ಪಟನಾ:ಬಿಹಾರ ರಾಜಧಾನಿ ಪಟನಾದಲ್ಲಿ ನಿನ್ನೆ (ಜ.20) ಮೊಸರು ತಿನ್ನುವ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ವ್ಯಕ್ತಿಯೊಬ್ಬ ಕೇವಲ 3 ನಿಮಿಷಗಳಲ್ಲಿ 3.5 ಕೆಜಿ ಮೊಸರು ತಿನ್ನುವ ಮೂಲಕ ದಾಖಲೆ ಬರೆದಿದ್ದಾನೆ.
ಕಳೆದ 10 ವರ್ಷದಿಂದ ಈ ಸ್ಪರ್ಧೆಯನ್ನು ಆಯೋಜನೆ ಮಾಡಿಕೊಂಡ ಬರಲಾಗಿದೆ. ಮಹಿಳೆಯರು, ಪುರುಷರು ಹಾಗೂ ಹಿರಿಯ ನಾಗರಿಕರು ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಮೊಸರಿನಲ್ಲಿರುವ ಆರೋಗ್ಯದ ಲಾಭವನ್ನು ಪ್ರಚಾರ ಮಾಡುವ ಉದ್ದೇಶದಿಂದ ಬಿಹಾರದ ಸುಧಾ ಡೈರಿ ಈ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ.
ಬಿಹಾರದ ಬಾರ್ಹ್​ ಮೂಲದ ನಿವಾಸಿ ಅಜಯ್​ ಕುಮಾರ್​ ಎಂಬುವರು 3 ನಿಮಿಷಗಳಲ್ಲಿ 3 ಕೆಜಿ 420 ಗ್ರಾಂ ಮೊಸರು ತಿನ್ನುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಪಟನಾ ಮೂಲದ ಪ್ರೇಮಾ ತಿವಾರಿ ಎಂಬುವರು ಅದೇ ಸಮಯದಲ್ಲಿ 2 ಕೆಜಿ 718 ಗ್ರಾಂ ಮೊಸರು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದರು.
ಹಿರಿಯ ನಾಗರಿಕರ ವಿಭಾಗದಲ್ಲಿ ಹಾಲಿ ಚಾಂಪಿಯನ್​ ಆಗಿರುವ ಶಂಕರ್​ ಕಾಂತ್​ ಎಂಬುವರು 3 ನಿಮಿಷದಲ್ಲಿ 3 ಕೆಜಿ 647 ಗ್ರಾಂ ಮೊಸರು ತಿನ್ನುವ ಮೂಲಕ ದಾಖಲೆ ಬರೆದರು. ಮೂವರು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ‘
ಕಳೆದ ವರ್ಷ ಶಂಕರ್​ ಕಾಂತ್​ ಅವರು 4 ಕೆಜಿ ಮೊಸರು ತಿಂದಿದ್ದರು. ಈ ಬಾರಿ 500 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.(ಏಜೆನ್ಸೀಸ್​)
Looks like the competition was 'curdled' with tension, but the dairy warrior emerged victorious by gobbling up 3 kgs & 647 gms of curd in just 3 minutes! Sudha Dairy successfully organized a Curd-Eating Competition today at Patna Dairy Project to promote health benefits of curd.pic.twitter.com/4aE2HeAMRD
— National Cooperative Dairy Federation of India Ltd (@ncdficoop)January 18, 2023

ಕಾರು ಚಾಲಕನಿಂದ ದೌರ್ಜನ್ಯ ಪ್ರಕರಣ: ಇದೊಂದು ಡ್ರಾಮಾ ಎಂದ ಬಿಜೆಪಿ, ತಿರುಗೇಟು ಕೊಟ್ಟ ಡಿಸಿಡಬ್ಲ್ಯು ಮುಖ್ಯಸ್ಥೆ

ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ: ಪುಣ್ಯ ಸಂಸ್ಮರಣೋತ್ಸವಕ್ಕೆ ಹರಿದುಬಂದ ಭಕ್ತಸಾಗರ

ಪ್ಲೀಸ್​ ಸಹಾಯ ಮಾಡಿ ಪಠಾಣ್​ ಸಿನಿಮಾ ಟಿಕೆಟ್​ ಸಿಗದಿದ್ರೆ ಸಾಯ್ತಿನಿ: ಶಾರೂಖ್ ಅಭಿಮಾನಿಯ ಹುಚ್ಚಾಟ, ನೆಟ್ಟಿಗರ ತರಾಟೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − 5 =
Remember me
