ಪಟ್ನಾ:ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಅವರ ಆಧಾರ್​ ಕಾರ್ಡ್​ಗಳನ್ನು ತಿರುಚಿದ ಆರೋಪದ ಮೇಲೆ ಗುಜರಾತ್​ ಪೊಲೀಸರು ಬಿಹಾರದ ಮುಜಾಫರ್​ಪುರದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದೆ.
ಮುಜಾಫರ್​ಪುರ ಜಿಲ್ಲೆಯ ಸಾದತ್​ಪುರ ಪ್ರದೇಶದ ನಿವಾಸಿ ಅರ್ಪಣಾ ದುಬೆ ಅಲಿಯಾಸ್​ ಮದನ್​ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್​ ಕುಮಾರ್​ ಬಂಧಿತ ಆರೋಪಿಯು ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಆರೋಪಿಯು ಆಧಾರ್​ ವೆಬ್​ಸೈಟ್​ನಲ್ಲಿ ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಜನುಮದಿನಗಳನ್ನು ಬದಲಾಯಿಸಿ ದುರುಪಯೋಗ ಪಡಿಸಿಕೊಂಡಿದ್ದಾನೆ.
ಇದನ್ನೂ ಓದಿ:ನನ್ನ ಮೂರನೇ ಅವಧಿಯಲ್ಲಿ ಭಾರತ ವಿಶ್ವದ ಅಗ್ರ 3 ಆರ್ಥಿಕ ದೇಶಗಳಲ್ಲಿ ಒಂದಾಗಲಿದೆ: ಪ್ರಧಾನಿ ಮೋದಿ
ಈ ಕುರಿತು ಮೊದಲಿಗೆ ನಮಗೆ ಗುಜರಾತ್​ ಪೊಲೀಸರು ಮೊದಲಿಗೆ ನಮಗೆ ಪ್ರಧಾನಿ ಮೋದಿ ಸೇರಿದಂತೆ ಪ್ರಭಾವಿ ನಾಯಕರ ಆಧಾರ್​ ಕಾರ್ಡ್​ಗಳನ್ನು ವೆಬ್​ಸೈಟ್​ನಲ್ಲಿ ತಿರುಚಲು ಯತ್ನಿಸಲಾಗುತ್ತಿದೆ ಎಂದು ಕರೆ ಬಂದಿತ್ತು. ಆರೋಪಿಯ ಐಪಿ ಅಡ್ರೆಸ್​ ಬಿಹಾರದ ಮುಜಾಫರ್​ಪುರದಲ್ಲಿ ತೋರಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಆ ನಂತರ ಸ್ಥಳೀಯ ಪೊಲೀಸರ ಸಹಾಯದಿಂದ ಅಧಿಕಾರಿಗಳು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಗುಜರಾತ್​ಗೆ ಕೊಂಡೊಯ್ದಿದ್ದಾರೆ ಎಂದು ಮುಜಾಫರ್​ಪುರ ವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್​ ಕುಮಾರ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − thirteen =
Remember me
