ಪಟ್ನಾ:ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಇನ್ನೂ ಚುನಾವಣೆ ಸಮಯದಲ್ಲಿ ಎದುರಾಳಿ ಪಕ್ಷದವರನ್ನು ಟೀಕಿಸಿ ಹಾಡು, ಮೀಮ್​ಗಳನ್ನು ಬಿಡುವುಡು ಸಹಜ. ಆದರೆ, ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿರುವುದನ್ನು ನಾವು ನೋಡಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಹಾರ ಸಿಎಂ ನಿತೀಶ್​ ಕುಮಾರ್​ರನ್ನು ಅಸಹ್ಯಕರವಾಗಿ ಟೀಕಿಸಲಾಗಿದೆ. ಆರ್​ಜೆಡಿ ನಾಯಕ ಲಾಲು ಪ್ರಸಾದ್​ರನ್ನು ಹಾಡಿನಲ್ಲಿ ಹೊಗಳಲಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಬಿಕಿನಿ ಧರಿಸಿರುವ ಮಹಿಳೆಯೊಬ್ಬರ ಜೊತೆ ಲಾಲು ಪ್ರಸಾದ್​ ಯಾದವ್​ ಅವರ ಫೋಟೋ ಇರುವ ಕುರ್ತಾ ಹಾಕಿರುವ ವ್ಯಕ್ತಿ ಮೋದಿ ಹಾಗೂ ನಿತೀಶ್​ ಕುಮಾರ್​ರನ್ನು ಟೀಕಿಸುತ್ತ ಅಸಹ್ಯಕರವಾಗಿ ನೃತ್ಯ ಮಾಡುವುದನ್ನು ನೋಡಬಹುದಾಗಿದೆ. ಆತ ಆರ್​ಜೆಡಿ ಕಾರ್ಯಕರ್ತ ಎಂದು ಹೇಳಲಾಗಿದೆ. ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಿಜೆಪಿ ನಾಯಕ ಮನೀಷ್​ ಕಶ್ಯಪ್​ ಪ್ರತಿಕ್ರಿಯಿಸಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ಚಾಟಿ ಬೀಸಿದ್ದಾರೆ.
विपक्षी पार्टियों के मैनिफेस्टो में भारतीय महिलाओं का अपमान करना पहली प्राथमिकता है।। राबड़ी देवी, प्रियंका गांधी, ममता बनर्जी, मायावती, सोनिया गांधी जैसे लोग इस पर चुप क्यों है।।एक तरफ़ मोदी जी महिला सशक्तिकरण की बात करते हैं दूसरी तरफ़ विपक्षी पार्टियों तथा उनके कार्यकर्ताओं…pic.twitter.com/LnW6KVuv8c
ಇದನ್ನೂ ಓದಿ:ಮೊಬೈಲ್ ಹೆಚ್ಚು​ ಬಳಸಬೇಡ ಎಂದಿದ್ದೆ ಈತನ ಪಾಲಿಗೆ ಮುಳುವಾಯ್ತು; ಅಣ್ಣನನ್ನೇ ಕೊಚ್ಚಿ ಕೊಲೆಗೈದ ಸಹೋದರಿ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಮನೀಷ್​, ಮಹಿಳೆಯರಿಗೆ ಅವಮಾನ ಮಾಡುವುದೇ ಇಂಡಿಯಾ ಮೈತ್ರಿಕೂಟದ ಪ್ರಥಮ ಆದ್ಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಬ್ರಿ ದೇವಿ, ಮಮತಾ ಬ್ಯಾನರ್ಜಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರ ಬಗ್ಗೆ ಟೀಕಿಸುವ ಇವರು ಈಗ ಯಾಕೆ ಮೌನವಹಿಸಿದ್ದಾರೆ ಎಂಬುದನ್ನು ದೇಶದ ಜನರ ಮುಂದೆ ಸ್ಪಷ್ಟಪಡಿಸಬೇಕು. ವಿಡಿಯೋಗೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ನಾಯಕ ಮನೀಷ್​ ಕರ್ಶಯಪ್​ ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
