ನವದೆಹಲಿ:ಚಿನ್ನ ಮತ್ತು ವಜ್ರಕ್ಕಿಂತ ಹೆಚ್ಚು ಬೆಲೆಬಾಳುವ ಅತ್ಯಮೂಲ್ಯವಾದ 50 ಗ್ರಾಂ ತೂಕದ ವಿಕಿರಣಶೀಲ ಕ್ಯಾಲಿಫೋರ್ನಿಯಂ ಕಲ್ಲನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 850 ಕೋಟಿ ರೂ. ಆಗಲಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಹೇಳುತ್ತಿದ್ದು, ಎಂಥವರನ್ನೂ ನಿಬ್ಬೆರಗಾಗಿಸುತ್ತಿದೆ.
ಇದನ್ನೂ ಓದಿ:ಮಾಲ್ಡೀವ್ಸ್ ಅಧ್ಯಕ್ಷ ಮತ್ತೆ ಯೂಟರ್ನ್​..ಭಾರತದೊಂದಿಗೆ ಸಂಬಂಧವೃದ್ಧಿಗೆ ಬದ್ಧ ಎಂದ ಮುಯಿಜ್ಜು!
ಬಿಹಾರ ಎಸ್‌ಟಿಎಫ್, ಸ್ಪೆಷಲ್ ಆಪರೇಷನ್ ಗ್ರೂಪ್ 7, ಗೋಪಾಲ್‌ಗಂಜ್ ಡಿಐಯು, ಕುಚೈಕೋಟ್ ಪೊಲೀಸ್ ಠಾಣೆ ಜಂಟಿ ತನಿಖೆಯ ಭಾಗವಾಗಿ 50 ಗ್ರಾಂ ಅತ್ಯಮೂಲ್ಯವಾದ ವಿಕಿರಣಶೀಲ ವಸ್ತು ಕ್ಯಾಲಿಫೋರ್ನಿಯಂ ಅನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 850 ಕೋಟಿ ರೂ. ಆಗಲಿದೆ ಎನ್ನುತ್ತಾರೆ ಹಿರಿಯ ಪೊಲೀಸ್​ ಅಧಿಕಾರಿಗಳು. ಈ ಹಿನ್ನೆಲೆಯಲ್ಲಿ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಂದು ಗ್ರಾಂ ಕ್ಯಾಲಿಫೋರ್ನಿಯಂನ ಬೆಲೆ 17 ಕೋಟಿ ರೂಪಾಯಿಯಾಗಿದೆ. ವಶಪಡಿಸಿಕೊಂಡಿರುವ ಕ್ಯಾಲಿಫೋರ್ನಿಯಾದ ಮೌಲ್ಯ ಸುಮಾರು 850 ಕೋಟಿ ರೂ.ಗಳಾಗಲಿದೆ. ಇದನ್ನು ಮುಖ್ಯವಾಗಿ ಪರಮಾಣು ಶಕ್ತಿಯ ಉತ್ಪಾದನೆಯಲ್ಲಿ ಮತ್ತು ಮೆದುಳಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಮೂವರು ಕಳ್ಳಸಾಗಾಣಿಕೆದಾರರಲ್ಲಿ ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ತಮ್ಕುಹಿ ರಾಮ್ ಪೊಲೀಸ್ ಠಾಣೆಯ ಪರ್ಸೌನಿ ಗ್ರಾಮದ ಛೋಟಾಲಾಲ್ ಪ್ರಸಾದ್ , ಗೋಪಾಲಗಂಜ್‌ ಗೆ ಸೇರಿದ ಚಂದನ್ ಗುಪ್ತಾ ಮತ್ತು ಚಂದನ್ ರಾಮ್ ಆಗಿದ್ದಾರೆ. ಈ ಮೂವರು ಹಲವು ತಿಂಗಳುಗಳಿಂದ ಈ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ವರದಿಯಾಗಿದೆ. ಈ ವಿಷಯ ಪೊಲೀಸರಿಗೆ ತಿಳಿದಿದೆ. ಕೂಡಲೇ ಎಚ್ಚೆತ್ತ ಎಸ್‌ಐಟಿ, ಎಸ್‌ಒಜಿ, ಡಿಐಯು ತಂಡ, ಸ್ಥಳೀಯ ಕುಚೈಕೋಟ್ ಠಾಣೆ ಪೊಲೀಸರು ತಪಾಸಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದ್ದಾರೆ.
ಕ್ಯಾಲಿಫೋರ್ನಿಯಂ ಮಾದರಿಯನ್ನು ಮದ್ರಾಸ್ ಐಐಟಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಪೊಲೀಸರು ಅಣುಶಕ್ತಿ ಇಲಾಖೆಯನ್ನು ಸಹ ಸಂಪರ್ಕಿಸುವ ಪ್ರಕ್ರಿಯೆಯಲ್ಲಿದ್ದಾರೆ.
ವಾರಕ್ಕೇ ಬಣ್ಣ ಕಳೆದುಕೊಂಡ ಒಲಂಪಿಕ್​ ಪದಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × one =
Remember me
