ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಮುಂಬೈಗೆ ಬಂದಿರುವ ಬಿಹಾರದ ನಾಲ್ವರು ಪೊಲೀಸರ ತಂಡ ಐಷಾರಾಮಿ ಬಿಎಂಡಬ್ಲ್ಯು, ಜಾಗ್ವಾರ್​ ಕಾರುಗಳಲ್ಲಿ ಓಡಾಡುತ್ತಿರುವುದು ಹಲವು ಹುಬ್ಬುಗಳನ್ನು ಮೇಲೇರುವಂತೆ ಮಾಡಿದೆ.
ಪ್ರಕರಣದ ತನಿಖೆಯಲ್ಲಿ ಬಿಹಾರ ಪೊಲೀಸರ ತಂಡಕ್ಕೆ ಮುಂಬೈ ಪೊಲೀಸರಿಂದ ಹೇಳಿಕೊಳ್ಳುವಂಥ ಸಹಕಾರ ದೊರೆಯುತ್ತಿಲ್ಲ. ಆದರೂ ಅವರು ತನಿಖೆಯನ್ನು ಮೊಟಕುಗೊಳಿಸಿ ಹಿಂದಿರುಗಲು ನಿರಾಕರಿಸುತ್ತಿದ್ದಾರೆ. ಕೆಲವೊಮ್ಮೆ ಆಟೋರಿಕ್ಷಾ ಇಲ್ಲವೇ ಮೋಟಾರ್​ಸೈಕಲ್​ಗಳನ್ನು ಬಳಸುತ್ತಿರುವ ಅವರು, ಹೆಚ್ಚಿನ ಭಾಗ ಐಷಾರಾಮಿ ಕಾರುಗಳನ್ನೇ ಬಳಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಸುಶಾಂತ್​ ಸಿಂಗ್​ ರಜಪೂತ್​ ಅವರ ಬ್ಯಾಂಕ್​ ಖಾತೆಯ ವಿವರ ಪಡೆದುಕೊಳ್ಳಲು ಬಾಂದ್ರಾದಲ್ಲಿರುವ ಕೋಟಕ್​ ಮಹೀಂದ್ರಾ ಬ್ಯಾಂಕ್​ಗೆ ಗುರುವಾರ ಬಂದಿದ್ದ ಬಿಹಾರ ಪೊಲೀಸರ ತಂಡ ಬಿಎಂಡಬ್ಲ್ಯು ಕಾರ್​ನಲ್ಲಿ ಬಂದಿತ್ತು. ಇವರು ಐಷಾರಾಮಿ ಕಾರಿನಲ್ಲಿ ಬ್ಯಾಂಕ್​ಗೆ ಬಂದ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವಂತೆ, ಆ ಕಾರನ್ನು ಬಿಟ್ಟು ಆಟೋರಿಕ್ಷಾದಲ್ಲಿ ಮರಳಿದರು ಎನ್ನಲಾಗಿದೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಅನ್​ಲಿಮಿಟೆಡ್​ ಆಫರ್​; ವಿಧಾನಸಭೆ ಅಧಿವೇಶನ ನಿಗದಿ ಬಳಿಕ ಬೆಲೆಯಲ್ಲಿ ಭಾರಿ ಏರಿಕೆ
ಸುಶಾಂತ್​ ಅವರ ಮಾಜಿ ಗರ್ಲ್​ಫ್ರೆಂಡ್​ ಅಂಕಿತಾ ಲೋಖಂಡೆ ಅವರ ಮನೆಗೆ ಗುರುವಾರ ಸಂಜೆ ತೆರಳುವಾಗ ಬಿಹಾರ ಪೊಲೀಸರ ತಂಡ ಐಷಾರಾಮಿ ಜಾಗ್ವಾರ್​ ಕಾರಿನಲ್ಲಿ ತೆರಳಿತ್ತು.
ಬುಧವಾರದಂದು ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯ ವಿವರ ಪಡೆದುಕೊಳ್ಳಲು ಬಿಹಾರ ಪೊಲೀಸರ ತಂಡ ಮುಂಬೈ ಕ್ರೈಂ ಬ್ರ್ಯಾಂಚ್​ ಅಧಿಕಾರಿಗಳನ್ನು ಭೇಟಿಯಾಗಲು ಬಂದಿತ್ತು. ಆದರೆ, ಹಿರಿಯ ಅಧಿಕಾರಿಗಳು ಇವರನ್ನು ಭೇಟಿಯಾಗಲು ನಿರಾಕರಿಸಿದರು. ಆ ಸಂದರ್ಭದಲ್ಲಿ ಸುದ್ದಿಗಾರರು ಇವರನ್ನು ಸುತ್ತುವರಿದಿದ್ದರು. ಅವರಿಂದ ತಪ್ಪಿಸಿಕೊಂಡು ಅವರೆಲ್ಲರೂ ಮೋಟಾರ್​ಸೈಕಲ್​ನಲ್ಲಿ ಪರಾರಿಯಾಗಿದ್ದರು.
ಸುಶಾಂತ್​ ಜತೆ ಲಿವಿನ್​ ರಿಲೇಷನ್​ಶಿಪ್​ನಲ್ಲಿದ್ದ ರಿಯಾ ಚಕ್ರವರ್ತಿ ಸುಶಾಂತ್​ ಅವರ ಬ್ಯಾಂಕ್​ ಖಾತೆಯಿಂದ 15 ಕೋಟಿ ರೂ.ಅನ್ನು ಅಕ್ರಮವಾಗಿ ತಮಗೆ ಬೇಕಾದವರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಅವರು ಬಿಹಾರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ವಿಚಾರಣೆಗಾಗಿ ಬಿಹಾರ ಪೊಲೀಸರು ಮುಂಬೈಗೆ ಬಂದಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ಗೆ ಲೀಗಲ್ ನೋಟಿಸ್ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
