ನವದೆಹಲಿ:ಸತತ ಪ್ರಯತ್ನವು ಜೀವನದ ಯಶಸ್ಸಿಗೆ ಒಂದು ಸಣ್ಣ ಸೂತ್ರವಾಗಿದೆ. ಈ ತತ್ವವನ್ನು ಪಾಲಿಸಿ ಸತತ ಪ್ರಯತ್ನದಲ್ಲಿ ತೊಡಗಿ ಯಶಸ್ಸು ಕಂಡವರು ಇತರರಿಗೆ ಸ್ಫೂರ್ತಿಯಾಗುತ್ತಾರೆ. ಹೀಗೆ ನಾವು ಇಂದು ಹೇಳುತ್ತಿರುವ ವ್ಯಕ್ತಿಯ ಕಥೆ ಸಣ್ಣ ಒಂದು ಕೆಲಸದಿಂದ ಯಶಸ್ಸು ಕಂಡು ಉದ್ಯಮಿಯಾಗಿ ಹೊರ ಹೊಮ್ಮಿದ ಯಶಶ್ವಿ ಸಾಧಕ.
ಪುಷ್ಪೇಂದ್ರ ಕುಮಾರ್ ಎನ್ನುವ ವ್ಯಕ್ತಿ ಪುಸ್ತಕ ಕಾರ್ಖಾನೆಯ ಮಾಲೀಕರು ತಮ್ಮ ಕಾರ್ಖಾನೆಯನ್ನು ಪ್ರಾರಂಭಿಸುವ ಮೊದಲು ಅನೇಕ ಕಠಿಣ ಸವಾಲುಗಳನ್ನು ಎದುರಿಸಿದರು. ಬೈಸಿಕಲ್ ನಲ್ಲಿ ಪುಸ್ತಕ ಮಾರುತ್ತಲೇ ಪುಸ್ತಕ ಕಾರ್ಖಾನೆಯ ಮಾಲೀಕರಾದರು. ಪುಷ್ಪೇಂದ್ರ ಕುಮಾರ್ ಅವರ ಯಶಸ್ಸಿನ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ….
ನಯಾ ಬಜಾರ್ ಗ್ರಾಮದ ಪುಷ್ಪೇಂದ್ರ ಆರಂಭದಲ್ಲಿ ತಮ್ಮ ಸೈಕಲ್‌ನಲ್ಲಿ ನೋಟ್‌ಬುಕ್ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಈ ವೃತ್ತಿ ಆರಂಭಿಸುವ ಮುನ್ನ ಕುಟುಂಬದ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ. ಕುಟುಂಬ ಜೀವನ ನಿರ್ವಹಣೆಗೆ ಪರದಾಡುತ್ತಿದ್ದ ಸಮಯದಲ್ಲಿ ತಂದೆಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡತೊಡಗಿತು. ಪುಷ್ಪೇಂದ್ರ ಅವರು ಇಬ್ಬರು ಸಹೋದರಿಯರು, ಮೂವರು ಸಹೋದರರು ಮತ್ತು ಪೋಷಕರೊಂದಿಗೆ ಕುಟುಂಬದಲ್ಲಿ ಹಿರಿಯರಾಗಿದ್ದರು. ಕೌಟುಂಬಿಕ ಕಾರಣಗಳಿಂದ ಅವರು ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಪುಷ್ಪೇಂದ್ರ ಅವರು ತಮ್ಮ ಸೈಕಲ್ ನಲ್ಲಿ ಅಂಗಡಿಗಳಿಗೆ ನೋಟ್ ಬುಕ್ ಗಳನ್ನು ಸರಬರಾಜು ಮಾಡುತ್ತಿದ್ದರು. ಕ್ರಮೇಣ ಅವರ ಕುಟುಂಬದ ಜೀವನಾಧಾರವಾಯಿತು. ನಂತರ ಸ್ನೇಹಿತರೊಬ್ಬರ ಸಲಹೆ ಮೇರೆಗೆ ಸ್ವಂತ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಿದರು.
ನಯಾ ಬಜಾರ್ ಗ್ರಾಮದ ಪುಷ್ಪೇಂದ್ರ ಕುಮಾರ್ ಪ್ರಸ್ತುತ ಯಶಸ್ವಿ ಉದ್ಯಮಿ. ಪುಷ್ಪೇಂದ್ರ ಅವರು ನೋಟ್‌ಬುಕ್ ಕಾರ್ಖಾನೆಯನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಹಲವಾರು ಜನರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಇವರ ಕಾರ್ಖಾನೆಯಲ್ಲಿ ತಯಾರಾದ ನೋಟ್‌ಬುಕ್‌ಗಳು ಉತ್ತರ ಪ್ರದೇಶ ಮತ್ತು ಬಿಹಾರದ ಹಲವು ಜಿಲ್ಲೆಗಳಿಗೆ ಪೂರೈಕೆಯಾಗುತ್ತಿವೆ. ಪುಸ್ತಕ ಕಾರ್ಖಾನೆಯ ಮೂಲಕ ವಾರ್ಷಿಕ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ಆದಾಯ ಗಳಿಸುತ್ತಾರೆ.
ಉದ್ಯಮ ಆರಂಭಿಸಲು ರೂ.2 ಲಕ್ಷ ಸಾಲ ಪಡೆದು ಸಣ್ಣ ಯಂತ್ರ ಅಳವಡಿಸಿದ್ದರು. ಸ್ವಲ್ಪ ಸಮಯದಲ್ಲೇ ಅವರ ನೋಟ್ ಬುಕ್ ವ್ಯಾಪಾರ ಶುರುವಾಯಿತು. ಫ್ಯಾಕ್ಟರಿಯನ್ನು ನಡೆಸುವುದರಲ್ಲಿ ಇಡೀ ಕುಟುಂಬ ಅವರಿಗೆ ಬೆಂಬಲ ನೀಡುತ್ತದೆ. ಇದು ಪುಸ್ತಕ ಕಾರ್ಖಾನೆಯನ್ನು ಯಶಸ್ವಿಗೊಳಿಸುವುದಲ್ಲದೆ ಪ್ರತಿ ವರ್ಷ ಗಮನಾರ್ಹ ಲಾಭವನ್ನು ನೀಡುತ್ತಿದೆ.
ನಿಮ್ಮ ಕಣ್ಣಿನ ದೃಷ್ಟಿ ಮಸುಕಾಗ್ತಿದ್ಯಾ? ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ…

ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು;ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋದ ಕಲಬುರಗಿಯ ಹಳ್ಳಿ ಮೇಷ್ಟ್ರು

ಐಶ್ವರ್ಯಾ ರೈ ಜತೆ ರೊಮ್ಯಾನ್ಸ್ ಮಾಡಿದ್ದ ನಟ ಅಬ್ಬಾಸ್ ಮಗಳು ಎಷ್ಟು ಸುಂದರವಾಗಿದ್ದಾಳೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 19 =
Remember me
