ನವಾಡ:ಮದುವೆಯಾದ ನಂತರ ಗಂಡಂದಿರು ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮತ್ತೆ ಸೇರಲು ಸಹಾಯ ಮಾಡುವುದನ್ನು ನಾವು ಚಲನಚಿತ್ರಗಳಲ್ಲಿ ನೋಡಿದ್ದೇವೆ. ಈಗ, ಇಂಥದ್ದೇ ಸುದ್ದಿಯೊಂದು ಹೊರಬಿದ್ದಿದ್ದು, ಯುವಕನೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿದ್ದಾನೆ.ಬಿಹಾರದ ನವಾಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ದಂಪತಿ ಮೂರು ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿ ಪಕ್ಕದ ಗ್ರಾಮದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದ್ದಾಳೆ.ಇದನ್ನೂ ಓದಿ:ಮಹಿಳೆಯನ್ನು 400 ಮೀಟರ್ ದೂರ ಎಳೆದೊಯ್ದ ಆಟೋರಿಕ್ಷಾ; ಘಟನೆಯ ವಿಡಿಯೋ ವೈರಲ್!
ಈ ವಿಷಯ ಪತಿಗೆ ತಿಳಿದಿದ್ದು, ಆಕೆಗೆ ಬುದ್ಧಿ ಹೇಳಿದ್ದಾನೆ. ಆದರೆ ಆಕೆ ಗಂಡನ ಮಾತಿಗೆ ಕಿಮ್ಮತ್ತು ನೀಡದೆ, ತನ್ನ ಗೆಳೆಯನನ್ನು ಗುಟ್ಟಾಗಿ ಭೇಟಿಯಾಗುತ್ತಿದ್ದಳು. ಹೀಗೆ ಒಂದು ಪತಿಯ ಗೈರುಹಾಜರಿ ನೋಡಿ ಪ್ರಿಯಕರ ಎಂದಿನಂತೆ ಆಕೆಯನ್ನು ಭೇಟಿಯಾಗಲು ಮನೆಗೆ ತೆರಳಿದ್ದ. ಇಬ್ಬರೂ ಒಬ್ಬರೇ ಇದ್ದಾಗ ಗಂಡನ ಮನೆಯವರು ರೆಡ್ ಹ್ಯಾಂಡ್ ಆಗಿ ಹಿಡಿದು, ಕುಟುಂಬಸ್ಥರು ಪ್ರಿಯಕರನಿಗೆ ಥಳಿಸಿ ಕಟ್ಟಿ ಹಾಕಿದ್ದಾರೆ.
ಕೊನೆಗೆ ತೀವ್ರ ಆಕ್ರೋಶದ ನಂತರ ಆಕೆ ಮತ್ತು ಅವನಿಗೆ ಗ್ರಾಮವನ್ನು ತೊರೆಯುವಂತೆ ಆದೇಶಿಸಲಾಗಿದ್ದು. ಅಷ್ಟರಲ್ಲಿ ಗಂಡ ಮನೆಗೆ ಬಂದಿದ್ದಾನೆ. ಮನೆಯವರಿಂದ ವಿಷಯ ತಿಳಿದು, ಜೂನ್​ 5ರ ಬೆಳಗ್ಗೆ ಇಬ್ಬರನ್ನೂ ಕರೆದುಕೊಂಡು ಹೋಗಿ ಶಿವನ ದೇವಸ್ಥಾನದಲ್ಲಿ ಊರವರೆಲ್ಲರ ಸಮ್ಮುಖದಲ್ಲಿ ಮದುವೆ ಮಾಡಿಸಿದ್ದಾನೆ. ಇನ್ನು, ಘಟನೆಯ ಬಗ್ಗೆ ನಮಗೆ ತಿಳಿದಿದೆ ಎಂದು ಹೇಳುವ ಸ್ಥಳೀಯ ಪೊಲೀಸರು, ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − six =
Remember me
