿಂದ ಯಾವುದೇ ತೊಂದರೆ ಬರಂದತೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಲಿಖಿತ ಭರವಸೆ ನೀಡುವಂತೆ ವರನಲ್ಲಿ ಬೇಡಿಕೆ ಇಟ್ಟರು. ಇದರಿಂದ ಆಕ್ರೋಶಗೊಂಡ ವರ, ಸರಿ ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಆದರೆ, ನನ್ನೊದೊಂದು ಬೇಡಿಕೆ ಇದೆ. ನಿಮ್ಮ ಮಗಳನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಬೇಕೆಂದು ಕೇಳಿದನು.
ವರನಿಟ್ಟ ಬೇಡಿಕೆ ಕೇಳಿ ವಧುವಿನ ಮನೆಯವರು ಹಾಗೂ ಸಂಬಂಧಿಕರು ಒಂದು ಕ್ಷಣ ದಂಗಾದರು. ಇದರಿಂದ ವಧುವಿನ ಪಾಲಕರು ಸಿಟ್ಟಿಗೆದ್ದರು. ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ, ಮಾರಾಮಾರಿಯು ನಡೆಯಿತು. ವರ ಮದ್ಯ ಸೇವಿಸಿ ಬಂದಿದ್ದಾನೆ ಎಂದು ವಧು ಆರೋಪ ಮಾಡಿದಾಗ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಗಲಾಟೆ ಇನ್ನಷ್ಟು ಹೆಚ್ಚಾಯಿತು.
ಇದು ಪೊಲೀಸರ ಗಮನಕ್ಕೆ ಬಂದು ವಧುವಿನ ಕುಟುಂಬ ಹಾಗೂ ವರನ ಸಂಬಂಧಿಕರನ್ನು ಬಂಧಿಸಲಾಯಿತು. ಪೊಲೀಸರು ಮಧ್ಯಪ್ರವೇಶಿಸಿದ ಎರಡು ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಇದಲ್ಲದೆ, ವಧು ಗಂಡನೊಂದಿಗೆ ಅತ್ತೆಯ ಮನೆಗೆ ಹೋಗದೇ ಮತ್ತೆ ತನ್ನ ತವರು ಮನೆಯನ್ನು ಸೇರಿದಳು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತನ್ನು ಈ ಘಟನೆ ನೆನಪಿಸಿದೆ.(ಏಜೆನ್ಸೀಸ್​)

ಎಎಪಿ ಶಾಸಕನಿಗೆ ಹಿಗ್ಗಾಮುಗ್ಗಾ ಹೊಡೆದ ಜನರು: ತಪ್ಪಿಸಿಕೊಂಡು ಓಡಿದರೂ ಅಟ್ಟಾಡಿಸಿಕೊಂಡು ಥಳಿತ, ವಿಡಿಯೋ ವೈರಲ್​

ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸುತ್ತಿದ್ದ ಸಹ ವಿದ್ಯಾರ್ಥಿ ಅರೆಸ್ಟ್​: ಮೊಬೈಲ್​ನಲ್ಲಿತ್ತು 1200ಕ್ಕೂ ಹೆಚ್ಚು ವಿಡಿಯೋ

ವೃದ್ಧೆ 200 ಕಿಮೀ ಉರುಳು ಸೇವೆ: ತೆಲಂಗಾಣದ ಧನಾಶ್ರಿಯಿಂದ ಶುರು ಮಾಡಿದ ಶಶಿಕಲಾ ಪಂಚಾಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
