ಪಟ್ನಾ:ತನ್ನ ಹೆಂಡತಿಯನ್ನು ಕಳಿಸಿಕೊಡಲು ಅತ್ತೆ ಮನೆಯವರು ಸತಾಯಿಸುತ್ತಿದ್ದರು ಎಂಬ ಕಾರಣಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮೃತರನ್ನು ಕೃಷ್ಣ ಕುಮಾರ್​ ಗುಪ್ತಾ ಎಂದು ಗುರುತಿಸಲಾಗಿದ್ದು, ಘಟನೆಯೂ ಬಿಹಾರದ ಆರಾ ಜಿಲ್ಲೆಯ ಎಕ್​ವಾರಿ ಗ್ರಾಮದಲ್ಲಿ ನಡೆದಿದೆ.
ಬಿಹಾರಾದ ಆರಾ ಜಿಲ್ಲೆಯ ಧನಗಾಂವ್​ ಗ್ರಾಮದ ಕೃಷ್ಣ ಕುಮಾರ್​ ಗುಪ್ತಾ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಏಪ್ರಿಲ್​ 14ರಂದು ಎಕ್​ವಾರಿ ಗ್ರಾಮದ ಮಹಿಳೆ ರೀಮಾ ಕುಮಾರಿ ಅವರೊಂದಿಗೆ ಕೃಷ್ಣ ಅವರ ವಿವಾಹವಾಗಿತ್ತು.
ಮದುವೆಯ ನಂತರ ವಧುವನ್ನು ಶುಭ ದಿನದಂದು ಕಳಿಸಿಕೊಡಲಾಗುವುದು ಎಂದು ಆಕೆಯ ಕುಟುಂಬಸ್ಥರು ಹೇಳಿದ ಕಾರಣ ಕೃಷ್ಣ ಕುಮಾರ್​ ಮತ್ತು ಕುಟುಂಬಸ್ಥರು​ ಮುಂಬೈಗೆ ವಾಪಸ್ ತೆರಳಿದ್ದರು.
ಇದನ್ನೂ ಓದಿ:51 ಟ್ರ್ಯಾಕ್ಟರ್​ಗಳಲ್ಲಿ ಮದುವೆ ದಿಬ್ಬಣ ಬಂದ ವರ
ಇದಾದ ಬಳಿಕ ಎರಡು ತಿಂಗಳ ನಂತರ ರೀಮಾ ಅವರನ್ನು ಕರೆತರಲು ಹೋದಾಗ ಆಕೆಯ ಕುಟುಂಬಸ್ಥರು ಮಗಳನ್ನು ಗಂಡನ ಮನೆಗೆ ಕಳಿಸಿಕೊಡಲು ಯಾವುದೇ ಶುಭ ಮುಹೂರ್ತ ಇಲ್ಲದ ಕಾರಣ ಸದ್ಯಕ್ಕೆ ಆಗುವುದಿಲ್ಲ ಎಂದು ಸಬೂಬು ಹೇಳಿ ಕೃಷ್ಣ ಅವರನ್ನು ಕಳಿಸಿದ್ದಾರೆ.
ಅತ್ತೆ ಮನೆಯವರು ಕಾರಣಗಳನ್ನು ಕೇಳಿ ತೀವ್ರವಾಗಿ ಕುಪಿತಗೊಂಡಿದ್ದ ಕೃಷ್ಣ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿಲಾಯಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಪೂಜಾ ಕುಮಾರಿ ಪ್ರಕರಣ ಸಂಬಂಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ.ಭಾರತ ದಂಡ ಸಂಹಿತೆ(IPC Section) 306ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆತ್ಮಹತ್ಯೆಗೆ ಮೂಲ ಕಾರಣವನ್ನು ಹುಡುಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
