ಅರರಿಯಾ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಜನವರಿ 22ರಂದು ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ 21 ವರ್ಷದ ವ್ಯಕ್ತಿಯನ್ನು ಬಿಹಾರದ ಅರರಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ:ಮೂಗುತಿ ಸುಂದರಿ ಸಾನಿಯಾ ಬಗ್ಗೆ ವರ್ಷದ ಹಿಂದೆಯೇ ಫ್ರೆಂಡ್ಸ್​ ಹೇಳಿದ್ದ ಮಾತು ಕೊನೆಗೂ ನಿಜವಾಯ್ತು​!
ಈತ ಶನಿವಾರ ತಡರಾತ್ರಿ ಪಲಾಸಿ ಪೊಲೀಸ್​ ಠಾಣೆ ವ್ಯಾಪ್ತಿಯ ಬಲುವಾ ಕಲಿಯಗಂಜ್​ನಲ್ಲಿರುವ ಅವರ ನಿವಾಸದಿಂದ ಕರೆ ಮಾಡಿದ್ದ ಇಂತೆಖಾಬ್‌ ಆಲಂ (21) ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅರಾರಿಯಾದ ಪೊಲೀಸ್​ ವರಿಷ್ಠಾಧಿಕಾರಿ ಅಶೋಕ್​ ಕುಮಾರ್​ ಸಿಂಗ್​ ತಿಳಿಸಿದ್ದಾರೆ.
ಈತ ಜನವರಿ 19ರಂದು 112 ತುರ್ತು ಸಹಾಯ ಸಂಖ್ಯೆಗೆ ಕರೆ ಮಾಡಿ, ‘ನನ್ನ ಹೆಸರು ಛೋಟಾ ಶಕೀಲ್‌. ನಾನು ದಾವೂದ್ ಇಬ್ರಾಹಿಂ ಸಹಚರ. ಜ.22ರಂದು ರಾಮಮಂದಿರವನ್ನು ಸ್ಫೋಟಿಸುತ್ತೇನೆ’ ಎಂದು ಹೇಳಿದ್ದ ಎಂದು ಎಸ್ಪಿ ಅಶೋಕ್ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.
ಈತನಿಗೆ ಅಪರಾಧ ಹಿನ್ನೆಲೆ ಇಲ್ಲ. ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಆದರೆ ಸೂಕ್ಷ್ಮ ವಿಷಯವಾಗಿರುವ ಕಾರಣ ಪ್ರಕರಣ ದಾಖಲಿಸಿಕೊಂಡು, ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಟೆಸ್ಟ್ ಶತಕ: ರಾಮಲಲ್ಲಾಗೆ ಅರ್ಪಿಸಿದ ಭರತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + six =
Remember me
