ಪಟ್ನಾ:ಚೀನಾ- ಭಾರತದ ನಡುವಿನ ಸಂಘರ್ಷದಲ್ಲಿ ಕೆಲವು ಭಾರತೀಯ ಯೋಧರು ಹುತಾತ್ಮರಾದರು. ಒಬ್ಬೊಬ್ಬರ ಕುಟುಂಬದ್ದೂ ಒಂದೊಂದು ಕಣ್ಣೀರಿನ ಕಥೆ.
ಗಡಿಯಲ್ಲಿ ಘರ್ಷಣೆ, ಯುದ್ಧ ನಡೆಯುತ್ತಿದೆ ಎಂದರೆ, ಅದು ಯೋಧರ ಕುಟುಂಬದವರಿಗೆ ಅಕ್ಷರಶಃ ನುಂಗಲಾರದ ತುತ್ತು. ಯಾವಾಗ, ಏನು ಸುದ್ದಿ ಬರುತ್ತದೆಯೋ ಹೇಳುವುದು ಅಸಾಧ್ಯ. ಮನೆಯ ಫೋನು ರಿಂಗಣಿಸುತ್ತಿದ್ದಂತೆಯೇ ಮೊದಲಿಗೆ ಮನದಲ್ಲಿ ಮೂಡುವುದು ಕೆಟ್ಟ ಯೋಚನೆಯೇ.
ಅದರಂತೆಯೇ ಬಿಹಾರದ ಸುನೀಲ್​ ಎಂಬ ಯೋಧ ಕೂಡ ಚೀನಾದ ಜತೆ ಹೋರಾಟ ಮಾಡುತ್ತಿದ್ದಾರೆ. ನಿನ್ನೆ ಭಾರತದ ಕೆಲವು ಯೋಧರು ಹುತಾತ್ಮರಾಗಿರುವ ಬಗ್ಗೆ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ ಸೇನಾ ಮುಖ್ಯಸ್ಥರು ಸುನೀಲ್​ ಅವರ ಮನೆಗೂ ಕರೆ ಮಾಡಿದ್ದರು. ಕರೆಯನ್ನು ಸ್ವೀಕರಿಸಿದ ಅವರ ಪತ್ನಿ ಸುದ್ದಿ ಕೇಳುತ್ತಲೇ ತಲೆತಿರುಗಿ ಬಿದ್ದರು.
ಏಕೆಂದರೆ, ನಿಮ್ಮ ಪತಿ ಸುನೀಲ್​ ಸುಖದೇವ್​ ರಾಯ್​ ಅವರು ಘರ್ಷಣೆಯಲ್ಲಿ ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ಬಂತು. ಈ ಸುದ್ದಿ ತಿಳಿಯುತ್ತಲೇ ಇಡೀ ಗ್ರಾಮದ ಜನರು ಸುನೀಲ್​ ಅವರ ಮನೆಯಲ್ಲಿ ಸೇರಿದರು. ಎಲ್ಲರ ಕಣ್ಣಲ್ಲೂ ನೀರು. ಯೋಧ ಸುನೀಲ್​ ಪತ್ನಿಯನ್ನು ಸಂತೈಸುವುದು ಮನೆಯವರಿಂದ ಸಾಧ್ಯವಾಗಲಿಲ್ಲ. ಏನೂ ಅರಿಯದ ಪುಟ್ಟ ಮಗು ತನ್ನ ಮನೆಗೆ ಏಕಿಷ್ಟು ಜನ ಸೇರಿದ್ದಾರೆ ಎಂದು ಬೆರಗುಗಣ್ಣುಗಳಿಂದ ನೋಡುತ್ತಿತ್ತು.
ಇದನ್ನೂ ಓದಿ:ಹೊಸ ಮನೆ ನೋಡುವ ಮುನ್ನವೇ ಹುತಾತ್ಮನಾದ! ತಬ್ಬಲಿಯಾದ ಕಂದಮ್ಮಗಳು
ಇನ್ನೇನು ಎಲ್ಲರೂ ಪಾರ್ಥೀವ ಶರೀರಕ್ಕಾಗಿ ಕಾಯುತ್ತಿದ್ದರು. ಅಷ್ಟರಲ್ಲಿಯೇ ಸುನೀಲ್​ ಅವರ ಪತ್ನಿಗೆ ಕರೆ ಬಂತು. ಅದನ್ನು ಸ್ವೀಕರಿಸಿದಾಗ, ಅವರು ಸಂತೋಷದಿಂದ ಕುಣಿಯುತ್ತಿದ್ದ ದೃಶ್ಯ ಕಂಡು ಅಲ್ಲಿದ್ದವರೆಲ್ಲಾ ನಿಬ್ಬೆರಗಾಗಿ ಹೋದರು.
ಅಷ್ಟಕ್ಕೂ ಅವರಿಗೆ ಕರೆ ಬಂದದ್ದು ಅವರ ಪತಿ ಸುನೀಲ್​ ಅವರದ್ದು. ಹುತಾತ್ಮನಾಗಿರುವ ಸುದ್ದಿ ಬಂದ ವಿಷಯವನ್ನು ಅವರು ತಮ್ಮ ಪತಿಗೆ ತಿಳಿಸಿದಾಗ, ಸುನೀಲ್​ ಅವರು, ಸುನೀಲ್​ ಸುಖದೇವ್​ ರಾಯ್​ ಎನ್ನುವ ನನ್ನದೇ ಹೆಸರಿನ ಯೋಧನೊಬ್ಬ ನಿನ್ನೆ ಹುತಾತ್ಮನಾದ. ಒಂದೇ ಹೆಸರಿನ ಇಬ್ಬರು ಇರುವ ಕಾರಣ, ಗೊಂದಲವಾಗಿ ನಿನಗೆ ಕರೆ ಮಾಡಿದ್ದಾರೆ. ನನಗೆ ವಿಷಯ ತಿಳಿಯುತ್ತಲೇ ನಾನು ಕರೆ ಮಾಡಿದೆ. ಮೈ ಜಿಂದಾ ಹೂಂ… ಮಾರಾ ನಹೀ (ನಾನು ಬದುಕಿದ್ದೇನೆ, ಸತ್ತಿಲ್ಲ) ಎಂದರು.ಈ ವಿಷಯ ಕೇಳುತ್ತಲೇ ಇಡೀ ಕುಟುಂಬ ಸಂತೋಷದಿಂದ ಹಿಗ್ಗಿಹೋಯಿತು.(ಏಜೆನ್ಸೀಸ್​)
ಮದುವೆಗಾಗಿ ಅಣ್ಣನ ಕಾಯತ್ತಿದ್ದಾಕೆಗೆ ಸಿಕ್ಕಿದ್ದು ಸಾವಿನ ಸುದ್ದಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 1 =
Remember me
